BBMP
Loading ...

OC CC

Greater Bengaluru News9 : ಸಣ್ಣ ಜಾಗಗಳಲ್ಲಿ ಕಟ್ಟಡ ನಿರ್ಮಿಸಲು ಇರುವ ಸೆಟ್‌ಬ್ಯಾಕ್ (Setback) ನಿಯಮಗಳಲ್ಲಿ ಬದಲಾವಣೆ ಮಾಡಲು ಬೆಂಗಳೂರು ನಗರಾಭಿವೃದ್ಧಿ ಇಲಾಖೆ (UDD) ಮುಂದಾಗಿದೆ.

ಹಾಲಿ ನಿಯಮಗಳನ್ನು ಸರಳಗೊಳಿಸಿ ಎಲ್ಲೆಡೆ ಏಕರೂಪತೆ ತರಬೇಕೆಂಬ ಉದ್ದೇಶದಿಂದ ಪರಿಷ್ಕೃತ ಮಾಸ್ಟರ್ ಪ್ಲಾನ್ 2015 ಅಡಿಯಲ್ಲಿ ತಿದ್ದುಪಡಿ ಕರಡು ಅಧಿಸೂಚನೆಯನ್ನು ನವೆಂಬರ್ 11ರಂದು ಹೊರಡಿಸಲಾಗಿದೆ. ಸಾರ್ವಜನಿಕರಿಂದ 30 ದಿನಗಳೊಳಗೆ ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಸಲ್ಲಿಸಲು ಇಲಾಖೆಯು ಆಹ್ವಾನ ನೀಡಿದೆ.

ಕಟ್ಟಡ ಸೆಟ್‌ಬ್ಯಾಕ್ ಎಂದರೇನು?
ಕಟ್ಟಡ ಸೆಟ್‌ಬ್ಯಾಕ್ ಎಂದರೆ — ಕಟ್ಟಡದ ಸುತ್ತಲು ಕಡ್ಡಾಯವಾಗಿ ಬಿಡಬೇಕಾದ ಖಾಲಿ ಜಾಗ. ಅಂದರೆ, ಕಟ್ಟಡದ ಗೋಡೆ ಮತ್ತು ಆಸ್ತಿ ಗಡಿಯ ನಡುವೆ ಉಳಿಸಬೇಕಾದ ಕನಿಷ್ಠ ಅಂತರ. ಹಾಲಿ ನಿಯಮ ಪ್ರಕಾರ, ಬಿಲ್ಡರ್‌ಗಳು ಜಾಗದ ಉದ್ದ ಮತ್ತು ಅಗಲದ ಶೇಕಡಾವಾರು ಆಧಾರದಲ್ಲಿ ಸೆಟ್‌ಬ್ಯಾಕ್ ಲೆಕ್ಕ ಹಾಕಬೇಕಿತ್ತು:

  • ಮುಂಭಾಗದಲ್ಲಿ ಶೇ. 12%,
  • ಹಿಂಭಾಗದಲ್ಲಿ ಶೇ. 8%,
  • ಬದಿಗಳಲ್ಲಿ ತಲಾ ಶೇ. 8% ಖಾಲಿ ಜಾಗ ಇರಬೇಕಾಗಿತ್ತು.

ಹೊಸ ಕರಡು ಪ್ರಸ್ತಾಪದ ಮುಖ್ಯ ಅಂಶಗಳು

  1. 60 ಚ.ಮೀ (ಸುಮಾರು 20×30 ಅಡಿ) ವರೆಗೆ ಇರುವ ಜಾಗಗಳು:
  • ಮುಂಭಾಗ: 0.7 ಮೀಟರ್
  • ಉಳಿದ ಬದಿಗಳು: 0.6 ಮೀಟರ್
  1. 60–150 ಚ.ಮೀ (ಸುಮಾರು 30×40 ಹಾಗೂ 30×50 ಅಡಿ) ಜಾಗಗಳು:
  • ಮುಂಭಾಗ: 0.9 ಮೀಟರ್
  • ಉಳಿದ ಬದಿಗಳು: 0.7 ಮೀಟರ್
  1. 150 ಚ.ಮೀ ಕ್ಕಿಂತ ಹೆಚ್ಚಿರುವ ಜಾಗಗಳಿಗೆ:
  • ಹಾಲಿ ಸೆಟ್‌ಬ್ಯಾಕ್ ನಿಯಮ ಅದೇ ರೀತಿ ಮುಂದುವರೆಯುತ್ತದೆ.
  • ಕಟ್ಟಡ ಎತ್ತರ ಮತ್ತು ಇತರೆ ಹೊಸ ನಿಯಮಗಳು

150 ಚ.ಮೀ ವರೆಗೆ ಇರುವ ಜಾಗಗಳಲ್ಲಿ:
ಗರಿಷ್ಠ ಕಟ್ಟಡ ಎತ್ತರ 12 ಮೀಟರ್ ಎಂದು ನಿಗದಿ.

750 ಚ.ಮೀ ವರೆಗೆ ಇರುವ ಜಾಗಗಳಲ್ಲಿ:
ಓಪನ್ ಮೆಟ್ಟಿಲುಗಳನ್ನು ಸೆಟ್‌ಬ್ಯಾಕ್ ಒಳಗಡೆ ನಿರ್ಮಿಸಲು ಅನುಮತಿ.
ಆದರೆ — ಮಳೆನೀರನ್ನು ಭೂಮಿಯಲ್ಲಿ ಇಂಗುವ ವ್ಯವಸ್ಥೆ ಇರಬೇಕು.

ನೆಲಮಹಡಿ ಮತ್ತು ಮೇಲ್ಛಾವಣಿ ಮಹಡಿಗಳು:
ಯಾಂತ್ರಿಕ ಅಥವಾ ಹೈಡ್ರಾಲಿಕ್ ಪಾರ್ಕಿಂಗ್ ವ್ಯವಸ್ಥೆ ಬಳಸಲು ಅನುಮತಿ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ:
ನೆಲಮಹಡಿಗಳ ನಿರ್ಮಾಣಕ್ಕೆ ನಿಷೇಧ ಇರಲಿದೆ.

ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನ
ಕರಡು ಅಧಿಸೂಚನೆಗೆ ಸಂಬಂಧಿಸಿದ ಸಲಹೆ ಅಥವಾ ಆಕ್ಷೇಪಣೆಗಳನ್ನು 30 ದಿನಗಳ ಒಳಗಾಗಿ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಬಹುದು. ಈ ತಿದ್ದುಪಡಿ ಜಾರಿಗೆ ಬಂದರೆ, ಸಣ್ಣ ಜಾಗಗಳಲ್ಲಿ ಮನೆ ನಿರ್ಮಿಸುವವರಿಗೆ ಸೆಟ್‌ಬ್ಯಾಕ್ ನಿಯಮದಲ್ಲಿ ಬಹು ಮಟ್ಟದ ಸಡಿಲಿಕೆ ದೊರೆಯಲಿದೆ.

Leave a Reply

Your email address will not be published. Required fields are marked *