Greater Bengaluru News9 : 150 ಕೋಟಿಗೂ ಅಧಿಕ ಮೌಲ್ಯದ ಜಮೀನನ್ನ ಅಕ್ರಮವಾಗಿ ಸೇಲ್ ಡೀಡ್ ರಿಜಿಸ್ಟರ್ ಮಾಡಿದ್ದ ಆರೋಪ. ಬೇಗೂರು ಹೋಬಳಿ ಬೆರೆಟೇನ ಅಗ್ರಹಾರದ ಸರ್ವೆ ನಂ. 5/2 ರಲ್ಲಿನ 36 ಎಕರೆ 74 ಗುಂಟೆ & 39ಎಕರೆ 65 ಗುಂಟೆ ಜಮೀನನ್ನ ಅಕ್ರಮವಾಗಿ ಸೇಲ್ ಡೀಡ್ ಮಾಡಿದ್ರು. ಬೇಗೂರು ಬಳಿಯಲ್ಲಿ ಒಟ್ಟು 75 ಎಕರೆಯನ್ನ ಅಕ್ರಮವಾಗಿ ಸೇಲ್ ಮಾಡಿದ್ದ ಸಬ್ ರಿಜಿಸ್ಟರ್ ರೂಪ.
ಬಿಟಿಎಂ ಲೇಔಟ್ ಸಬ್ ರಿಜಿಸ್ಟರ್ ಆಗಿದ್ದ ರೂಪ. ಮುಕುಂದ ಎನ್ನುವವರಿಗೆ ಸೇರಿದ್ದ ಜಮೀನನ್ನ ನಕಲಿ ದಾಖಲೆ ಸೃಷ್ಟಿಸಿ ಸೇಲ್ ಡೀಡ್. ಮುಕುಂದರ ತಂದೆ ನಾಗರಾಜ್ ಶೆಟ್ಟಿ ಹೆಸರಿನಲ್ಲಿದ್ದ ಜಮೀನು. ಗಣೇಶ್ ಎನ್.ವೈ ಎಂಬಾತ ನಾಗರಾಜ್ ಶೆಟ್ಟಿ ಪುತ್ರ ಎನ್ನುವಂತೆ ಬಿಂಬಿಸಿ ನಕಲಿ ಸೇಲ್ ಡೀಡ್ ಮಾಡಲಾಗಿತ್ತು. ಅಸಲಿಗೆ ನಾಗರಾಜ್ ಶೆಟ್ಟಿರಿಗೆ ಗಣೇಶ್ ಎನ್.ವೈ ಎಂಬ ಮಗನೇ ಇಲ್ಲ.
ನಾಗರಾಜ್ ಶೆಟ್ಟಿಯವರ ಪುತ್ರ ಮುಕುಂದ. ನಾಗರಾಜ್ ಶೆಟ್ಟರ ಸ್ವತ್ತಲ್ಲಿ ನಕಲಿ ದಾಖಲೆ ಸೃಷ್ಟಿಸಿ ಟ್ರಸ್ಟ್ ಹೆಸರಲ್ಲಿ ಜಮೀನಿಗೆ ಬಂದಾಗ ಅಕ್ರಮ ಎಸಗಿರೋದು ಗೊತ್ತಾಗಿತ್ತು. ಈ ಬಗ್ಗೆ ಪರಪ್ಪನ ಅಗ್ರಹಾರ ಠಾಣೆಗೆ ದೂರು ನೀಡಿದ್ದ ಮುಕುಂದ. ಕೇಸ್ ಸಿಸಿಬಿಗೆ ವರ್ಗಾವಣೆಗೊಂಡು ಸಿಸಿಬಿಯಿಂದ ಸಬ್ ರಿಜಿಸ್ಟಾರ್ ರೂಪ ಹಾಗೂ ನವೀನ್ ಎಂಬಾತನ ಬಂಧನ.


