BBMP
Loading ...

State budget

Greater Bengalujru News9 : 2026-27ನೇ ಕರ್ನಾಟಕ ರಾಜ್ಯ ಬಜೆಟ್​ಗೆ ಮುಹೂರ್ತ ಫಿಕ್ಸ್​​ ಆಗಿದೆ. ಅಧಿಕಾರ ಹಂಚಿಕೆ ಚರ್ಚೆ ನಡುವೆ ಬಜೆಟ್ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದೆ.

ಮುಂದಿನ ತಿಂಗಳು ಮಾರ್ಚ್ 6 ರಿಂದ ಮಾರ್ಚ್ 27ರವರೆಗೆ ಬಜೆಟ್ ಅಧಿವೇಶನ ನಡೆಯಲಿದೆ ಎಂದು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಮಾರ್ಚ್‌ 6 ರಂದು ಸಿಎಂ‌ ಸಿದ್ದರಾಮಯ್ಯ ಅವರು ತಮ್ಮ 17ನೇ ದಾಖಲೆಯ ಬಜೆಟ್​ನ್ನು ಮಂಡಿಸಲಿದ್ದಾರೆ.

ರಾಜ್ಯ ಹಣಕಾಸು ಮಂತ್ರಿಯಾಗಿರುವ ಸಿಎಂ ಸಿದ್ದರಾಮಯ್ಯ ಅವರು ಸಾಲು ಸಾಲು ಬಜೆಟ್​​​​ ಪೂರ್ವ ಸಿದ್ಧತಾ ಸಭೆಗಳಲ್ಲಿ ಸಕ್ರಿಯರಾಗಿದ್ದಾರೆ.

Leave a Reply

Your email address will not be published. Required fields are marked *