Greater Bengaluru News9 : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಎ ಖಾತಾ ವಿತರಣೆಯನ್ನು ಪ್ರಾರಂಭಿಸಿದೆ. ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆಗಾಗಿ 3,000 ಅರ್ಜಿ ಸಲ್ಲಿಸಿದ್ದು, ಇದರಲ್ಲಿ 35 ಅರ್ಜಿಗಳನ್ನು ಪರಿಶೀಲಿಸಿ ವಿತರಣೆಯನ್ನು ಮಾಡಲಾಗಿದೆ.
ಎಲ್ಲಾ ಅರ್ಜಿಗಳನ್ನು ತ್ವರಿತವಾಗಿ ಪರಿಶೀಲಿಸಿ ವಿತರಣೆಗೆ ಮುಂದಾಗಿರುವ ಜಿಬಿಎ, ಬಿ ಖಾತೆಗಳಲ್ಲಿನ ಏಳೂವರೆ ಲಕ್ಷ ಖಾತೆಗಳಲ್ಲಿ ಬರೀ 3,000 ಜನರು ಮಾತ್ರ ಅರ್ಜಿ ಸಲ್ಲಿಸಿರುವುದರಿಂದ ಜನರಲ್ಲಿ ಅರ್ಜಿ ಸಲ್ಲಿಕೆ ಬಗ್ಗೆ ನಿರಾಸಕ್ತಿ ತೋರಲಾಗುತ್ತಿದೆ ಎಂದು ತಿಳಿಸಿದೆ.
100 ದಿನಗಳ ಕಾಲಾವಕಾಶದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅದನ್ನು ವಿಸ್ತರಿಸುವ ಕುರಿತು ಜಿಬಿಎ ಚಿಂತನೆ ನಡೆಸುತ್ತಿದೆ. ಆದಾಗ್ಯೂ, ಗೈಡ್‌ಲೈನ್ಸ್ ಪ್ರಕಾರ ಪರಿವರ್ತನೆ ಮೌಲ್ಯದ 5% ಕಡಿತ ಮಾಡಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಜಿಬಿಎ ಬಂದಿದೆ.


