BBMP
Loading ...

KSLECA

Greater Bengaluru News9: ಇದೇ ಭಾನುವಾರ (ಡಿ.14) ನಡೆಯಲಿರುವ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಸಿ. ರಮೇಶ್​​ ನೇತೃತ್ವದ ಆರ್​ಆರ್​ ತಂಡ ಜಯದ ಹಾದಿಯಲ್ಲಿದ್ದು, ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವತ್ತ ದಾಪುಗಾಲು ಇಟ್ಟಿದೆ.

ಬೆಂಗಳೂರಿನ ಚಂದ್ರಾ ಲೇಔಟ್​, 2ನೇ ಫೇಸ್​, 1ನೇ ಹಂತದಲ್ಲಿರುವ ಸಿದ್ದಗಂಗಾ ಪಬ್ಲಿಕ್​ ಶಾಲೆಯಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್​ ಗುತ್ತಿಗೆದಾರರ ಸಂಘದ ಪಂಚ ವಾರ್ಷಿಕ ಕೇಂದ್ರ ಸಮಿತಿಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಸ್ಪರ್ಧಿಸಿರುವ ಹಾಲಿ ಅಧ್ಯಕ್ಷ ಸಿ ರಮೇಶ್​ ನೇತೃತ್ವದ ಆರ್​ಆರ್​ ತಂಡ, ಕಳೆದ ಅಧಿಕಾರದ ಅವಧಿಯಲ್ಲಿ ಮಾಡಿರುವ ಅನೇಕ ಉತ್ತಮ ಕಾರ್ಯಗಳಿಂದಾಗಿ ಮತ್ತೊಮ್ಮೆ ಅಧಿಕಾರ ಹಿಡಿಯುವುದು ಸ್ಪಷ್ಟವಾಗಿದೆ.

ಮಾಜಿ ಗೌರವ ರಾಜ್ಯಾಧ್ಯಕ್ಷರಾದ ದಿವಂಗತ ಮ. ನಟರಾಜ್​ ಹಾಗೂ ಮಾಜಿ ಗೌರವ ರಾಜ್ಯಾಧ್ಯಕ್ಷರಾದ ಪ್ರಕಾಶ ಅಂಗಡಿ ಅವರ ಬೆಂಬಲಿತ ಸಿ.ರಮೇಶ್‌ ನೇತೃತ್ವದಲ್ಲಿ ಸಂಘದ ಪ್ರಗತಿಗಾಗಿ ಹಾಗೂ ಸಂಘದ ಸದಸ್ಯರ ಅಭಿವೃದ್ಧಿಗಾಗಿ ಆರ್.ಆರ್.ತಂಡಕ್ಕೆ ಅತ್ಯಮೂಲ್ಯವಾದ ಮತವನ್ನು ನೀಡಬೇಕೆಂದು ಹಾಲಿ ರಾಜ್ಯಾಧ್ಯಕ್ಷರಾಗಿರುವ ಹಾಗೂ ಪ್ರಸ್ತುತ ರಾಜ್ಯಾಧ್ಯಕ್ಷರ ಸ್ಥಾನದ ಅಭ್ಯರ್ಥಿ ರಮೇಶ್​ ಅವರು ಎಲ್ಲ ಗುತ್ತಿಗೆದಾರರಲ್ಲಿ ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ.

ಆರ್​ಆರ್​ ತಂಡದಿಂದ ಪ್ರಣಾಳಿಕೆ ಬಿಡುಗಡೆ

  • ಸಂಘದ ಆರ್ಥಿಕ ಸ್ಥಿತಿಗೆ ಸಂಬಂಧಿಸಿದಂತೆ ಇನ್ನೂ ಅಗತ್ಯವಿರುವ ನೀತಿಗಳನ್ನು ಯೋಜನೆಗಳನ್ನು ರೂಪಿಸಿ ಆರ್ಥಿಕವಾಗಿ ಸಂಘವನ್ನು ಮತ್ತಷ್ಟು ಸದೃಢಗೊಳಿಸಲಾಗುವುದು.
  • ಬೆಂಗಳೂರು ವ್ಯಾಪ್ತಿಯಲ್ಲಿ ಬೃಹತ್ ಸಮುದಾಯ ಭವನವನ್ನು ನಿರ್ಮಿಸಿ ಸಂಘದ ಸದಸ್ಯರುಗಳಿಗೆ ಹಾಗೂ ಅವರ ಕುಟುಂಬಗಳಿಗೆ ಅನುಕೂಲ ಕಲ್ಪಿಸಲಾಗುವುದು.
  • ರಾಜ್ಯದಲ್ಲಿರುವ ಎಲ್ಲಾ 31 ಜಿಲ್ಲಾ ಸಮಿತಿಗಳು, ತಾಲ್ಲೂಕು ಸಮಿತಿಗಳು ಹಾಗೂ ಉಪ ಸಮಿತಿಗಳಿಗೆ ಕಡ್ಡಾಯವಾಗಿ ಸ್ವಂತ ನಿವೇಶನ ಹಾಗೂ ಸ್ವಂತ ಕಟ್ಟಡ ಸೌಲಭ್ಯ ಹೊಂದಲು ಮುಂದಿನ 5 ವರ್ಷಗಳಲ್ಲಿ ಕಾರ್ಯಯೋಜನೆ ರೂಪಿಸಲಾಗುವುದು.
  • ಲೋಕೋಪಯೋಗಿ ಇಲಾಖೆಯಲ್ಲಿ ನಡೆಸುವ ಕಾಮಗಾರಿಗಳಲ್ಲಿ 0.5% ಹಣವನ್ನು ಕಡಿತಗೊಳಿಸಿ ಆ ಹಣವನ್ನು ಕಾಮಗಾರಿ ನಡೆಸುವ ಸಿವಿಲ್ ಗುತ್ತಿಗೆದಾರರ ಕಲ್ಯಾಣ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದು ಅಂತೆಯೇ ಇಂಧನ ಇಲಾಖೆಯ ವತಿಯಿಂದ ನಡೆಸುವ ಕಾಮಗಾರಿಗಳಲ್ಲಿಯೂ ಸಹ ಇನ್ನು ಮುಂದೆ 0.5% CBF (Contractor Benefit Fund) ಹಣವನ್ನು ಕ್ರೂಡೀಕರಿಸಿ ಆಯಾ ಸ್ಥಳೀಯ ವಿದ್ಯುತ್ ಗುತ್ತಿಗೆದಾರರ ಕಲ್ಯಾಣ ಕಾರ್ಯಗಳಿಗೆ ಆ ಹಣವನ್ನು ಬಳಸಿಕೊಳ್ಳುವಂತೆ ಅನುವಾಗಲು ಸರ್ಕಾರದಿಂದ ಆದೇಶ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
  • ಸದಸ್ಯರುಗಳ ಸುರಕ್ಷತೆಗಾಗಿ ಆರೋಗ್ಯ ಸಮಸ್ಯೆಗಳಾದಾಗ ಅಧ್ಯಕ್ಷರ ನಿಧಿಯಿಂದ ನೀಡಲಾಗುತ್ತಿದ್ದ 10ಸಾವಿರ ಸಹಾಯ ಧನವನ್ನು 15ಸಾವಿರ ರೂಗಳಿಗೆ ಹೆಚ್ಚಿಸಲಾಗುವುದು.
  • ನೂತನವಾಗಿ ವಿದ್ಯುತ್ ಪರವಾನಗಿ ಪಡೆಯುವವರಿಗೆ,ನವೀಕರಣ ಮಾಡಿಸುವವರಿಗೆ ಹಾಗೂ ಸೂಪರ್ ವೈಸರ್ ಮತ್ತು ವೈರ್ ಮೆನ್ ಲೈಸೆನ್ಸ್ ಎಂಡೋಸೈರ್ಂಟ್ ಆಯಾ ಜಿಲ್ಲಾ ಕಛೇರಿಗಳಲ್ಲಿಯೇ ಅಪ್ ಲೋಡ್ ಮಾಡುವ ವ್ಯವಸ್ಥೆ ಕಲ್ಪಿಸಲಾಗುವುದು.
  • ಪ್ರಸ್ತುತ ಬಹು ದೊಡ್ಡ ಸಮಸ್ಯೆಯಾಗಿ ತಲೆದೋರಿರುವ OC ಸಮಸ್ಯೆಯನ್ನು ಬಗೆಹರಿಸಲು ಸಮರ್ಪಕವಾಗಿ ನಾವುಗಳು ಸತತವಾಗಿ ಅಧಿಕಾರಿಗಳ ಜೊತೆಗೆ ಸಂಪರ್ಕದಲ್ಲಿದ್ದುಕೊಂಡು ನಮ್ಮ ನಡೆ ಶಾಸಕರ ಕಡೆ ಎಂಬ ಘೋಷಣೆಯೊಂದಿಗೆ ಗುತ್ತಿಗೆದಾರರುಗಳು ಸ್ಥಳೀಯ ಶಾಸಕರುಗಳನ್ನು ಭೇಟಿ ಮಾಡಿ ವಿಧಾನಸಭೆಯಲ್ಲಿ ಸಹ OC ವಿಚಾರದ ಬಗೆಗೆ ಚರ್ಚೆ ಮಾಡುವಂತೆ ಮಾಡಲಾಗಿದೆ ಖುದ್ದಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಸಹ ಭೇಟಿ ಮಾಡಿ ಗುತ್ತಿಗೆದಾರರಿಗೆ ಹಾಗೂ ಗ್ರಾಹಕರಿಗೆ ಈ ನಿಯಮದಿಂದಾಗುವ ಸಮಸ್ಯೆಯ ಬಗೆಗೂ ಮನವರಿಕೆ ಮಾಡಿಕೊಟ್ಟಿದ್ದು ಮುಂಬರುವ ದಿವಸಗಳಲ್ಲಿ ಸತತ ಪ್ರಯತ್ನ ದೊಂದಿಗೆ OC ನಿಯಮವನ್ನು ತೆಗೆಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
  • ಕೇಂದ್ರೀಯ ವಿದ್ಯುತ್ ಪ್ರಾಧಿಕಾರದಿಂದ ಜಾರಿಯಾಗಿರುವ ನೂತನವಾಗಿ ನಿರ್ಮಾಣಗೊಂಡಿರುವ 15ಮೀಟರಗಳಿಗೂ ಹೆಚ್ಚಿನ ಎತ್ತರದ ಕಟ್ಟಡಗಳಿಗೆ ಬಸ್ಟಾರ್ ಟ್ರಂಕಿಂಗ್ (BBT) ಯನ್ನು ಜಾರಿಮಾಡಲಾಗಿದ್ದು ಇದನ್ನು ಈಗಾಗಲೇ ಸರ್ಕಾರದ ಮಟ್ಟದಲ್ಲಿ ಚರ್ಚಿಸಿದ್ದು ಇದಕ್ಕಾಗಿ ಸಮಿತಿಯ ರಚನೆ ಸಹ ಮಾಡಲಾಗಿದೆ ಮುಂಬರುವ ದಿವಸಗಳಲ್ಲಿ ಈ ನಿಯಮವನ್ನು ತೆರವುಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
  • ಸಂಘದ ಹೊಸ ಆಪ್ ಮತ್ತು ವೆಬ್ ಸೈಟ್ ಆಧುನೀಕರಣ ಮಾಡುವ ಮುಖಾಂತರ ನಮ್ಮ ಸಂಘವನ್ನು ಸಂಪೂರ್ಣವಾಗಿ ಡಿಜಿಟಲೀಕರಣ ಮಾಡುವುದು. (ಸದಸ್ಯತ್ವ ನಿರ್ವಹಣೆ, Membership Management ಹೊಸ ಸದಸ್ಯತ್ವ ಪಡೆಯುವುದು, ಸದಸ್ಯತ್ವವನ್ನು ನೋಂದಣಿ ಮಾಡಿಕೊಳ್ಳುವುದು ಹಾಗೂ ಸಂಘಕ್ಕೆ ಸಂಬಂಧ ಪಟ್ಟ ಪ್ರತಿಯೊಂದು ಕಾರ್ಯಕ್ರಮವನ್ನು ಸಂಘದ ಸಂಪೂರ್ಣ ಸಂವಹನ ಮತ್ತು ಮಾಹಿತಿ ಹಂಚಿಕೆ, ಹಾಗೂ ಆಂತರಿಕ ಕಾರ್ಯಾಚರಣೆ, ಸದಸ್ಯರಿಗೆ ಸುಲಭವಾಗಿ ಮಾಹಿತಿಯನ್ನು ಒದಗಿಸಲು ಆದ್ಯತೆ ನೀಡಲಾಗುವುದು).

