BBMP
Loading ...

Ganesha

Greater Bengaluru News9 : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್​ ಗುತ್ತಿಗೆದಾರರ ಸಂಘ ಬೆಂಗಳೂರು ಉತ್ತರ ತಾಲೂಕು ಸಮಿತಿ ವತಿಯಿಂದ ಹೌಸಿಂಗ್​ ಬೋರ್ಡ್​ನಲ್ಲಿ ಇದೇ ಬುಧವಾರದಿಂದ (ಸೆ.17) ಶುಕ್ರವಾರದವರೆಗೆ ವಿನಾಯಕ ಮಹೋತ್ಸವ ಬಹಳ ವಿಜೃಂಭಣೆಯಿಂದ ನಡೆಯಲಿದೆ.

ಈ ಮಹೋತ್ಸವಕ್ಕೆ ವಿಜಯನಗರದ ಜನಪ್ರಿಯ ಶಾಸಕ ಹಾಗೂ ಮಾಜಿ ಸಚಿವರಾದ ಶ್ರೀಯುತ ಎಂ. ಕೃಷ್ಣಪ್ಪ, ಅವರ ಪುತ್ರ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಶಾಸಕ ಶ್ರೀಯುತ ಪ್ರಿಯಕೃಷ್ಣ ಮತ್ತು ಸಮಾಜ ಸೇವಕರಾದ ಶ್ರೀಯುತ ಪ್ರದೀಪ್​ ಕೃಷ್ಣಪ್ಪ ಹಾಗೂ ವಿದ್ಯುತ್​ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾದ ಸಿ. ರಮೇಶ್​ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಒಟ್ಟು ಮೂರು ದಿನಗಳ ಕಾಲ ನಡೆಯುವ ಈ ಸಮಾರಂಭಕ್ಕೆ ಕೇಂದ್ರ ಸಮಿತಿ, ತಾಲೂಕು ಮತ್ತು ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಆಗಮಿಸಿ ವಿನಾಯಕ ಮಹೋತ್ಸವನ್ನು ಯಶಸ್ವಿಗೊಳಿಸಬೇಕೆಂದು ಕಳಕಳಿಯಿಂದ ಮನವಿ ಮಾಡಲಾಗಿದೆ.

ಮೂರು ದಿನದ ಕಾರ್ಯಕ್ರಮಗಳು ಈ ಕೆಳಗಿನಂತಿವೆ…

  • ದಿನಾಂಕ: 17-09-2025ನೇ ಬುಧವಾರ —–> ಬೆಳಗ್ಗೆ 10:00ಕ್ಕೆ ಸರಿಯಾಗಿ ಶ್ರೀ ವಿನಾಯಕನ ಪ್ರತಿಷ್ಠಾಪನೆ ಮತ್ತು ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ
  • ದಿನಾಂಕ: 18-09-2025ನೇ ಗುರುವಾರ —–> ಬೆಳಗ್ಗೆ 10:00ಕ್ಕೆ ಸರಿಯಾಗಿ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ
  • ದಿನಾಂಕ: 19-09-2025ನೇ ಶುಕ್ರವಾರ—-> ಬೆಳಗ್ಗೆ 9:30 ಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಮಧ್ಯಾಹ್ನ 12:30 ಕ್ಕೆ “ಅನ್ನಸಂತರ್ಪಣೆ” ಕಾರ್ಯಕ್ರಮ ಹಾಗೂ ಶ್ರೀ ವಿನಾಯಕ ಮೂರ್ತಿಯನ್ನು ಸಂಜೆ 4:30 ಗಂಟೆಗೆ ವಿಸರ್ಜಿಸಲಾಗುವುದು

ಎಲ್ಲಾ ಕಾರ್ಯಕ್ರಮಗಳಿಗೆ ವಿದ್ಯುತ್ ಗುತ್ತಿಗೆದಾರರು ‘ಹಾಗೂ ಭಕ್ತಾದಿಗಳು ಸಕಾಲಕ್ಕೆ ಆಗಮಿಸಿ ಶ್ರೀ ವಿನಾಯಕನ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿ ಮಾಡಲಾಗಿದೆ. ಬೆಂಗಳೂರು ಉತ್ತರ ತಾಲ್ಲೂಕು ಸಮಿತಿಯ ಪದಧಿಕಾರಿಗಳು ಹಾಗೂ ವಿದ್ಯುತ್‌ ಗುತ್ತಿಗೆದಾರರು ಈ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದ್ದಾರೆ.

Leave a Reply

Your email address will not be published. Required fields are marked *