BBMP
Loading ...

Khata

Greater Bengaluru News9 : ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (GBA) ಬಿ ಖಾತಾ (B Khata) ಆಸ್ತಿಯನ್ನು ಎ ಖಾತೆ (A Khata)ಗೆ ಪರಿವರ್ತಿಸಲು ಅವಕಾಶ ನೀಡಿದೆ. ಈ ಸಂಬಂಧ ನವೆಂಬರ್ 1ರಿಂದ ಫೆಬ್ರವರಿ ಮೊದಲ ವಾರದವರೆಗೆ, ಅಂದರೆ 100 ದಿನಗಳ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಇದರ ಮೂಲಕ ಸಾವಿರಾರು ಬಿ ಖಾತಾದಾರರಿಗೆ ತಮ್ಮ ಆಸ್ತಿಗಳಿಗೆ ಸರಿಯಾದ ದಾಖಲೆ ಪಡೆಯುವ ದಾರಿ ಸುಗಮಗೊಂಡಿದೆ.

ನಗರದಲ್ಲಿ ಒಟ್ಟು 25 ಲಕ್ಷಕ್ಕೂ ಹೆಚ್ಚು ಆಸ್ತಿಗಳಿದ್ದು, ಸುಮಾರು 7.5 ಲಕ್ಷ ಆಸ್ತಿಗಳು ಬಿ ಖಾತಾ ವ್ಯಾಪ್ತಿಯಲ್ಲಿವೆ. ಬಿ ಖಾತಾ ಹೊಂದಿರುವ ಆಸ್ತಿ ಮಾಲೀಕರು ಬ್ಯಾಂಕ್‌ಗಳಲ್ಲಿ ಸಾಲ ಸಿಗದಿರುವುದು, ಕಟ್ಟಡ ಯೋಜನೆಗೆ ಅನುಮೋದನೆ ದೊರೆಯದಿರುವುದು ಸೇರಿದಂತೆ ಹಲವಾರು ಅಡಚಣೆಗಳನ್ನು ಎದುರಿಸುತ್ತಿದ್ದರು. ಈ ಸಮಸ್ಯೆಗಳಿಗೆ ಪರಿಹಾರವಾಗಿ ಪ್ರಾಧಿಕಾರವು ಪರಿವರ್ತನೆಗೆ ಅವಕಾಶ ಕಲ್ಪಿಸಿದೆ.

ಆನ್‌ಲೈನ್‌ನಲ್ಲಿ ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆ ಪ್ರಕ್ರಿಯೆ:

  1. ಮೊದಲು https://bbmp.karnataka.gov.in/BtoAKhata ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
  2. ಮೊಬೈಲ್ ಸಂಖ್ಯೆ, ಕ್ಯಾಪ್ಚಾ ಮತ್ತು ಓಟಿಪಿ ನಮೂದಿಸಿ ಲಾಗಿನ್ ಆಗಬೇಕು.
  3. “B-Khata to A-Khata Conversion” ಅಥವಾ “ಒಂದೇ ಪ್ಲಾಟ್ ಅನುಮೋದನೆ” ಆಯ್ಕೆ ಮಾಡಿ.
  4. ಪರಿವರ್ತಿಸಬೇಕಾದ ಖಾತೆ ಐಡಿಯನ್ನು ನಮೂದಿಸಿ ‘ಫೆಚ್’ ಕ್ಲಿಕ್ ಮಾಡಬೇಕು.
  5. ಆಧಾರ್ ದೃಢೀಕರಣ ಮತ್ತು ಇ-ಕೆವೈಸಿ ಪರಿಶೀಲನೆ ಮಾಡಬೇಕು.
  6. ಸೈಟ್‌ಗೆ ಸಂಬಂಧಿಸಿದ ಸರ್ವೆ ಸಂಖ್ಯೆ ಮತ್ತು ಇತರ ವಿವರಗಳನ್ನು ನಮೂದಿಸಬೇಕು.
  7. ಕೃಷಿಯಿಂದ ಕೃಷಿಯೇತರಕ್ಕೆ (DC Conversion) ಆದೇಶದ ಪ್ರತಿಯನ್ನು ಸೇರಿಸಬೇಕು.
  8. ಆಸ್ತಿಯ ಪ್ರಕಾರ ಮತ್ತು ಕಟ್ಟಡದ ರೇಖಾಚಿತ್ರವನ್ನು ಅಪ್‌ಲೋಡ್ ಮಾಡಬೇಕು.
  9. ರಸ್ತೆಗಳು ಅಥವಾ ಪ್ಲಾಟ್‌ನ ಹತ್ತಿರದ ಪ್ರದೇಶಗಳ ದಾಖಲೆಗಳನ್ನು ಸೇರಿಸಬೇಕು.
  10. ಒಬ್ಬರಿಗಿಂತ ಹೆಚ್ಚು ಮಾಲೀಕರಿದ್ದರೆ, ಇತರ ಮಾಲೀಕರ ಇ-ಕೆವೈಸಿ ಮತ್ತು ಫೋನ್ ನಂಬರ್ನ ಪರಿಶೀಲನೆ ಮಾಡಬೇಕು.
  11. ಅರ್ಜಿಯನ್ನು ಸಲ್ಲಿಸಿ, ಅಗತ್ಯ ಶುಲ್ಕ ಪಾವತಿಸಿ.
  12. ಬಳಿಕ ಡ್ಯಾಶ್‌ಬೋರ್ಡ್‌ನಿಂದ ಸ್ವೀಕೃತಿ ಸ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಈ ಹೊಸ ಕ್ರಮದ ಮೂಲಕ ಬಿ ಖಾತಾ ಹೊಂದಿರುವವರು ಕಾನೂನುಬದ್ಧವಾಗಿ ತಮ್ಮ ಆಸ್ತಿಗಳಿಗೆ ಎ ಖಾತೆ ಪಡೆಯುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *