BBMP
Loading ...

BESCOM 1

Greater Bengaluru News9 : ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದ ಮೇರೆಗೆ ‘ಬೆಸ್ಕಾಂ’ ಸಿವಿಲ್‌ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆರ್.ಎಚ್. ಅರ್ಜುನ್ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿದ್ದಾರೆ.

ಮೂಲತಃ ಶಿವಮೊಗ್ಗದ ಅರ್ಜುನ್ ಅವರು ‘ಬೆಸ್ಕಾಂ’ ದಾವಣಗೆರೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿವಮೊಗ್ಗದ ಗೋಪಾಳದದಲ್ಲಿರುವ‌ ವಾಣಿಜ್ಯ ಸಂಕೀರ್ಣ, ರಿಪ್ಪನ್‌ಪೇಟೆಯ ತಳಲೆ ಬಳಿಯ ತೋಟದ ಮನೆ, ದಾವಣಗೆರೆಯ ನಿಟುವಳ್ಳಿ ಬಡಾವಣೆಯ ಕೊಠಡಿ ಹಾಗೂ ‘ಬೆಸ್ಕಾಂ’ ಕಚೇರಿಯ ಮೇಲೆ‌ ದಾವಣಗೆರೆ ಮತ್ತು ಶಿವಮೊಗ್ಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

‘ಅರ್ಜುನ್ ಅವರ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಸಿದ ದೂರು ಬಂದಿತ್ತು. ಮನೆ, ಕಚೇರಿ ಸೇರಿದಂತೆ ಹಲವೆಡೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದೇವೆ’ ಎಂದು ಲೊಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್.ಕೌಲಾಪುರೆ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *