BBMP
Loading ...

GBA

Greater Bengaluru News9 : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ತಾನು ವಿತರಿಸುವ ಇ-ಖಾತಾ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಗಳನ್ನು ಕೈಗೊಂಡಿದ್ದು, ನಗರ ಸಮೀಕ್ಷಾ ಯೋಜನೆ ಯುಪಿಒಆರ್ (UPOR) ಮೂಲಕ ಈಗಾಗಲೇ ಸಿದ್ಧಪಡಿಸಲಾಗಿರುವ ಆಸ್ತಿ ನಕ್ಷೆಗಳನ್ನು ಡ್ರೋನ್ ದೃಶ್ಯಗಳೊಂದಿಗೆ ಸಂಯೋಜಿಸಲಾಗಿದೆ. ಇದರೊಂದಿಗೆ ಇ-ಖಾತಾ ಈಗ ಸಂಪೂರ್ಣ ಡಿಜಿಟಲ್ ಆಸ್ತಿ ದಾಖಲೆಯಾಗಿ ರೂಪಾಂತರಗೊಂಡಿದ್ದು, ಯಾವುದೇ ಸ್ಥಿರಾಸ್ತಿ ಮಾಲೀಕರ ಫೋಟೋ, ಹೆಸರು, ಆ ಆಸ್ತಿ ಇರುವ ಜಾಗ, ವಿದ್ಯುತ್ ಸಂಪರ್ಕ ಸೇರಿದಂತೆ ಆಸ್ತಿಗೆ ಸಂಬಂಧಿಸಿದ ಎಲ್ಲಾ ಪ್ರಾಥಮಿಕ ಮಾಹಿತಿಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇದರಿಂದ ಸೈಟು, ಮನೆಗಳನ್ನು ಕೊಳ್ಳುವವರಿಗೆ ಹೆಚ್ಚಿನ ಅನುಕೂಲವಾಗುತ್ತದೆ.

ಈ ಕೆಲಸವನ್ನು ಕಳೆದ ಎರಡು ವರ್ಷಗಳಿಂದ ಬೆಂಗಳೂರು ನಗರದಲ್ಲಿ ಆದಾಯ ಇಲಾಖೆ ಸಹಕಾರದೊಂದಿಗೆ ನಿರ್ವಹಿಸಲಾಗಿದ್ದು, ಇದು ದೇಶದಲ್ಲಿ ಮೊದಲ ರೀತಿಯ ಪ್ರಯತ್ನವೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಇ-ಖಾತಾ ಮೂಲಕ ಸಿಗಲಿರುವ ಆಸ್ತಿಯ 9 ಪ್ರಮುಖ ಮಾಹಿತಿ:

  1. ಮಾಲೀಕರ ಸಂಪೂರ್ಣ ಮಾಹಿತಿ
  2. ಆಸ್ತಿ ವಿವರಗಳು (ಅಳತೆ, ಸದ್ಯಕ್ಕೆ ಯಾರ ಬಳಕೆಯಲ್ಲಿದೆ ಇತ್ಯಾದಿ)
  3. ಆಸ್ತಿಯ ಫೋಟೋ
  4. ಮಾಲೀಕರ ಫೋಟೋ
  5. GPS ಮೂಲಕ ಆಸ್ತಿಯ ನಿಖರವಾದ ಸ್ಥಳ.
  6. ಡಿಜಿಟಲ್ ನಕ್ಷೆ ಹಾಗೂ ಸ್ಥಳದ ಓವರ್-ವ್ಯೂ ಚಿತ್ರ
  7. ಆಸ್ತಿ ತೆರಿಗೆ ಹಾಗೂ ಉಪಯೋಗ ವಿವರಗಳು
  8. BESCOM ಮೀಟರ್ ಸಂಖ್ಯೆ
  9. ಆಸ್ತಿ ಸ್ವಾಧೀನದ ದಾಖಲೆಯ ಕ್ರಮಸಂಖ್ಯೆ

UPOR ಎಂದರೇನು?
UPOR ಎಂದರೆ “Urban Property Ownership Records” (ನಗರ ಆಸ್ತಿ ಮಾಲೀಕತ್ವ ದಾಖಲೆ). ಇದು ನಗರ ಪ್ರದೇಶಗಳ ಆಸ್ತಿಗಳ ಸರ್ವೇ, ಮಾಪನ, ಗಡಿ ನಿಶ್ಚಯ, ಮಾಲೀಕತ್ವ ಮತ್ತು ದಾಖಲೆಗಳನ್ನು ಡಿಜಿಟಲ್ ರೀತಿಯಲ್ಲಿ ಸರಿಯಾಗಿ ದಾಖಲಿಸುವ ಒಂದು ವ್ಯವಸ್ಥೆ. ನಗರ ಆಸ್ತಿಗಳ ನಿಖರ ಸರ್ವೇ ಮತ್ತು ಮ್ಯಾಪಿಂಗ್, ಗಡಿ ವಿವಾದಗಳನ್ನು ಕಡಿಮೆ ಮಾಡುವುದು, ಮಾಲೀಕತ್ವ ದಾಖಲೆಗಳಿಗೆ ಏಕೀಕೃತ ಡಿಜಿಟಲ್ ವ್ಯವಸ್ಥೆ, ಭವಿಷ್ಯದಲ್ಲಿ ಆಸ್ತಿ ಸಂಬಂಧಿತ ವ್ಯವಹಾರಗಳನ್ನು ಸುಲಭಗೊಳಿಸುವುದು ಇದರ ಮೂಲ ಉದ್ದೇಶ. ಅಂದರೆ, UPOR ಮೂಲಕ ನಗರದ ಪ್ರತಿಯೊಂದು ಆಸ್ತಿಯ ನಕ್ಷೆ, ಗಡಿ, ಮಾಲೀಕತ್ವ, ದಾಖಲೆಗಳನ್ನು ಅತ್ಯಂತ ನಿಖರವಾಗಿ ಡಿಜಿಟಲ್ ರೂಪದಲ್ಲಿ ಸೃಷ್ಟಿಸಲಾಗುತ್ತದೆ.

ಅಕ್ರಮ ಸೈಟುಗಳಿಗೆ ಖಾತೆ: ಕಂದಾಯ ಅಧಿಕಾರಿಗಳ ಇಡೀ ತಂಡವನ್ನೇ ವಜಾಗೊಳಿಸಿದ
ಬೆಂಗಳೂರಿನಲ್ಲಿ ಅಕ್ರಮ ಬಡಾವಣೆಗಳ ಹಾವಳಿ ಹತ್ತಿಕ್ಕಲು ಕಂದಾಯ ಇಲಾಖೆಯು ದಿಟ್ಟ ಕ್ರಮ ಕೈಗೊಂಡಿದೆ. ಇದರ ಜೊತೆಗೆ, ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸಹ ಅಕ್ರಮ ಬಡಾವಣೆಗಳ ವಿಚಾರದಲ್ಲಿ ಶೂನ್ಯ ಸಹಿಷ್ಣುತೆ (Zero Tolerance) ನೀತಿಯನ್ನು ಅಳವಡಿಸಿಕೊಂಡಿದೆ. ಈಗಾಗಲೇ ಬೆಂಗಳೂರು ಸುತ್ತಮುತ್ತಲಿನ ಅಕ್ರಮ ಬಡಾವಣೆಗಳನ್ನು ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ. ಬೊಮ್ಮನಹಳ್ಳಿಯ ಬೇಗೂರು ವಿಭಾಗದ ಅನಧಿಕೃತ ಬಡಾವಣೆಗಳಲ್ಲಿನ ನಿವೇಶನಗಳಿಗೆ ಅಕ್ರಮವಾಗಿ ‘ಬಿ ಖಾತಾ’ ನೀಡಿದ ಆರೋಪದಡಿ ಆರು ಕಂದಾಯ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಇಂತಹ ಕಠಿಣ ಕ್ರಮ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು.

ಸರ್ಕಾರಕ್ಕೆ ಮಹಾ ವಂಚನೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆರು ಸಿಬ್ಬಂದಿ ಅಮಾನತು!

Leave a Reply

Your email address will not be published. Required fields are marked *