Greater Bengaluru News9: ಹೊಸ ವರ್ಷ ಬರಮಾಡಿಕೊಳ್ಳಲು ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗಿದೆ. ಪಾರ್ಟಿ ಹಾಟ್ಸ್ಪಾಟ್ಗಳಲ್ಲಿ ಸಿದ್ಧತೆ ಜೋರಾಗಿದೆ. ಆಚರಣೆ ವೇಳೆ ಯಾವುದೇ ಅಹಿತರ ಘಟನೆಗಳು ಹಾಗೂ ಅಕ್ರಮ ಚಟುವಟಿಕೆಗಳು ನಡೆಯದಂತೆ ಬೆಂಗಳೂರು ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಬೆಂಗಳೂರು ಕಮಿಷನರ್ ಸೀಮಂತ್ ಕುಮಾರ್, ಸೆಲೆಬ್ರೇಷನ್ ವೇಳೆ ಅನುಚಿತ ವರ್ತನೆ, ಗಲಾಟೆ ಮಾಡುವವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಹೊಸ ವರ್ಷದ ಜಾಗೃತೆ ಕ್ರಮ ಪರಿಶೀಲಿಸಿದ ಕಮಿಷನರ್
ಹೊಸ ವರ್ಷ ವರ್ಷಕ್ಕೆ ಇನ್ನೇನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಈ ಹಿನ್ನೆಲೆ ಬೆಂಗಳೂರು ಕಮಿಷನರ್ ಸೀಮಂತ್ ಮಾರ್ ಅವರು ಬುಲೆಟ್ ಬೈಕ್ ಹತ್ತಿ ಸಿಟಿ ರೌಂಡ್ಸ್ ಹಾಕಿದ್ರು. ಹೊಸ ವರ್ಷದ ಜಾಗೃತೆ ಕ್ರಮ ಪರಿಶೀಲನೆ ನಡೆಸಿದ್ರು. ಹಿರಿಯ ಅಧಿಕಾರಗಳ ಜೊತೆ ಟ್ರಿನಿಟಿ ಸರ್ಕಲ್ನಿಂದ ಎಂ.ಜಿ ರೋಡ್ ಬ್ರಿಗೇಡ್ ರೋಡ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಶೇಷ ಬಂದೋಬಸ್ತ್ ವ್ಯವಸ್ಥೆ ಮಾಡಲಾಗ್ತಿದೆ
ಸಿಟಿ ರೌಂಡ್ಸ್ ಬಳಿಕ ಮಾತನಾಡಿರುವ .ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್, ಇವತ್ತು ಎಂ.ಜಿ ರೋಡ್, ಬ್ರಿಗ್ರೇಡ್ ರೋಡ್, ಚರ್ಚ್ ಸ್ಟ್ರೀಟ್ ಸೇರಿ ಮುಖ್ಯ ಸೆಲೆಬ್ರೇಷನ್ ಜಾಗ ಪರಿಶೀಲನೆ ಮಾಡಿದ್ದೇವೆ. ಎಲ್ಲಾ L&O ಹಾಗೂ ಟ್ರಾಫಿಕ್ ಅಧಿಕಾರಿಗಳು ಪರಿಶೀಲನೆ ಮಾಡ್ತಿದ್ದೇವೆ. ಎರಡು ಮೂರು ವಾರದಿಂದ ತಯಾರಿ ಮಾಡಿಕೊಂಡಿದ್ದಾರೆ.
ಈ ವರ್ಷ ಕ್ರೌಡ್ ಕಂಟ್ರೋಲ್ ಮತ್ತು ಟ್ರಾಫಿಕ್ ಕಂಟ್ರೋಲ್ಗೆ ಬಂದೋಬಸ್ತ್ ನಿಗಾವಹಿಸಲಾಗ್ತಿದೆ. ನಗರದಾದ್ಯಂತ ಮುಖ್ಯ ಜಾಗ ಚರ್ಚ್ ಸ್ಟ್ರೀಟ್, ಇಲ್ಲಿ ಲಕ್ಷಾಂತರ ಜನ ಬರ್ತಾರೆ ಹಾಗಾಗೀ ವಿಶೇಷ ಬಂದೋಬಸ್ತ್ ವ್ಯವಸ್ಥೆ ಮಾಡಲಾಗ್ತಿದೆ ಎಂದರು ಜೊತೆಗೆ ಆಚರಣೆ ವೇಳೆ ಅನುಚಿತವಾಗಿ ವರ್ತಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ಸಹ ನೀಡಿದ್ರು.
ಬ್ರಿಗೇಡ್ ಶಾಪ್ಸ್ ಅಸೋಸಿಯೇಷನ್ ಸಲಹೆಗಳೇನು?
- ಡಿಸೆಂಬರ್ 31ರಂದು ರಾತ್ರಿ 7 ಗಂಟೆಗೆ ಬ್ರಿಗೇಡ್ ರಸ್ತೆ 2 ಬದಿ ಬಂದ್
- ಈ ಹೊತ್ತಿನಲ್ಲಿ ಮಹಿಳೆಯರು, ಮಕ್ಕಳು, ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಡುವ ನಿರೀಕ್ಷೆ
- ಚರ್ಚ್ ಸ್ಟ್ರೀಟ್, ರೆಸ್ಟ್ ಹೌಸ್ ರಸ್ತೆ ಹಾಗೂ ಬ್ರಿಗೇಡ್ ರೋಡ್ ಜಂಕ್ಷನ್ ಬಂದ್ ಮಾಡಲು ಸಲಹೆ.
- ಡಿಸೆಂಬರ್ 31ರ ರಾತ್ರಿ ಏಕಮುಖವಾಗಿ ಮಾತ್ರ ಎಂಟ್ರಿ, ಎಕ್ಸಿಟ್ ಪಾಯಿಂಟ್. ಕಾವೇರಿ ಎಂಪೋರಿಯಂನಿಂದ ಎಂಟ್ರಿಕೊಟ್ಟು, ಒಪೇರ ಕಡೆಯಿಂದ ವಾಪಸ್ಸ್ ಎಕ್ಸಿಟ್ಗೆ ಅವಕಾಶ
- ಡಿಸೆಂಬರ್ 31ರಂದು ಯಾವುದೇ ತಳ್ಳೊ ಗಾಡಿ, ಬುಟ್ಟಿ ಮಾರಟಕ್ಕೆ ಅವಕಾಶ ಇಲ್ಲ.
- ಬ್ರಿಗೇಡ್ ರೋಡ್ನ ಯಾವ ಅಂಗಡಿ ಮುಗ್ಗಟ್ಟು ಮುಂದೆ ಕುಳಿತುಕೊಳ್ಳಲು ಅವಕಾಶ ಇಲ್ಲ


