BBMP
Loading ...

DKS

Greater Bengaluru News9 : ರಾಜ್ಯದಲ್ಲಿ ಪಟ್ಟದ ಕುರ್ಚಿಗೆ ಹಗ್ಗಜಗ್ಗಾಟ ಮುಂದುವರೆದಿದ್ದು ಒಂದು ಕಡೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಈಗಲೂ ನಾನೇ ಸಿಎಂ ಮುಂದೆಯೂ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ. ಹೈಕಮಾಂಡ್ ಎಲ್ಲಿವರೆಗೆ ಹೇಳುತ್ತೋ ಅಲ್ಲಿವರೆಗೂ ನಾನೆ ಸಿಎಂ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ, ಇನ್ನೊಂದು ಕಡೆ ಡಿಕೆ ಶಿವಕುಮಾರ್ ಟೆಂಪಲ್ ರನ್ ಮಾಡುತ್ತಿದ್ದಾರೆ. ಇದರ ಮಧ್ಯ ಶಾಸಕ ಜನಾರ್ದನ ರೆಡ್ಡಿ ಯಾವ ಕ್ಷಣದಲ್ಲಾದರೂ ಡಿಕೆ ಶಿವಕುಮಾರ್ ಗೆ ಅಧಿಕಾರ ಹಸ್ತಾಂತರ ಆಗಲಿದೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಗಂಗಾವತಿಯಲ್ಲಿ ಮಾತನಾಡಿದ ಅವರು, ಯಾವ ಕ್ಷಣದಲ್ಲಾದರೂ ಡಿಸಿಎಂ ಡಿಕೆ ಶಿವಕುಮಾರ್ ಗೆ ಅಧಿಕಾರ ಹಸ್ತಾಂತರ ಆಗಲಿದೆ. ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ ಎಂದು ಗಂಗಾವತಿಯಲ್ಲಿ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಮಾತು ಉಳಿಸಿಕೊಳ್ಳುತ್ತಾರೆ ಅಂತ ಡಿಕೆ ಶಿವಕುಮಾರ್ ಹೇಳುತ್ತಿದ್ದರು. ಹೀಗಾಗಿ ಅಧಿಕಾರ ಹಂಚಿಕೆಗೆ ಸಮಯ ಸನ್ನೀಹೀತವಾಗಿದೆ. ಪ್ರಮಾಣವಚನ ಸ್ವೀಕರಿಸಲು ಡಿಕೆ ಶಿವಕುಮಾರ್ ದೇಗುಲಕ್ಕೆ ಹೋಗುತ್ತಿದ್ದಾರೆ ಡಿನ್ನರ್ ಮೀಟಿಂಗ್ಗಳಿಂದ ಏನು ನಡೆಯುವುದಿಲ್ಲ ಎಂದು ಕೊಪ್ಪಳದ ಗಂಗಾವತಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *