BBMP
Loading ...

Police

Greater Bengaluru News9 : ಕರ್ನಾಟಕದಾದ್ಯಂತ ಡ್ರಗ್ಸ್ ಮುಕ್ತ ಮಾಡಲೆಂದು ಸರ್ಕಾರ ಹಲವು ಕಾರ್ಯಕ್ರಮಗಳನ್ನು ಕಾರ್ಯ ರೂಪಕ್ಕೆ ತಂದಿದೆ‌. ಆದರೆ ಈ ಅಭಿಯಾನಗಳನ್ನು ಜಾರಿ ಮಾಡಿ ಜನರಲ್ಲಿ ಅರಿವು ಮೂಡಿಸಬೇಕಾದ ಪೊಲೀಸರೇ ಪೆಡ್ಲರ್​ಗಳೊಂದಿಗೆ ಕೈಜೋಡಿಸಿರುವ ಕಳವಳಕಾರಿ ಸಂಗತಿ ಬಹಿರಂಗ ಆಗಿದೆ‌. ಅಷ್ಟೇ ಅಲ್ಲದೆ ಡೀಲ್​​ನಲ್ಲಿ ಕೈಜೋಡಿಸಿದ್ದ ಇನ್ಸ್‌ಪೆಕ್ಟರ್‌ ಸೇರಿ 11 ಸಿಬ್ಬಂದಿಗಳ ತಲೆದಂಡವಾಗಿದೆ.

ಡ್ರಗ್ ಮಾಫಿಯಾಗೆ ಖಾಕಿ ಲಿಂಕ್: ಹಫ್ತಾ ವಸೂಲಿ!
ಆರೋಪಿಗಳ ಜೊತೆ ಸೇರಿ ಡ್ರಗ್ಸ್​ ಮಾಫಿಯಾದಲ್ಲಿ ಭಾಗಿಯಾಗಿದ್ದ, ಡ್ರಗ್ಸ್ ಪೆಡ್ಲರ್ಸ್ ಜೊತೆಗೆ ನಂಟು ಆರೋಪದ ಮೇಲೆ ಬೆಂಗಳೂರಿನ ಚಾಮರಾಜಪೇಟೆ ಠಾಣೆಯ ಇನ್ಸ್‌ಪೆಕ್ಟರ್‌ ಟಿ.ಮಂಜಣ್ಣ ಸೇರಿ ಚಾಮರಾಜಪೇಟೆ ಮತ್ತು ಜೆಜೆ ನಗರ ಠಾಣೆಯ 10 ಪೊಲೀಸ್ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ.

ಇತ್ತೀಚೆಗೆ ಆರ್​ಆರ್ ನಗರ ಠಾಣೆ ಪೊಲೀಸರು ಒಂದು ಕಾರ್ಯಾಚರಣೆ ಮಾಡಿದ್ದರು. ಟೈಡಲ್ ಟ್ಯಾಬ್ಲೆಟ್ ಪೆಡ್ಲಿಂಗ್ ಕೇಸ್​ನಲ್ಲಿ ಸಲ್ಮಾನ್ ಅಲಿಯಾಸ್​ ಪಾಪ, ಸಲ್ಮಾನ್​ ಅಲಿಯಾಸ್​​ ಪುಟಾಟ್, ನಯಾಜ್, ನವಾಜ್ ರೇಷ್ಮಾ ಎಂಬುವರು ಸೇರಿ ಆರು ಆರೋಪಿಗಳನ್ನ ಬಂಧಿಸಿದ್ದರು. ಬಂಧಿತರಿಂದ 4 ಲಕ್ಷ ರೂ. ನಗದು ಹಾಗೂ ನಾಲ್ಕು ಲಕ್ಷ ರೂ. ಮೌಲ್ಯ 1000 ಟೈಡಾಲ್ ಮಾತ್ರೆಗಳನ್ನ ಸೀಜ್ ಮಾಡಿದ್ದರು.

1 ರಿಂದ 1.5 ಲಕ್ಷ ರೂ ಪ್ರತಿ ತಿಂಗಳು ಕಮಿಷನ್
ತನಿಖೆ ಮುಂದುವರೆಸಿ, ಪೊಲೀಸರೇ ಇವರಿಗೆ ಶ್ರೀರಕ್ಷೆ ಆಗಿದ್ದರೂ ಎನ್ನುವ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ. ಆರೋಪಿಗಳು ಚಾಮರಾಜಪೇಟೆ ಮತ್ತು ಜೆಜೆ ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟೈಡಾಲ್ ಪೆಡ್ಲಿಂಗ್ ಮಾಡಲು ಪೊಲೀಸರಿಗೆ ಒಬ್ಬೊಬ್ಬರು 1 ರಿಂದ 1.5 ಲಕ್ಷ ರೂ ಪ್ರತಿ ತಿಂಗಳು ಕಮಿಷನ್ ಕೊಡುತ್ತಿದ್ದರು ಅನ್ನೋದು ಗೊತ್ತಾಗಿದೆ.

ಪೊಲೀಸರು ಭಾಗಿಯಾಗಿರುವುದು ತಿಳಿದು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಎಸಿಪಿ ಚಂದನ್​​ಗೆ ತನಿಖೆ ಜವಾಬ್ದಾರಿ ವಹಿಸಿದ್ದರು. ಎಸಿಪಿ ಚಂದನ್ ತನಿಖೆ ವೇಳೆ ಚಾಮರಾಜಪೇಟೆ ಪೇಟೆ ಇನ್ಸ್‌ಪೆಕ್ಟರ್‌ ಮಂಜಣ್ಣ, ಎಸ್​ಬಿ ಕಾನ್ಸ್‌ಟೇಬಲ್‌ ಶಂಕರ್, ಪ್ರಸನ್ನ, ಶಿವರಾಜ್, ಆನಂದ್, ರಮೇಶ್ ಬಾನೋಂದ್, ಹಾಗೂ ಜೆಜೆ ಆರ್ ನಗರ ಠಾಣೆಯ ಕುಮಾರ್, ಆನಂದ, ಬಸವಣ್ಣ ಮತ್ತು ಮಹೇಶ್ ಎಂಬುವವರು ಭಾಗಿಯಾಗಿರುವುದು ಗೊತ್ತಾಗಿದೆ. ಇವರೇ ಪೆಡ್ಲಿಂಗ್ ಮಾಡುವುದಕ್ಕೆ ಸಹಾಯ ಮಾಡುತ್ತಿದ್ದು, ