BBMP
Loading ...

private-member-bills

Greater Bengaluru News9: ಚಳಿಗಾಲದ ಸಂಸತ್​​ ಅಧಿವೇಶನದಲ್ಲಿ ಕೆಲವೊಂದು ಮಹತ್ವ ಮಸೂದೆಗಳನ್ನು ಶುಕ್ರವಾರ (ಡಿ.5) ರಾಜ್ಯಸಭಾ ಹಾಗೂ ಲೋಕಸಭಾ ಸದಸ್ಯರು ಮಂಡನೆ ಮಾಡಿದ್ದಾರೆ. ಅದರಲ್ಲಿ ಪ್ರಮುಖವಾದದ್ದು ಖಾಸಗಿ ಸದಸ್ಯರ ಮಸೂದೆ (Private Member Bills). ಕೆಲಸದ ಸಮಯದ ನಂತರ ಕಚೇರಿಯ ಕರೆಗಳು ಮತ್ತು ಇಮೇಲ್‌ಗಳಿಗೆ ಪ್ರತಿಕ್ರಿಯೆ ನೀಡುವ ಅಗತ್ಯ ಇಲ್ಲ. ಇದಕ್ಕಾಗಿ “ರೈಟ್ ಟು ಡಿಸ್ಕನೆಕ್ಟ್ ಬಿಲ್ 2025” (ದೂರವಾಣಿ ಸಂಪರ್ಕ ಕಡಿತಗೊಳಿಸುವ ಹಕ್ಕು)ನ್ನು ಪರಿಚಯಿಸುತ್ತಿದೆ. ಈ ಮೂಲಕ ಉದ್ಯೋಗಿಗಳಿಗೆ ಕೆಲಸದ ವಿಚಾರದಲ್ಲಾಗುವ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶವಾಗಿದೆ. ಈ ಮಸೂದೆಯನ್ನು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಮಂಡಿಸಿದ್ದಾರೆ .ಸರ್ಕಾರವು ಕಾನೂನನ್ನು ತರಬೇಕೆಂದು ಭಾವಿಸುವ ವಿಷಯಗಳ ಕುರಿತು ಮಸೂದೆಗಳನ್ನು ಮಂಡಿಸಲು ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಿಗೆ ಅವಕಾಶವಿದೆ.

ಇದು ಕೆಲಸದ ಸಮಯ ಮತ್ತು ರಜಾದಿನಗಳಲ್ಲಿ ಕೆಲಸಕ್ಕೆ ಸಂಬಂಧಿಸಿದ ದೂರವಾಣಿ ಕರೆಗಳು ಮತ್ತು ಇಮೇಲ್‌ಗಳಿಂದ “ರೈಟ್ ಟು ಡಿಸ್ಕನೆಕ್ಟ್ ಬಿಲ್ 2025” ನ್ನು ಪ್ರತಿಯೊಬ್ಬ ಉದ್ಯೋಗಿಗೆ ನೀಡಲು ನೌಕರರ ಕಲ್ಯಾಣ ಪ್ರಾಧಿಕಾರವನ್ನು ರಚಿಸಲು ಪ್ರಸ್ತಾಪಿಸುತ್ತದೆ.ಈ ಮೂಲಕ ಖಾಸಗಿ ಉದ್ಯೋಗಿಗಳ ಹಕ್ಕುಗಳ ರಕ್ಷಣೆಯನ್ನು ಮಾಡಲಾಗುತ್ತದೆ. ಒಂದು ವೇಳೆ ಕಚೇರಿ ಉತನ್ನ ಅಧಿಕಾರಿ ಕೆಲಸ ಸಮಯದ ನಂತರವು ಕೆಲಸಕ್ಕೆ ಸಂಬಂಧಿಸಿದ ಕರೆ ಅಥವಾ ಇಮೇಲ್​​ಗಳನ್ನು ಮಾಡಿದ್ರೆ, ಅವರಿಗೆ ಈ ಮಸೂದೆಯಲ್ಲಿ ಅಥವಾ ಕಾನೂನಿನ ಅಡಿಯಲ್ಲಿ ದಂಡನೀಯ ಶಿಕ್ಷೆಗೆ ಗುರಿಪಡಿಸಬೇಕು ಎಂದು ಹೇಳಲಾಗಿದೆ. ಇದರ ಜತೆಗೆ ಹಲವು ಮಸೂದೆಯನ್ನು ಈ ವೇಳೆ ಮಂಡನೆ ಮಾಡಲಾಗಿದೆ.