ಎಸ್ಕಾಂ ಸಭೆ

  1. ಆರು ತಿಂಗಳಿಗೊಮ್ಮೆ ಎಸ್ಕಾಂ ವ್ಯಾಪ್ತಿಗೆ ಬರುವ ಜಿಲ್ಲಾ ಸಮಿತಿ ಅಧ್ಯಕ್ಷರು ಕಾರ್ಯದರ್ಶಿಗಳನ್ನೊಳಗೊಂಡ ಸಭೆಯನ್ನು ಎಸ್ಕಾಂಗಳ ಕೇಂದ್ರ ಸ್ಥಳವಾದ ಬೆಂಗಳೂರು (ಬೆಸ್ಕಾಂ), ಮೈಸೂರು (ಸೆಸ್ಕಾಂ), ಕಲ್ಬುರ್ಗಿ (ಚೆಸ್ಕಾಂ), ಹುಬ್ಬಳ್ಳಿ (ಹೆಸ್ಕಾಂ), ಮತ್ತು ಮಂಗಳೂರು (ಮೆಸ್ಕಾಂ)ಸಭೆ ನಡೆಸಿ ಕುಂದು ಕೊರತೆಗಳನ್ನು ಆಯಾ ವಿಭಾಗದ ಎಂ.ಡಿ.ಗಳ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಅಗತ್ಯ ಬಿದ್ದಲ್ಲಿ ಸರ್ಕಾರದ ಇಂಧನ ಖಾತೆ ಸಚಿವರ ಜೊತೆಯಲ್ಲಿ ಏಕಗವಾಕ್ಷಿ ಸಭೆಯನ್ನು ಆಯೋಜಿಸಲಾಗುವುದು.
  2. ಆಯಾ ವಿದ್ಯುತ್ ಕಂಪನಿಗಳ ವ್ಯಾಪ್ತಿಯಲ್ಲಿ ಕೇಂದ್ರ ಕಾರ್ಯಕಾರಿ ಸಭೆ ಆಯೋಜಿಸಿ ಸ್ಥಳೀಯ ಸದಸ್ಯರುಗಳ ಜಿಲ್ಲಾ ತಾಲ್ಲೂಕು ಸಮಿತಿಯ ಪದಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಸದಸ್ಯರುಗಳ ಕುಂದು ಕೊರತೆಗಳನ್ನು ಬಗೆಹರಿಸಲು ಅಗತ್ಯ ಕ್ರಮವಹಿಸಲಾಗುವುದು.

ಸಮಿತಿಗಳ ಪುನರ್ ರಚನೆ

ಕಾಲಾವಧಿ ಮುಗಿದಿರುವ ಜಿಲ್ಲಾ ಹಾಗೂ ತಾಲ್ಲೂಕು ಸಮಿತಿಗಳಿಗೆ ಸಕಾಲದಲ್ಲಿ ಹೊಸ ಸಮಿತಿಗಳನ್ನು ರಚಿಸಿ ಸದಸ್ಯರುಗಳ ಕುಂದು ಕೊರತೆಗಳನ್ನು ಆಯಾ ಸ್ಥಳೀಯ ಸಮಿತಿಗಳ ಮೂಲಕ ಬಗೆಹರಿಸಲಾಗುವುದು.

ಪ್ರತಿಭಾ ಪುರಸ್ಕಾರ

ಸಂಘದ ಸದಸ್ಯರುಗಳು ಮತ್ತು ಅವರ ಮಕ್ಕಳು ಕಲೆ ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಅಂತಹ ಪ್ರತಿಭಾನ್ವಿತರನ್ನು ಗುರ್ತಿಸಲು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳನ್ನು ಆಯೋಜಿಸಿ ಅವರನ್ನು ಗೌರವಿಸಿ ಪುರಸ್ಕಾರ ನೀಡಿ ಅವರು ಮತ್ತಷ್ಟು ಸಾಧನೆ ಮಾಡಲು ಉತ್ತೇಜನ ನೀಡಲಾಗುವುದು.

ಸುರಕ್ಷತೆಗೆ ಆಧ್ಯತೆ

  1. ವಿದ್ಯುತ್‌ ಪರಿವೀಕ್ಷಣಾಲಯದಿಂದ ವಿದ್ಯುತ್ ಗುತ್ತಿಗೆದಾರರಿಗೆ, ತಂತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ವಿದ್ಯುತ್ ಸುರಕ್ಷತೆಯ ಬಗೆಗೆ ಆರಿವು ಮೂಡಿಸಲು ಮತ್ತು ಪರೀಕ್ಷೆಗಳಿಗೆ ಸಂಬಂಧಿಸಿದಂತೆ ತರಭೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
  2. ಭಾರತೀಯ ವಿದ್ಯುತ್ ಕಾಯ್ದೆ ಅನ್ವಯ ವಿದ್ಯುತ್ ಸುರಕ್ಷತೆ ಹಾಗೂ ಉತ್ತಮ ಗುಣಮಟ್ಟದ ವಿದ್ಯುತ್ ಕಾಮಗಾರಿಗಳನ್ನು ನಿರ್ವಹಿಸಲು ವಿದ್ಯುತ್ ಪರಿವೀಕ್ಷಣಾಲಯದಿಂದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರೇ ಮಾಡಬೇಕೆಂದು ಆದೇಶ ಮಾಡಿಸಿ ನಮ್ಮ ಸದಸ್ಯರುಗಳಿಗೆ ಕೆಲಸ ಸಿಗುವಂತೆ ಮಾಡುವುದು,

ಕಾಮಗಾರಿ ಭಾಗ್ಯ

ತುಂಡುಗುತ್ತಿಗೆ ಕಾಮಗಾರಿಗಳು ನಮ್ಮ ಗುತ್ತಿಗೆದಾರರಿಗೆ ಸಮರ್ಪಕವಾಗಿ ದೊರೆಯುವಂತೆ ನೋಡಿಕೊಳ್ಳಲಾಗುವುದು ಹಾಗೂ ಅಭಿವೃದ್ಧಿಗಾಗಿ ಸರ್ಕಾರದಿಂದ ಸಿಗುವ ಮೀಸಲಾತಿ ಕಾಮಗಾರಿಗಳ ಸೌಲಭ್ಯಗಳನ್ನು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸರ್ಕಾರದಿಂದ ಸಮಪರ್ಕವಾಗಿ ದೊರೆಯುವಂತೆ ಗಮನಹರಿಸಲಾಗುವುದು.

ಸರ್ವ ಸದಸ್ಯರ ಸಭೆ

ಸಕಾಲದಲ್ಲಿ ಸರ್ವ ಸದಸ್ಯರ ಸಭೆಯನ್ನು ಆಯೋಜಿಸಿ ಸದಸ್ಯರುಗಳ ಕುಂದು ಕೊರತೆಗಳನ್ನು ಸ್ವೀಕರಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸಲಾಗುವುದು.

