BBMP
Loading ...

images (3)

Greater Bangaluru news9 : ದಕ್ಷಿಣ ಭಾರತದ ಭಕ್ತರಿಗೆ, ವಿಶೇಷವಾಗಿ ಕರ್ನಾಟಕದ ಜನರಿಗೆ ಅತ್ಯಂತ ಆರಾಧ್ಯ ದೈವರಾದ ಶ್ರೀ ರಾಘವೇಂದ್ರ ಸ್ವಾಮಿಯ ದರ್ಶನಕ್ಕಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಬೆಂಗಳೂರಿನಿಂದ ಮಂತ್ರಾಲಯಕ್ಕೆ ವಿಶೇಷ ಪ್ರವಾಸ ಪ್ಯಾಕೇಜ್‌ ಬಿಡುಗಡೆ ಮಾಡಿದೆ.

ಮಂತ್ರಾಲಯವು ಆಂಧ್ರಪ್ರದೇಶ ಗಡಿಯಲ್ಲಿ ಇದ್ದರೂ ಪ್ರತಿದಿನ ಲಕ್ಷಾಂತರ ಭಕ್ತರು ಕರ್ನಾಟಕದಿಂದಲೇ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ಕೆಎಸ್‌ಟಿಡಿಸಿ ಪ್ರತಿ ಬುಧವಾರ ಮತ್ತು ಶುಕ್ರವಾರ ಈ ವಿಶೇಷ ಪ್ಯಾಕೇಜ್‌ನ್ನು ನಡೆಸಲಿದೆ. ರಾಘವೇಂದ್ರ ಸ್ವಾಮಿ ಮಠದ ದರ್ಶನದ ಜೊತೆಗೆ ಪಂಚಮುಖಿ ಆಂಜನೇಯ ದೇವಸ್ಥಾನ ಸೇರಿದಂತೆ ಇತರ ಪ್ರಮುಖ ಸ್ಥಳಗಳಿಗೂ ಈ ಪ್ರವಾಸದಲ್ಲಿ ಭೇಟಿ ನೀಡಲಾಗುತ್ತದೆ.

ಪ್ರಯಾಣದ ವಿವರ:
ಈ ಪ್ಯಾಕೇಜ್‌ ಮೂಲಕ ಭಕ್ತರಿಗೆ ಸುಗಮವಾಗಿ ಶ್ರೀ ರಾಘವೇಂದ್ರ ಸ್ವಾಮಿ ದರ್ಶನ ಮಾಡುವ ಅವಕಾಶ ಕಲ್ಪಿಸಲಾಗಿದೆ. ರಾತ್ರಿ ಬೆಂಗಳೂರಿನಿಂದ ಪ್ರಯಾಣ ಆರಂಭಿಸಿ ಬೆಳಿಗ್ಗೆ ಮಂತ್ರಾಲಯ ತಲುಪುವಂತೆ ವೇಳಾಪಟ್ಟಿ ರೂಪಿಸಲಾಗಿದೆ.
ದಿನ 1: ರಾತ್ರಿ 8.00ಕ್ಕೆ ಯಶವಂತಪುರದ ಕೆಎಸ್‌ಟಿಡಿಸಿ ಕಚೇರಿಯಿಂದ ನಿರ್ಗಮನ
ದಿನ 2:
ಬೆಳಿಗ್ಗೆ 4.30 – 6.00: ಫ್ರೆಶ್ ಅಪ್
ಬೆಳಿಗ್ಗೆ 6.30 – 10.00: ರಾಘವೇಂದ್ರ ಸ್ವಾಮಿ ದರ್ಶನ
ಬೆಳಿಗ್ಗೆ 11.00 – ಮಧ್ಯಾಹ್ನ 12.00: ಪಂಚಮುಖಿ ಆಂಜನೇಯ ದೇವಸ್ಥಾನ ದರ್ಶನ
ಮಧ್ಯಾಹ್ನ 1.00 – 2.00: ದಾರಿಯಲ್ಲಿ ಊಟ
ರಾತ್ರಿ 9.00: ಯಶವಂತಪುರ ಕೆಎಸ್‌ಟಿಡಿಸಿ ಕಚೇರಿಗೆ ವಾಪಸ್

ಪ್ಯಾಕೇಜ್‌ ದರ:
ಈ ವಿಶೇಷ ಪ್ಯಾಕೇಜ್‌ಗೆ ಒಬ್ಬರಿಗೆ ರೂ. 2,780 ನಿಗದಿಪಡಿಸಲಾಗಿದೆ. ಪ್ರಯಾಣ, ದರ್ಶನ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳು ಇದರಲ್ಲಿವೆ.


ಮರುಪಾವತಿ ನಿಯಮಗಳು:
ಪ್ರಯಾಣದ 48 ಗಂಟೆಗಳ ಮೊದಲು ಟಿಕೆಟ್‌ ರದ್ದು ಮಾಡಿದರೆ – 10% ಕಡಿತ
24 ಗಂಟೆಗಳ ಮೊದಲು ರದ್ದು ಮಾಡಿದರೆ – 25% ಕಡಿತ
24 ಗಂಟೆಗಳ ಒಳಗೆ ರದ್ದು ಮಾಡಿದರೆ – ಯಾವುದೇ ಮರುಪಾವತಿ ಇರುವುದಿಲ್ಲ

Leave a Reply

Your email address will not be published. Required fields are marked *