Greater Bengaluru News9 : ಬಿಹಾರ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕರ್ನಾಟಕದಲ್ಲಿ ಸಂಪುಟ ಪುನಾರಚನೆಯ ಚರ್ಚೆ ತೀವ್ರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ 12 ಸಚಿವರನ್ನು ಕೈ ಬಿಡುವ ಮೂಲಕ ಖಾಲಿ ಇರುವ 2 ಸ್ಥಾನಗಳನ್ನು ಭರ್ತಿ ಮಾಡಲು ತಯಾರಿ ನಡೆಸಿದ್ದಾರೆ. ಹೈಕಮಾಂಡ್ ಹೆಚ್ಚುವರಿ ಸೂಚನೆ ನೀಡಿದರೆ ಇನ್ನೂ ಹೆಚ್ಚು ಸಚಿವರ ಬದಲಾವಣೆ ಸಾಧ್ಯತೆ ಇದೆ.
ಕೈ ಬಿಡಬಹುದಾದ ಸಚಿವೆ/ಸಚಿವರ ಪಟ್ಟಿ
ಕೆ.ಎಚ್. ಮುನಿಯಪ್ಪ, ದಿನೇಶ್ ಗುಂಡೂರಾವ್, ಹೆಚ್.ಸಿ. ಮಹದೇವಪ್ಪ, ಶರಣಬಸ್ಪ ದರ್ಶನಾಪುರ್, ಎನ್.ಎಸ್. ಬೋಸರಾಜು, ಡಾ. ಎಂ.ಸಿ. ಸುಧಾಕರ, ಶಿವಾನಂದ ಪಾಟೀಲ್, ರಹೀಂಖಾನ್, ಎಸ್.ಎಸ್. ಮಲ್ಲಿಕಾರ್ಜುನ, ಆರ್.ಬಿ. ತಿಮ್ಮಾಪುರ್, ಕೆ. ವೆಂಕಟೇಶ್, ಡಿ. ಸುಧಾಕರ್
ಸಂಪುಟಕ್ಕೆ ಸೇರ್ಪಡೆಯಾಗಲಿರುವ ಶಾಸಕರು/ಪರಿಷತ್ ಸದಸ್ಯರು
ಯು.ಟಿ. ಖಾದರ್, ಕೆ.ಎನ್. ರಾಜಣ್ಣ, ಆರ್.ವಿ. ದೇಶಪಾಂಡೆ, ಬಿ.ಕೆ. ಹರಿಪ್ರಸಾದ್, ಎಂ. ಕೃಷ್ಣಪ್ಪ, ತನ್ವೀರ್ ಸೇಠ್, ಸಾಲೀಂ ಅಹಮದ್, ರಿಜ್ವಾನ್ ಅರ್ಶದ್, ಮಾಗಡಿ ಬಾಲಕೃಷ್ಣ, ಎನ್.ಎ. ಹ್ಯಾರಿಸ್, ರೂಪಕಲಾ ಶಶಿಧರ್, ಶಿವಲಿಂಗೇಗೌಡ, ನರೇಂದ್ರಸ್ವಾಮಿ, ಲಕ್ಷ್ಮಣ ಸವದಿ, ಪ್ರಸಾದ್ ಅಬ್ಬಯ್ಯ, ಸಿ.ಎಸ್. ನಾಡಗೌಡ, ಬೇಳೂರು ಗೋಪಾಲಕೃಷ್ಣ, ಬಸವರಾಜ ರಾಯರೆಡ್ಡಿ ಹಾಗೂ ಬಿ.ಆರ್. ಪಾಟೀಲ್.
ಸಿದ್ದರಾಮಯ್ಯ ಅವರ ಈ ಸಂಪುಟ ಪುನಾರಚನೆ ರಾಜಕೀಯ ಸಮತೋಲನವನ್ನು ಹೆಚ್ಚಿಸುವ ಮತ್ತು ಹೊಸ ಮುಖಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ನೋಡಲಾಗುತ್ತಿದೆ.


