BBMP
Loading ...

KSLECA

Greater Bengaluru News9 : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಬೆಂಗಳೂರು ನಗರದ ಮುಸ್ಲಿಂ ವಿದ್ಯುತ್ ಗುತ್ತಿಗೆದಾರ ಸದಸ್ಯರಿಂದ ಇಂದು (ಅ.14) ಬೆಳಗ್ಗೆ ಈದ್ ಮಿಲಾದ್ ನಬಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಇಂದು ಬೆಳಗ್ಗೆ 10.30ರ ಸುಮಾರಿಗೆ ಮಾನವೀಯತೆಯ ಸಂದೇಶ ಈದ್ ಮಿಲಾದ್ ನಬಿ ಹಬ್ಬವನ್ನು ಆಚರಿಸಲಾಯಿತು. ಶಿವಾಜಿನಗರದ ಸಂತ ಚಾಂನ್ಸ್ ಚರ್ಚ್ ರಸ್ತೆಯಲ್ಲಿರುವ ಆಲ್ ಅಜೀಜ್ ಬ್ಯಾಂಕೂಟ್ ಹಾಲ್​ನಲ್ಲಿ ಈ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಖಾದ್ರಿ ಮೊಹಮ್ಮದ್ ಜುಲ್‌ಫೀಖಾ‌ರ್ ರಜಾ ನೂರಿ, ಖತೀಬ್ ಮಸ್ಟೀದ್ ಹಜರತ್ ಬಿಲಾಲ್ ಅವರ ಪ್ರವಚನ ಮಾಡಿದರು. ಅಲ್ಲದೆ, ಸನ್ಮಾನ್ಯ ಶ್ರೀ ಶ್ರೀ ಶ್ರೀ ಪರಮಪೂಜ್ಯ ಶ್ರೀ ನೀ.ಪ್ರಾ. ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು, ಬೇಲಿಮಠ ಅವರಿಂದ ಆಶೀರ್ವಚನ ನೀಡಿದರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ ರಿಜ್ವಾನ್ ಅರ್ಷದ್, ಶಾಸಕರು, ಶಿವಾಜಿನಗರ, ಸನ್ಮಾನ್ಯ ಶ್ರೀ ಸಿ ರಮೇಶ್, ರಾಜ್ಯಾಧ್ಯಕ್ಷರು, ಕೆ.ಎಸ್.ಎಲ್.ಇ.ಸಿ.ಎ, ಸನ್ಮಾನ್ಯ ಶ್ರೀ ಸಮೀಉಲ್ಲಾ, ಅಧ್ಯಕ್ಷರು, ಮೀಲಾದುನ್ ನಬಿ ಸ.ಆ. ಕಮೀಟಿ, ಬೆಂಗಳೂರು, ಸನ್ಮಾನ್ಯ ಶ್ರೀ ಸೈಯದ್ ಆಫ್ಜಲ್, ಕ್ರೀಸೆಂಟ್ ಎಲೆಕ್ಟಿಕಲ್ ಬೆಂಗಳೂರು, ಸನ್ಮಾನ್ಯ ಶ್ರೀ ಸೈಯದ್ ಜೀಲಾನ್, ಜೆ ಕೆ ಟ್ರೇಡರ್ ಬೆಂಗಳೂರು ಹಾಗೂ ಸನ್ಮಾನ್ಯ ಶ್ರೀ ನಯೀಮ್ ಶರೀಫ್, ಕಾರ್ಯದರ್ಶಿ, ಮೀಲಾದುನ್ ನಬಿ ಸ.ಅ. ಕಮೀಟಿ, ಬೆಂಗಳೂರು ಭಾಗವಹಿಸಿದರು.

Leave a Reply

Your email address will not be published. Required fields are marked *