ಮುಟ್ಟಿನ ಪ್ರಯೋಜನ ಮಸೂದೆ:
ಕಾಂಗ್ರೆಸ್ ಸಂಸದೆ ಕಡಿಯಂ ಕಾವ್ಯ ಅವರು ಮುಟ್ಟಿನ ಪ್ರಯೋಜನ ಮಸೂದೆಯನ್ನು ಪರಿಚಯಸಿದ್ದರೆ. ಈ ಮೂಲಕ ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ನೀಡಿಬೇಕಾದ ಸೌಲಭ್ಯಗಳು ಹಾಗೂ ಬೆಂಬಲದ ಬಗ್ಗೆ ಈ ಮಸೂದೆ ಪ್ರಸ್ತಾಪಿಸುತ್ತದೆ. ಮುಟ್ಟಿನ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಕೆಲವು ಪ್ರಯೋಜನಗಳನ್ನು ಒದಗಿಸಲು ಕಾನೂನು ಚೌಕಟ್ಟನ್ನು ರೂಪಿಸಲು ಈ ಮಸೂದೆ ಪ್ರಯತ್ನಿಸುತ್ತದೆ. ಇದೇ ವೇಳೆ ಈ ವಿಚಾಕ್ಕೆ ಸಂಬಂಧಿಸಿದಂತೆ ಎಲ್‌ಜೆಪಿ ಪಕ್ಷ ಸಂಸದೆ ಶಾಂಭವಿ ಚೌಧರಿ ಅವರು, ಕೆಲಸ ಮಾಡುವ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆಯನ್ನು ನೀಡುವುದನ್ನು ಮತ್ತಷ್ಟು ಭದ್ರಪಡಿಸಲು ಹಾಗೂ ಮುಟ್ಟಿನ ಸಮಯದಲ್ಲಿ ಮುಟ್ಟಿನ ನೈರ್ಮಲ್ಯ ಸೌಲಭ್ಯಗಳು ಮತ್ತು ಇತರ ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಒಂದು ಶಾಸನವನ್ನು ಪರಿಚಯಿಸಿದರು.

ಪತ್ರಕರ್ತ ಮಸೂದೆ
ಪತ್ರಕರ್ತ (ಹಿಂಸೆ ತಡೆಗಟ್ಟುವಿಕೆ ಮತ್ತು ರಕ್ಷಣೆ) ಮಸೂದೆ, 2024 ಕೆಳಮನೆಯಲ್ಲಿ ವಿಶಾಲದಾದ ಪ್ರಕಾಶ್‌ಬಾಪು ಪಾಟೀಲ್ ಅವರು ಈ ಮಸೂದೆಯನ್ನು ಮಂಡಿಸಿದರು. ಇದು “ಪತ್ರಕರ್ತರ ಮೇಲಿನ ಹಿಂಸಾಚಾರವನ್ನು ತಡೆಗಟ್ಟುವುದು ಮತ್ತು ಪತ್ರಕರ್ತರು, ಅವರ ಆಸ್ತಿಗಳ ರಕ್ಷಣೆ ಮತ್ತು ಅದಕ್ಕೆ ಸಂಬಂಧಿಸಿದ ಅಥವಾ ಪ್ರಾಸಂಗಿಕ ವಿಷಯಗಳಿಗೆ ರಕ್ಷಣೆ ನೀಡುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ. ಈ ಹಲವು ವಿಚಾರಗಳಿಗೆ ಸಂಬಂಧಿಸಿದ ಮಸೂದೆಗಳನ್ನು ರಾಜ್ಯಸಭಾ ಹಾಗೂ ಲೋಕಸಭಾ ಸದಸ್ಯರು ಮಂಡಿಸಿದ್ದಾರೆ.

Leave a Reply

Your email address will not be published. Required fields are marked *