Greater Bengaluru News9 : ಕಿಲ್ಲರ್ ಬಿಎಂಟಿಸಿ ಎಂದೇ ಕುಖ್ಯಾತಿ ಪಡೀತಿರುವ ಸಿಟಿ ಸಾರಿಗೆಗೆ ಇದೀಗ ಮತ್ತೊಂದು ಬಾಲಕಿ ಬಲಿಯಾಗಿದ್ದಾಳೆ. ಬೆಂಗಳೂರಲ್ಲಿ ಬಿಎಂಟಿಸಿ ಬಸ್ ಅಪಘಾತದ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂದು ಟ್ಯೂಷನ್ ಮುಗಿಸಿ ಸ್ನೇಹಿತರ ಜೊತೆ ಮನೆಗೆ ಹೋಗ್ತಿದ್ದ 9 ವರ್ಷದ ಬಾಲಕಿ ಮೇಲೆ ಬಸ್ ಹರಿದಿದ್ದು, ಸ್ಥಳದಲ್ಲೇ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.
ಬಾಲಕಿಗೆ ಬಿಎಂಟಿಸಿ ಬಸ್ ಡಿಕ್ಕಿ
ರಾಜಾಜಿನಗರ 1 ಫಸ್ಟ್ ಬ್ಲಾಕ್ನಲ್ಲಿ ಈ ಅಪಘಾತ ಸಂಭವಿಸಿದೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಾಲಕಿ ಭುವನಾ ಟ್ಯೂಷನ್ ಮುಗಿಸಿ ಸ್ನೇಹಿತರ ಜೊತೆ ನಡೆದುಕೊಂಡು ಬರುತ್ತಿದ್ದಳು. ಈ ವೇಳೆ ರಭಸವಾಗಿ ಬಂದ ಬಸ್ ಬಾಲಕಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗ್ತಿದೆ.
9 ವರ್ಷದ ಬಾಲಕಿ ಸಾವು
ಬಿಎಂಟಿಸಿ ಬಸ್ ಹರಿದ ಪರಿಣಾಮ 9 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಸ್ನೇಹಿತೆ ಸಾವನ್ನಪ್ಪಿದನ್ನು ಕಣ್ಣಾರೆ ಕಂಡು ಸ್ನೇಹಿತೆಯರು ಶಾಕ್ ಆಗಿ ಕಣ್ಣೀರು ಹಾಕಿದ್ದಾರೆ. ಸ್ಥಳಕ್ಕೆ ರಾಜಾಜಿನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭುವನಾ ಮೃತ ದುರ್ದೈವಿಯಾಗಿದ್ದು, ರಾಜಾಜಿನಗರ ಪಾಂಚಜನ್ಯ ವಿದ್ಯಾಪೀಠ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗ್ತಿದೆ. ಈಕೆಯ ಪೋಷಕರು ಬೆಂಗಳೂರಲ್ಲಿ ಜೋಳ ಮಾರಿಕೊಂಡು ಜೀವನ ಸಾಗಿಸುತ್ತಿದ್ದರು ಎನ್ನಲಾಗ್ತಿದೆ. ಮಹಾಲಕ್ಷ್ಮಿ ಲೇಔಟ್ ಬೋವಿ ಪಾಳ್ಯದಲ್ಲಿ ವಾಸಿಸುತ್ತಿದ್ದರು. ಸದ್ಯ ಎಮ್ ಎಸ್ ರಾಮಯ್ಯ ಆಸ್ಪತ್ರೆ ಶವಗಾರಕ್ಕೆ ಮೃತದೇಹ ರವಾನೆ ಮಾಡಲಾಗಿದೆ.
ಬಿಎಂಟಿಸಿ ಚಾಲಕನ ಯಡವಟ್ಟು, ಸರಣಿ ಅಪಘಾತ
ಮತ್ತೊಂದೆಡೆ ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕನ ಯಡವಟ್ಟಿನಿಂದ ಸರಣಿ ಅಪಘಾತಗಳು ಸಂಭವಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬರ್ತಿದ್ದ ಬಿಎಂಟಿಸಿ ಬಸ್, ಒಟ್ಟು 9 ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ.
ಬಸ್ ಚಾಲಕನಿಗೆ ಪಿಡ್ಸ್ ಬಂದು ಹಿನ್ನೆಲೆ ಈ ಅವಘಡ ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


