Greater Bengaluru News9 : ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ದೇವನಹಳ್ಳಿ ಕೆಂಪೇಗೌಡ ಏರ್ ಪೋರ್ಟ್ನಲ್ಲಿ ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಸುಪ್ರೀಂ ಕೋರ್ಟ್ ಜಾಮೀನು ಅರ್ಜಿ ವಜಾ ಆದ ಕೂಡಲೇ ಲುಕ್ ಔಟ್ ನೋಟಿಸ್ ಜಾರಿಯಾದ್ದರಿಂದ ಬಸವರಾಜ್ ಶರಣಾಗತಿಗೆ ಹೋಗಲು ಮುಂದಾಗುವ ಮುನ್ನ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಬೆಂಗಳೂರು–ಗುಜರಾತ್ ಪ್ರಯಾಣದಲ್ಲಿದ್ದ ಬಸವರಾಜ್ ಬಂಧನಕ್ಕೆ ಐದು ಪೊಲೀಸ್ ತಂಡಗಳು ವಿಶೇಷ ಶೋಧ ನಡೆಸಿದವು. ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಸಾರ್ವಜನಿಕರಲ್ಲಿ ಹೆಚ್ಚು ಚರ್ಚೆಯನ್ನು ಹುಟ್ಟಿಸಿದೆ.


