BBMP
Loading ...

BESCOM

Greater Bengaluru News9 : ವಿದ್ಯುತ್ ದರ ಏರಿಕೆ ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (KERC) ನಾವು ಪ್ರಸ್ತಾವನೆ ಸಲ್ಲಿಸಿಲ್ಲ ಎಂದು ಬೆಸ್ಕಾಂ ಎಂಡಿ ಶಿವಶಂಕರ್ ಸ್ಪಷ್ಟನೆ ನೀಡಿದ್ದಾರೆ.

ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಮತ್ತೆ ವಿದ್ಯುತ್ ದರ ಏರಿಕೆ ವದಂತಿ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ ಅವರು, 2025-26, 2026-27, 2027-28ರ ದರ ನಿಗದಿ ಆಗಿ ಹೋಗಿದೆ. 2024-25ರಲ್ಲಿ ಬೆಸ್ಕಾಂಗೆ 2,800 ಕೋಟಿ ರೂ ಆದಾಯ ಕೊರತೆ Investment. ಆ ವರ್ಷದಲ್ಲಿ ಆದಾಯ ಕೊರತೆಯ ಬಗ್ಗೆ KERC ಗಮನಕ್ಕೆ ತಂದಿದ್ದೇವೆ.

ನಷ್ಟ ಸರಿದೂಗಿಸಲು ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದ್ದೇವೆ. ಸದ್ಯ 2024-25ನೇ ಆರ್ಥಿಕ ವರ್ಷದ ವರದಿಯನ್ನು KERCಗೆ ಸಲ್ಲಿಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *