Greater Bengaluru News9 : ಕರ್ನಾಟಕ ಪೊಲೀಸ್ ಇಲಾಖೆಯ ಕಾನ್ಸ್ಟೇಬಲ್ಗಳು ಮತ್ತು ಹೆಚ್ಸಿಗಳು ಧರಿಸುತ್ತಿದ್ದ ಬ್ರಿಟಿಷ್ ಕಾಲದ ಟೋಪಿ (Cap) ಬದಲಾವಣೆಗೆ ಇದೀಗ ಕಾಲ ಸನ್ನಿಹಿತವಾಗಿದೆ. ಸ್ಲೋಚ್ ಹ್ಯಾಟ್ಗೆ ಕೊಕ್ ನೀಡಲಾಗುತ್ತಿದ್ದು, ಅದರ ಬದಲಿಗೆ ಪೀಕ್ ಕ್ಯಾಪ್ (Peak Caps) ವಿತರಿಸುವ ಗೃಹ ಇಲಾಖೆ ಮುಂದಾಗಿದೆ. ಹೊಸ ಟೋಪಿಗಳು ಅಕ್ಟೋಬರ್ 28ರಿಂದಲೇ ಪೊಲೀಸರ ಕೈಸೇರಲಿವೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಅ.28ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ. ಪರಮೇಶ್ವರ ಅವರು ಹೊಸ ಕ್ಯಾಪ್‌ಗಳ ವಿತರಣೆ ಮಾಡಲಿದ್ದಾರೆ. ಬಳಿಕ ಬೇರೆ ಜಿಲ್ಲೆಗಳ ಕಾನ್ಸ್ಟೇಬಲ್ಗಳಿಗೂ ಹಂತ ಹಂತವಾಗಿ ಕ್ಯಾಪ್ ವಿತರಣೆ ಮಾಡಲಾಗುವುದು.
ಜೂನ್‌ನಲ್ಲಿ ನಡೆದಿದ್ದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಕ್ಯಾಪ್ ಬದಲಿಸುವ ಬಗ್ಗೆ ತೀರ್ಮಾನವಾಗಿತ್ತು. ತೆಲಂಗಾಣ ಪೊಲೀಸರು ಧರಿಸುವ ಪೀಕ್ ಕ್ಯಾಪ್ ಬಗ್ಗೆ ತೀರ್ಮಾನವಾಗಿತ್ತು. ಸದ್ಯ ಹೊಸ ಟೋಪಿಗಳು ತಯಾರಾಗಿದ್ದು, ಮೊದಲ ಹಂತದಲ್ಲಿ ಪೊಲೀಸರಿಗೆ ಪೀಕ್ ಕ್ಯಾಪ್ ವಿತರಣೆ ನಡೆಯಲಿದೆ.
ಇತ್ತೀಚೆಗೆ ಡಿಜಿಪಿ ಕಚೇರಿಯಲ್ಲಿ ವಿವಿಧ ರಾಜ್ಯಗಳ ಪೊಲೀಸ್ ಕ್ಯಾಪ್ಗಳನ್ನು ಗೃಹ ಸಚಿವ ಡಾ. ಜಿ ಪರಮೇಶ್ವರ ಪರಿಶೀಲನೆ ಮಾಡಿದ್ದರು. ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರ ಪ್ರದೇಶ, ಗೋವಾ ಮತ್ತು ಮಹಾರಾಷ್ಟ್ರ ಕ್ಯಾಪ್ಗಳನ್ನು ಪರಿಶೀಲಿಸಿದ್ದರು. ಬಳಿಕ ಪ್ರಸ್ತಾವಿತ ಕರ್ನಾಟಕ ಪೊಲೀಸ್ ಕ್ಯಾಪ್ ಮಾದರಿ ಬಗ್ಗೆ ಚರ್ಚೆ ಮಾಡಿದ್ದರು.
ಆಗಸ್ಟ್ 06ರಂದು ಕಾನ್ಸ್ಟೇಬಲ್ ಹಾಗೂ ಹೆಡ್ ಕಾನ್ಸ್ ಟೇಬಲ್ಗಳ ಸ್ಲೋಚ್ ಹ್ಯಾಟ್ ಬದಲಾವಣೆ ಹಿನ್ನಲೆಯಲ್ಲಿ ನೇವಿ ಬ್ಲೂ ಪೀಕ್ ಕ್ಯಾಪ್ಗಳನ್ನು ವಿತರಿಸಲು ರಾಜ್ಯ ಸರ್ಕಾರ ಸಹಮತಿ ನೀಡಿ ಆದೇಶ ಹೊರಡಿಸಿತ್ತು. ಕ್ಯಾಪ್ ಖರೀದಿಸುವ ಸಂಬಂಧ ಟೆಂಡರ್ ಪ್ರಕ್ರಿಯೆಗೆ ಚಾಲನೆ ಕೂಡ ನೀಡಿತ್ತು.


