BBMP
Loading ...

KEBEA

Greater Bengaluru News9 : ಇಂದು (ನ,29) ನಡೆದ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಇಂಜಿನಿಯರುಗಳ ಸಂಘದ ( KEBEA ) ಚುನಾವಣೆಯಲ್ಲಿ ಇಂಜಿನಿಯರ್​ ಬಸವಣ್ಣ. ಸಿ ಮತ್ತು ಅವರ ತಂಡ ಭರ್ಜರಿ ಜಯ ದಾಖಲಿಸಿತು. ಬಸವಣ್ಣನವರ ಆರ್ಭಟಕ್ಕೆ ಎದುರಾಳಿ ತಂಡದವರು ಅಕ್ಷರಶಃ ಧೂಳಿಪಟವಾದರು.

ನಗರದ ರೇಸ್ ಕೋರ್ಸ್ ಅಡ್ಡ ರಸ್ತೆಯಲ್ಲಿರುವ ಸಿಲ್ವರ್ ಜುಬಿಲಿ ಬಿಲ್ಡಿಂಗ್. ನಂ. 28ರಲ್ಲಿ ಇಂದು ಚುನಾವಣೆ ನಡೆಯಿತು. ಬಸವಣ್ಣ ಅವರ ದೂರದೃಷ್ಟಿ, ಜವಾಬ್ದಾರಿತನ, ನವೀನತೆ, ಧೈರ್ಯ, ಸಂವಹನ ಕೌಶಲ್ಯ, ಪ್ರೇರಣೆ, ಸಹಾನುಭೂತಿ ಹಾಗೂ ನಿರ್ಧಾರದ ಸಾಮರ್ಥ್ಯವನ್ನು ಬಹುತೇಕ ಮಂದಿ ಈಗಾಗಲೇ ಮೆಚ್ಚಿಕೊಂಡಿದ್ದು, ಚುನಾವಣೆಯಲ್ಲಿ ಭರ್ಜರಿ ಮತಗಳೊಂದಿಗೆ ಗೆಲ್ಲಿಸುವ ಮೂಲಕ ಅವರ ತಂಡದ ಕೈಹಿಡಿದಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಬಸವಣ್ಣ ಅವರು ಸ್ಪರ್ಧೆ ಮಾಡಿದ್ದರು. ಎದುರಾಳಿ ಎದುರು 2310 ಮತಗಳನ್ನು ಪಡೆಯುವ ಮೂಲಕ ಸುಲಭ ಜಯ ಸಾಧಿಸಿದರು. ಸಂಘದ ಸೂಪರ್​ ಇಂಟೆಂಡಿಂಗ್​ ಇಂಜಿನಿಯರ್​ ಕೇಡರ್,​ ಸಂಘದ ಎಕ್ಸಿಕ್ಯೂಟಿವ್​ ಇಂಜಿನಿಯರ್​ ಕೇಡರ್​, ಅಸಿಸ್ಟೆಂಟ್​ ಎಕ್ಸಿಕ್ಯೂಟಿವ್​ ಇಂಜಿನಿಯರ್​ ಕೇಡರ್​ ಹಾಗೂ ಅಸಿಸ್ಟೆಂಟ್​ ಇಂಜಿನಿಯರ್​ ಕೇಡರ್​ ಸೇರಿದಂತೆ ಎಲ್ಲ ವಿಭಾಗದಲ್ಲೂ ಬಸವಣ್ಣ ಅವರ ತಂಡ ಎದುರಾಳಿಗಳನ್ನು ಧೂಳಿಪಟ ಮಾಡಿ ಭರ್ಜರಿ ಗೆಲುವು ಸಾಧಿಸಿತು. ಗೆಲುವಿನ ಬೆನ್ನಲ್ಲೇ ಬಸವಣ್ಣ ಮತ್ತು ಅವರ ತಂಡ ಸಂಭ್ರಮಾಚರಣೆ ಮಾಡಿದರು.

ಬಸವಣ್ಣ ಮತ್ತು ಅವರ ತಂಡದ ಗೆಲುವಿಗೆ ಕೆಇಬಿಇಎ ಅಧಿಕಾರಿಗಳು, ಹಿತೈಶಿಗಳು, ಸಂಘದ ಎಲ್ಲ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್​ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾದ ಸಿ ರಮೇಶ್​ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಇನ್ನು ಬಿಬಿಎಂಪಿ ನ್ಯೂಸ್​9 ವತಿಯಿಂದ ಹಾಗೂ ಬಿಬಿಎಂಪಿ ನ್ಯೂಸ್​9 ಸಂಪಾದಕರು ಹಾಗೂ ವಿದ್ಯುತ್​ ಗುತ್ತಿಗೆದಾರರ ಸಂಘದ ಹೋರಾಟ ಸಮಿತಿಯ ಚೇರ್ಮನ್​ ವೈ.ಎಚ್​. ಆನಂದ್​ ಅವರು ಕೂಡ ಬಸವಣ್ಣ ಮತ್ತು ಅವರ ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *