BBMP
Loading ...

Siddu

Greater Bengaluru News9: ವಿಜಯಪುರದಲ್ಲಿ ನಿನ್ನೆ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿನ್ನಿಸಿದ ಲಡ್ಡನ್ನು ಬಾಯಿಗೆ ಹಾಕಿದಂತೆ ಮಾಡಿ ನಂತರ ಹಿಂದೆ ಕೆಳಗೆ ಎಸೆದಿದ್ದು ವಿಡಿಯೊ ವೈರಲ್ ಆಗಿದೆ.

ದೀರ್ಘಾವಧಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ದಾಖಲೆ ನಿರ್ಮಿಸಿದ ಹಿನ್ನೆಲೆಯಲ್ಲಿ ಈ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಚಿವ ಎಂಬಿ ಪಾಟೀಲ್ ಮನೆಯಲ್ಲಿ ತಯಾರಿಸಿದ ಲಡ್ಡುವನ್ನು ಸಿದ್ದರಾಮಯ್ಯನವರಿಗೆ ಮೊದಲು ನೀಡಿದರು.

ನಂತರ ಎಂ.ಬಿ. ಪಾಟೀಲ್ ಅವರು ಅದೇ ಲಾಡುವನ್ನು ಡಿಕೆ ಶಿವಕುಮಾರ್ ಕೈಗೆ ಕೊಟ್ಟು ಮುಖ್ಯಮಂತ್ರಿಗೆ ತಿನ್ನಿಸುವಂತೆ ಕೇಳಿದರು. ಒತ್ತಾಯಕ್ಕೆ ಮಣಿದು ಡಿಸಿಎಂ ಡಿಕೆ ಶಿವಕುಮಾರ್ ಸಿಎಂಗೆ ಸಿಹಿ ತಿನ್ನಿಸಿದರು. ಆದರೆ, ಆ ಲಡ್ಡುವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಯಿಂದ ತೆಗೆದು ಎಸೆದಿದ್ದು ಅವರ ವರ್ತನೆಗೆ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *