Greater Bengaluru News9 : ರೈತರು ಹಾಗೂ ಸಾರ್ವಜನಿಕರು ವಿದ್ಯುತ್ ಸಂಬಂಧಿತ ಕುಂದು ಕೊರತೆಗಳ ಶೀಘ್ರ ಪರಿಹಾರಕ್ಕೆ ಬೆಸ್ಕಾಂನ ಸಹಾಯವಾಣಿ ಸಂಖ್ಯೆ 1912 ಹಾಗೂ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ ʼವಾಟ್ಸ್ ಆ್ಯಪ್ʼ ಸಹಾಯವಾಣಿ ಸಂಖ್ಯೆಗಳಿಗೆ ದೂರು ದಾಖಲಿಸಲು ಬೆಸ್ಕಾಂ ಮನವಿ ಮಾಡಿದೆ. ರೈತರ ಹೊಲ-ಗದ್ದೆಗಳಲ್ಲಿರುವ ವಿದ್ಯುತ್ ಪರಿವರ್ತಕಗಳು ವಿಫಲತೆ ಹೊಂದಿದಾಗ ಹಾಗೂ ವಿದ್ಯುತ್ ಸಂಬಂಧಿತ ದೂರುಗಳಿದ್ದಲ್ಲಿ ತಕ್ಷಣ 1912 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಲು ಬೆಸ್ಕಾಂ ತಿಳಿಸಿದೆ.
ಒಂದು ವೇಳೆ 1912 ಸಹಾಯವಾಣಿ ಸಂಖ್ಯೆ ಲಭ್ಯವಾಗದಿದ್ದಲ್ಲಿ ರೈತರು ತಮ್ಮ ಜಿಲ್ಲೆಗೆ ಸಂಬಂಧಿಸಿದ ʼವಾಟ್ಸ್ ಆ್ಯಪ್ʼ ಸಹಾಯವಾಣಿ ಸಂಖ್ಯೆಗಳಿಗೆ ದೂರುಗಳನ್ನು ದಾಖಲಿಸಬಹುದಾಗಿದೆ. ಬೆಸ್ಕಾಂನ ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ, ಉತ್ತರ, ಪೂರ್ವ ಹಾಗು ಪಶ್ಚಿಮ ವೃತ್ತಗಳಿಗೆ 4 ವಾಟ್ಸ್ ಆ್ಯಪ್ ಸಹಾಯವಾಣಿ ಸಂಖ್ಯೆಗಳು ಹಾಗೂ ದಾವಣಗೆರೆ, ಚಿತ್ರದುರ್ಗ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ , ಚಿಕ್ಕಬಳ್ಳಾಪುರ ಹಾಗು ಕೋಲಾರ ಜಿಲ್ಲೆಗಳ ಬೆಸ್ಕಾಂ ವೃತ್ತಗಳಿಗೆ ತಲಾ ಒಂದು ʼವಾಟ್ಸ್ ಆ್ಯಪ್ʼ ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗಿದೆ.
ವಾಟ್ಸ್ ಆ್ಯಪ್ ಸಹಾಯವಾಣಿ ಸಂಖ್ಯೆಗಳ ವಿವರ
ಬೆಂಗಳೂರು ನಗರ ಜಿಲ್ಲೆ: ದಕ್ಷಿಣ ವೃತ್ತ: 8277884011, ಪಶ್ಚಿಮ ವೃತ್ತ: 8277884012, ಪೂರ್ವ ವೃತ್ತ: 8277884013, ಉತ್ತರ ವೃತ್ತ: 8277884014.
ಕೋಲಾರ ಜಿಲ್ಲೆ: 8277884015, ಚಿಕ್ಕಬಳ್ಳಾಪುರ ಜಿಲ್ಲೆ: 8277884016, ಬೆಂಗಳೂರು ಗ್ರಾಮಾಂತರ ಜಿಲ್ಲೆ : 8277884017, ರಾಮನಗರ ಜಿಲ್ಲೆ : 8277884018, ತುಮಕೂರು ಜಿಲ್ಲೆ : 8277884019, ಚಿತ್ರದುರ್ಗ ಜಿಲ್ಲೆ : 8277884020, ದಾವಣಗರೆ ಜಿಲ್ಲೆ: 8277884021
ವಿದ್ಯುತ್ ಸಮಸ್ಯೆಗಳ ಕುರಿತು ರೈತರು ಹಾಗೂ ಸಾರ್ವಜನಿಕರು ದೂರುಗಳನ್ನು ಬೆಸ್ಕಾಂನ ಸಹಾಯವಾಣಿ ಸಂಖ್ಯೆ 1912 ಗಾಗಲಿ ಅಥವಾ ಸಂದೇಶಗಳನ್ನು ತಮ್ಮ ಪ್ರದೇಶಕ್ಕೆ ಸಂಬಂಧಿಸಿದ ʼವಾಟ್ಸ್ ಆ್ಯಪ್ʼ ಸಂಖ್ಯೆಗಳಿಗಾಗಲಿ ಕಳುಹಿಸಿದ ಕೂಡಲೇ, 1912 ಸಹಾಯವಾಣಿ ಕೇಂದ್ರದ ಗ್ರಾಹಕ ಸೇವಾ ಪ್ರತಿನಿಧಿಗಳು ದೂರುಗಳನ್ನು ಅಥವಾ ಸಂದೇಶಗಳನ್ನು ಸಂಬಂಧಿಸಿದ ಬೆಸ್ಕಾಂ ಉಪ ವಿಭಾಗಗಳಿಗೆ ರವಾನಿಸಿ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.


