Greater Bengaluru News9 : ಈ ವಾರದ ಅಂತ್ಯದಲ್ಲಿ ಅಂದ್ರೆ ಶುಕ್ರವಾರ ಹಾಗೂ ಶನಿವಾರ ನಗರದ ಹಲವೆಡೆ ವಿದ್ಯುತ್ ವ್ಯತ್ಯಯ ಆಗಲಿದ್ದು, ಜನಸಾಮಾನ್ಯರಿಗೆ ಸಮಸ್ಯೆ ಉಂಟಾಗಲಿದೆ. ಹೀಗಾಗಿ ಬೆಸ್ಕಾಂ ಮೊದಲೇ ವಿದ್ಯುತ್ ವ್ಯತ್ಯದ ಮುನ್ಸೂಚನೆ ಕೊಟ್ಟಿದೆ.
ಶುಕ್ರವಾರ ಜಾಲಹಳ್ಳಿ ವಿಭಾಗದದಲ್ಲಿ ಬೆಳಗ್ಗೆ 10 ರಿಂದ 5 ಗಂಟೆವರೆಗೆ ಹಾಗೂ ಶನಿವಾರ 10 ರಿಂದ 5 ಗಂಟೆಯವರೆಗೆ ರಾಜಾಜಿನಗರ ವಿಭಾಗದ 66/11ಕೆ.ವಿ ವಿಜಯನಗರ ಉಪಕೇಂದ್ರ ವ್ಯಾಪ್ತಿಯಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಹಿನ್ನಲೆ ಪವರ್ ಕಟ್ ಆಗಲಿದೆ.
ಶುಕ್ರವಾರ ಎಲ್ಲೆಲ್ಲಿ ಕರೆಂಟ್ ಕಟ್ ?
“ವಿನಾಯಕ ನಗರ, ವಿಕಾಸ್ ನಗರ, ಶೋಭಾ ಅಪಾರ್ಟ್ ಮೆಂಟ್, 8 ನೇ ಮೈಲ್ ರಸ್ತೆ, ರಾಮಯ್ಯ ಲೇಔಟ್, ಹಾವನೂರು ಎಕ್ಸ್ಟೆನ್. ನಾರಾಯಣ ಲೇಔಟ್, ವಿಡಿಯಾ ಸ್ಕೂಲ್, ಕುವೆಂಪು ನಗರ, ವಿಡಿಯಾ ಬಸ್ ಸ್ಟಾಪ್, ರಿಲಯನ್ಸ್ ಫ್ರೆಶ್, ಮುನಿಕೊಂಡಪ್ಪ ಲೇಔಟ್, ಅಶೋಕ್ ನಗರ, ವಿದ್ಯಾ ನಗರ, ಡಿಫೆನ್ಸ್ ಕಾಲೋನಿ, ಹಾವನೂರು ಎಕ್ಸ್, ಮಂಜುನಾಥ್ ನಗರ, ಮಹಾಲಕ್ಷ್ಮಿ ನಗರ, ಕಾಟರಾಯ ನಗರ, ಸೋಪ್ ಫ್ಯಾಕ್ಟರಿ ಲೇಔಟ್, ವಿಜಯಲಕ್ಷ್ಮಿ ಲೇಔಟ್, ಅಂದಾನಪ್ಪ ಲೇಔಟ್ , ಬಿಟಿಎಸ್ ಲೇಔಟ್, ಸಿದ್ದೇಶ್ವರ ಲೇಔಟ್, ಸಾಸುವೆಘಟ್ಟ, ಸೋಲದೇವನಹಳ್ಳಿಯ ಭಾಗಶಃ, ತರಬನಹಳ್ಳಿ ಮುಖ್ಯ ರಸ್ತೆ, , ಹಾವನೂರು ಎಕ್ಸ್ಟಿಎನ್., ಹೆಸರಘಟ್ಟ ಮುಖ್ಯ ರಸ್ತೆ ಭಾಗದಲ್ಲಿ ವಿದ್ಯುತ್ ಇರುವುದಿಲ್ಲ.
