BBMP
Loading ...

Muralikrishna

Greater Bengaluru News9: ಹಿರಿಯ ಪತ್ರಕರ್ತ ಮುರಳಿಕೃಷ್ಣ ಅವರಿಗೆ ಪ್ರತಿಷ್ಠಿತ ಗಾಣಿಗ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಇತ್ತೀಚಿಗೆ ಸದದತ್ತಿಯ ಜ್ಯೋತಿ ಬ್ಯಾಂಕ್ ಸಭಾಂಗಣದಲ್ಲಿ ಕರ್ನಾಟಕ ಗಾಣಿಗರ ಏಕತಾ ಸಮಿತಿ ಮತ್ತು ಜ್ಯೋತಿ ಅರ್ಬನ್​ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಸಹಯೋಗದಲ್ಲಿ ನಡೆದ ಅದ್ದೂರಿ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷರು, ರಾಜಕೀಯ ರತ್ನ ಪತ್ರಿಕೆ ಸಂಪಾದಕರು – ಗರುಡ ವಾಹಿನಿ ಪಾಕ್ಷಿಕ ಪತ್ರಿಕೆ ಸಹ ಸಂಪಾದಕರಾದ ಹಿರಿಯ ಪತ್ರಕರ್ತ ಕನ್ನಡದ ಕಂದ ಬಿ.ಕೆ.ಮುರಳಿಕೃಷ್ಣ ಅವರಿಗೆ ” ಗಾಣಿಗ ರತ್ನ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದರು.

ಡಾ. ವೈ ಬಿ ಕಡಗೋಳ ಸಂಪಾದಕತ್ವದ ಗಾಣಿಗ ಸಮಾಜದ ನೌಕರರ ಮಾಹಿತಿಗಾಗಿ ಗಾಣಕುಲ ಸಿಂಚನ ಪುಸ್ತಕವನ್ನು ಮುರಳಿಕೃಷ್ಣ ಲೋಕಾರ್ಪಣೆ ಗೊಳಿಸಿದರು. ಇದೇ ಸಂದರ್ಭದಲ್ಲಿ ಧಾರವಾಡದ ತಿಪ್ಪಣ್ಣ ಮಜ್ಜಗಿ, ಜ್ಯೋತಿ ಬ್ಯಾಂಕ್ ಅಧ್ಯಕ್ಷರಾದ ಮಹಾಬಲೇಶ್ವರ ಸುರದಗುಡಿ, ಸಾಹಿತಿಗಳಾದ ಡಾ. ವೈ ಬಿ ಕಡಕೋಳ,ಕೆ.ಎ.ಎಸ್.ಅಧಿಕಾರಿಗಳಾದ ಮಲ್ಲಿಕಾರ್ಜುನ ತೊದಲಬಾಗಿ.ಅಶೋಕ್ ನವಲಗುಂದ, ರಮೇಶ್ ಉಟಗಿ, ಆರ್.ರಮಾ, ಮೀನಾಕ್ಷಿ ಉಟಗಿ, ಡಾ. ಮೇಘನಾ ಜಿ. ಸೇರಿ ಅನೇಕ ಗಾಣಿಗ ಸಮಾಜದ ಮುಖಂಡರು ಉಪಸ್ಥಿತರಿದ್ದರು ಮತ್ತು ಶಿಕ್ಷಣ ಸಾಹಿತಿಗಳು, ಸಮಾಜದ ಮುಖಂಡರು ಆದ ಎಲ್​,ಐ, ಲಕ್ಕಮ್ಮನವರ ಆಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿದ್ದರು.

Leave a Reply

Your email address will not be published. Required fields are marked *