Greater Bengaluru News9: ಕೇಂದ್ರ ವಿದ್ಯುತ್ ಸಚಿವಾಲಯದ 14ನೇ ವಾರ್ಷಿಕ ಸಮಗ್ರ ರೇಟಿಂಗ್ ಮತ್ತು ರ್ಯಾಂಕಿಂಗ್ ವರದಿಯಲ್ಲಿ (-C) ಶ್ರೇಣಿ ಪಡೆದು ಬೆಂಗಳೂರು ವಿದ್ಯುತ್ ಸರಬರಾಜು ಸಂಸ್ಥೆ (BESCOM) ‘ರೆಡ್ ಕಾರ್ಡ್’ ಪಡೆದಿದೆ.
ಬೆಸ್ಕಾಂ, ಹೆಸ್ಕಾಂ (ಹುಬ್ಬಳ್ಳಿ), ಮೆಸ್ಕಾಂ (ಮಂಗಳೂರು), ಗೆಸ್ಕಾಂ (ಕಲಬುರಗಿ) ಮತ್ತು ಸೆಸ್ಕ್ (ಮೈಸೂರು) ಯಾವ ಸಂಸ್ಥೆಯೂ ದೇಶದ ಟಾಪ್ 20 ವಿದ್ಯುತ್ ವಿತರಣಾ ಸಂಸ್ಥೆಗಳ ಪಟ್ಟಿಗೆ ಸೇರಿಲ್ಲ. ಮೆಸ್ಕಾಂ ಮಾತ್ರ 56.44 ಅಂಕಗಳೊಂದಿಗೆ 26ನೇ ಸ್ಥಾನ ಪಡೆದಿದ್ದು, ‘B’ ಶ್ರೇಣಿ ಪಡೆದಿದೆ.
ಈ ಮೌಲ್ಯಮಾಪನದಲ್ಲಿ ದೇಶದ 54 ರಾಜ್ಯ ಮತ್ತು ಖಾಸಗಿ ವಿದ್ಯುತ್ ವಿತರಣಾ ಸಂಸ್ಥೆಗಳನ್ನು ಪರಿಶೀಲಿಸಲಾಗಿದ್ದು, ವಿದ್ಯುತ್ ವಿತರಣಾ ಸಂಸ್ಥೆಗಳಿಗೆ A+ (6 ಸ್ಟಾರ್) – ಅತ್ಯುತ್ತಮ, A (5 ಸ್ಟಾರ್), B (4 ಸ್ಟಾರ್, B- (3 ಸ್ಟಾರ್), C (2 ಸ್ಟಾರ್), -C (1 ಸ್ಟಾರ್) ಎಂಬ ಶ್ರೇಣಿಗಳನ್ನು ನೀಡಲಾಗಿದೆ.
ಮೌಲ್ಯಮಾಪನವು 15 ಕಾರ್ಯಕ್ಷಮತಾ ಸೂಚಕಗಳು ಹಾಗೂ 9 ಪ್ರೋತ್ಸಾಹ ಅಂಶಗಳ ಆಧಾರದಲ್ಲಿ 100 ಅಂಕಗಳ ಮೂಲಕ ನಡೆಸಲಾಗಿದೆ.