ಶನಿವಾರದ ವಿದ್ಯುತ್ ವ್ಯತ್ಯಯದ ಸ್ಥಳ
ಬಸವೇಶ್ವರ ನಗರ, ವಿಜಯನಗರ, ಗೋವಿಂದರಾಜ ನಗರ, ಕಾಮಾಕ್ಷಿಪಾಳ್ಯ, ಆರ್‌ಪಿಸಿ ಲೇಔಟ್, ಬಿನ್ನಿ ಲೇಔಟ್, ಪ್ರಶಾಂತ್ ನಗರ, ಹೊಸಹಳ್ಳಿ ವಿಜಯನಗರ, ಆರ್‌ಪಿಸಿ ಲೇಔಟ್, ಸರ್ವಿಸ್ ರಸ್ತೆ, ವಿಜಯನಗರ 7ನೇ ಮುಖ್ಯ ರಸ್ತೆಯಿಂದ 13ನೇ ಮುಖ್ಯ ರಸ್ತೆ, ಮೊದಲ ಹಂತ ತಿಮ್ಮೇನಹಳ್ಳಿ, ಎಂಸಿ ಲೇಔಟ್‌ನ ಒಂದು ಭಾಗ, ಬಿನ್ನಿ ಲೇಔಟ್, ಮಾರೇನಹಳ್ಳಿ ಲೇಔಟ್, ವಿನಾಯಕ ಲೇಔಟ್‌ನ ಒಂದು ಭಾಗ, ಪಿಸಿ ಕೈಗಾರಿಕಾ ಪ್ರದೇಶದಲ್ಲಿ ಪವರ್ ಕಟ್ ಆಗಲಿದೆ.
ಅಲ್ಲದೆ, ಕಾವೇರಿಪುರ, ರಂಗನಾಥಪುರ, ಕೆಸಿಜಿ ಕೈಗಾರಿಕಾ ಪ್ರದೇಶ, ನಂಜಪ್ಪ ಕೈಗಾರಿಕಾ ಎಸ್ಟೇಟ್, ಸುನ್ನದಗೋಡು, ಸೆಲ್ವಂ ಕೈಗಾರಿಕಾ ಎಸ್ಟೇಟ್, ಬಲ್ಲಾಯನ ಕೆರೆ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ಕಾವೇರಿಪುರ 1ನೇ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್, 5ನೇ ಬ್ಲಾಕ್, 6ನೇ ಬ್ಲಾಕ್, 7ನೇ ಬ್ಲಾಕ್, 8ನೇ ಬ್ಲಾಕ್, ನಾಗರಭಾವಿ 11ನೇ ಬ್ಲಾಕ್, ಕೆಎಚ್‌ಬಿ ಕಾಲೋನಿ, ಎಚ್‌ವಿಆರ್ ಲೇಔಟ್, ಸಿಂಡಿಕೇಟ್ ಬ್ಯಾಂಕ್ ಕಾಲೋನಿ ಮತ್ತು ಸುತ್ತಮುತ್ತಲಿನ ಪ್ರದೇಶ, ಸಿದ್ದಯ್ಯ ಪುರಾಣಿಕ ರಸ್ತೆ, ಪಾಪಯ್ಯ ಗಾರ್ಡನ್ ಕೆಎಚ್‌ಬಿ ಕಾಲೋನಿ, ಕೆಎಚ್‌ಬಿ ಕಾಲೋನಿ, ಮಾಗಡಿ ಮುಖ್ಯ ರಸ್ತೆ, ಅಗ್ರಹಾರ ದಸರಾ ಹಳ್ಳಿಯ ಒಂದು ಭಾಗದಲ್ಲಿ ವಿದ್ಯುತ್ ಸಮಸ್ಯೆ ಅಗಲಿದೆ ಎಂದು ಬೆಸ್ಕಾಂ ಅಲರ್ಟ್ ನೀಡಿದೆ.