ಮಾಹಿತಿ ಕೇಂದ್ರ

  1. ಕೆ.ಇ.ಆರ್​.ಸಿ ನಿಯಮಗಳು ಹಾಗೂ ತಿದ್ದುಪಡಿ ವಿದ್ಯುತ್​ ಪರಿವೀಕ್ಷಣಾಲಯದ ನಿಯಮಗಳು ಮತ್ತು ಆದೇಶಗಳು ಮತ್ತು ಎಸ್ಕಾಂ ಕಂಪನಿಗಳ ಆದೇಶಗಳು ಹಾಗೂ ತಿದ್ದುಪಡಿಗಳ ಸಂಪೂರ್ಣ ಮಾಹಿತಿಯನ್ನು ಕೇಂದ್ರ ಜಿಲ್ಲಾ ತಾಲ್ಲೂಕು ಸಮಿತಿಗಳ ಕಛೇರಿಯಲ್ಲಿ ದೊರೆಯುವಂತೆ ವ್ಯವಸ್ಥೆ ಕಲ್ಪಿಸಲಾಗುವುದು.
  2. ಸಂಘದ ಕೇಂದ್ರ, ಜಿಲ್ಲೆ ಹಾಗೂ ತಾಲ್ಲೂಕು ಸಮಿತಿಗಳಿಗೆ ಸಂಬಂಧಿಸಿದಂತೆ ಅವುಗಳ ಚಟುವಟಿಕೆಗಳ ಮಾಹಿತಿಗಳನ್ನೊಳಗೊಂಡ ಮಾಸಿಕ ಪತ್ರಿಕೆಯನ್ನು ಆರಂಭಿಸಲು ಕ್ರಮವಹಿಸಲಾಗುವುದು.

ಕ್ರೀಡಾಕೂಟ

  1. ಕ್ರೀಡೆಗಳಿಗೆ ಮತ್ತಷ್ಟು ಆಧ್ಯತೆ ನೀಡುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದು ಕೆಂದ್ರ, ಜಿಲ್ಲೆ ಹಾಗೂ ತಾಲ್ಲೂಕು ಸಮಿತಿಗಳ ಮಟ್ಟದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸಿ ಬಹುಮಾನಗಳನ್ನು ನೀಡುವ ಮುಖೇನ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಿ ಉತ್ತೇಜನ ನೀಡಲಾಗುವುದು.
  2. ದೇಶೀಯ ಕ್ರೀಡೆಗಳಿಗೆ ಆದ್ಯತೆ ನೀಡಲು ಸ್ಪರ್ಧೆಗಳನ್ನು ಆಯೋಜಿಸಲಾಗುವುದು.
  3. ಮಹಿಳೆಯರಿಗಾಗಿ ಹಾಗೂ ವಿಶೇಷ ಚೇತನ ಸದಸ್ಯರುಗಳು, ಹಿರಿಯ ವಯಸ್ಸಿನ ಸದಸ್ಯರಿಗಾಗಿಯೇ ಪ್ರತ್ಯೇಕ ಕ್ರೀಡಾಕೂಟವನ್ನು ಆಯೋಜಿಸಲಾಗುವುದು.

ಮಹಿಳಾ ಸದಸ್ಯರಿಗೆ ವಿಶೇಷ ಆದ್ಯತೆ

  1. ಮಹಿಳಾ ಗುತ್ತಿಗೆದಾರರಿಗಾಗಿಯೇ ವಿಶೇಷ ಸಮಾವೇಶವನ್ನು ಪ್ರತಿವರ್ಷ ಆಯೋಜಿಸಲಾಗುವುದು.
  2. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಂಘದಲ್ಲಿ ಆಚರಿಸಿ ಮಹಿಳಾ ಸದಸ್ಯರುಗಳನ್ನು ಗೌರವಿಸಲಾಗುವುದು.
  3. ಮಹಿಳಾ ಗುತ್ತಿಗೆದಾರರಿಗೆ ಕಾಮಗಾರಿಗಳು ದೊರೆಯುವಂತೆ ಮಾಡಲು ಗಮನವಹಿಸಲಾಗುವುದು.

Leave a Reply

Your email address will not be published. Required fields are marked *