Greater Bengaluru News9 : ನಾಯಿಗೆ ಹೆದರಿ ಓಡುವಾಗ ಆಕಸ್ಮಿಕವಾಗಿ ನೀರಿಲ್ಲದ ಆಳವಾದ ಬಾವಿಗೆ ಬಿದ್ದ ಜಿಂಕೆಯನ್ನು ಚಿಕ್ಕಬಳ್ಳಾಪುರದಲ್ಲಿ ರಕ್ಷಣೆ ಮಾಡಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಗಾಂಡ್ಲಾಹೊಸಹಳ್ಳಿ ಗ್ರಾಮದಲ್ಲಿ ಜಿ.ಕೆ.ಕ್ಯಾತಪ್ಪ ಎಂಬುವವರ ಹೊಲದಲ್ಲಿ ನಾಯಿಯು ಜಿಂಕೆಯನ್ನು ಅಟ್ಟಾಡಿಸಿಕೊಂಡು ಜಿಂಕೆಯನ್ನು ಹಿಡಿಯಲು ಓಡಿ ಬರುತ್ತಿರುವಾಗ ರಬಸವಾಗಿ ಓಡಿ ಗಾಬರಿಗೊಂಡ ಜಿಂಕೆಯು ಅಂದಾಜು 30×30 ಅಡಿ ವಿಸ್ತಾರವಾದ 30 ಅಡಿ ಆಳದ ತೇರೆದ ನೀರಿಲ್ಲದ ಬಾವಿಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿತು.
ಸ್ಥಳೀಯ ನಿವಾಸಿಗಳು ಘಟನೆಯ ವಿಷಯವನ್ನು ಚಿಕ್ಕಬಳ್ಳಾಪುರ ಅಗ್ನಿಶಾಮಕ ಠಾಣೆಯ ನಿಯಂತ್ರಣ ಕೊಠಡಿಗೆ ದೂರವಾಣಿಗೆ ಕರೆ ಮಾಡಿ ತಿಳಿಸಿದರು. ಕರೆ ಬಂದ ತಕ್ಷಣ ಜಲವಾಹನದೊಂದಿಗೆ ಅಗ್ನಿಶಾಮಕ ತಂಡ ಸ್ಥಳಕ್ಕೆ ದೌಡಾಯಿಸಿ ಕಾರ್ಯ ಪ್ರವೃತ್ತರಾಗಿ ಸುಮಾರು 30 ಅಡಿ ಆಳದ ಬಾವಿಯಲ್ಲಿ ಹಗ್ಗಗಳ ಸಹಾಯದಿಂದ ಕೆಳಗಿಳಿದು ಸುಮಾರು 1 ಗಂಟೆ 25 ನಿಮಿಷಗಳ ಕಾಲ ಶ್ರಮ ವಹಿಸಿ ಸಿಬ್ಬಂದಿಯವರುಗಳು ಹಗ್ಗಗಳ ಸಹಾಯದಿಂದ ಪ್ರಾಣ ರಕ್ಷಣೆಗಾಗಿ ಕೂಗುತ್ತಿದ್ದ ಜಿಂಕೆಯನ್ನು ಜೀವಂತವಾಗಿ ಅಗ್ನಿಶಾಮಕ ಇಲಾಖೆಯ ತಂಡ ರಕ್ಷಣೆ ಮಾಡಿತು.

ಈ ಸಮಯ ಪ್ರಜ್ಞೆ ಕಾರ್ಯವನ್ನು ವೀಕ್ಷಿಸಿದ ಗಾಂಡ್ಲಾಹೊಸಹಳ್ಳಿ ಗ್ರಾಮದ ಸ್ಥಳೀಯ ನಿವಾಸಿಗಳು ಅಗ್ನಿಶಾಮಕ ತಂಡದ ಕಾರ್ಯ ದಕ್ಷತೆಯನ್ನು ಮೆಚ್ಚಿ ಶ್ಲಾಘಿಸಿ ಹಾಗೂ ಹಸ್ತಲಾಘವ ಮಾಡಿ ಜಿಂಕೆಯ ಪ್ರಾಣ ರಕ್ಷಣೆ ಮಾಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು.
ಪ್ರಮುಖ ಅಗ್ನಿಶಾಮಕರವರಾದ ರವೀಂದ್ರ ಸಂಗಮರವರ ನೇತ್ರತ್ವದಲ್ಲಿ, ಹುಲ್ಲಪ್ಪಗೌಡ ಗದ್ದಿಗೌಡರ, ಸಿದ್ದಪ್ಪ ಜರಳಿ, ರಾಜು ಮುರಕುಟ್ಟಿ ಹಾಗೂ ಮಲ್ಲಿಕಾರ್ಜುನ ಕಾಡಪ್ಪನವರ ಭಾಗವಹಿಸಿದ್ದರು.


