BBMP
Loading ...

jds

Greater Bengaluru News9 : ಪ್ರಧಾನ ಮಂತ್ರಿಗಳು ಹಾಗೂ ಮಣ್ಣಿನ ಮಗ ಹೆಚ್.ಡಿ ದೇವೇಗೌಡ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಾಳೆ ಬೆಳಗ್ಗೆ ನಮ್ಮ ಭೂಮಿ ನಮ್ಮ ಹಕ್ಕು ಹೋರಾಟ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆ ಬೆಂಬಲಿಸುವಂತೆ ರಾಮನಗರ ಜಿಲ್ಲೆಯ ದಿಶಾ ಸಮಿತಿಯ ಸದಸ್ಯರು ಮನವಿ ಮಾಡಿದ್ದಾರೆ.

ನಾಳೆ ನಡೆಯುವ ಬೃಹತ್​ ಪ್ರತಿಭಟನೆಯಲ್ಲಿ ಮಾಗಡಿಯ ನಿಕಟಪೂರ್ವ ಶಾಸಕರು ಹಾಗೂ ರಾಮನಗರ ಜಿಲ್ಲೆಯ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಎ. ಮಂಜುನಾಥ್ ಅವರು ಹಾಗೂ ಜೆಡಿಎಸ್ ಪಕ್ಷದ ರಾಜ್ಯ ನಾಯಕರುಗಳ ಸಮ್ಮುಖದಲ್ಲಿ ನಡೆಯಲಿದೆ.

ಕೂಟಗಲ್ ಹೋಬಳಿಯ ಆತ್ಮೀಯ ಜೆಡಿಎಸ್ ಹಾಗೂ ಬಿಜೆಪಿ (NDA) ಮೈತ್ರಿ ಪಕ್ಷದ ಮುಖಂಡರು ನಿಷ್ಠಾವಂತ ಕಾರ್ಯಕರ್ತರೂ ಬಂಧುಗಳು ನಾಳೆ ದಿನಾಂಕ 28.09.2025 ನೇ ಭಾನುವಾರ ಬೆಳಿಗ್ಗೆ 9:00 ಗಂಟೆಗೆ ಬಿಡದಿ ಬಳಿಯ ಬೈರಮಂಗಲ ಗ್ರಾಮಕ್ಕೆ ಆಗಮಿಸಿ ನಮ್ಮ ಭೂಮಿ ನಮ್ಮ ಹಕ್ಕು ರೈತರ ಹೋರಾಟ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿ, ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು ಜೆಡಿಎಸ್​ ಮುಖಂಡರು ಹಾಗೂ ರಾಮನಗರ ಜಿಲ್ಲೆಯ ದಿಶಾ ಸಮಿತಿ ಸದಸ್ಯರಾದ ಎಸ್ . ಶಿವಣ್ಣ ನಾಗರಕಲ್ಲುದೊಡ್ಡಿ ಅವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *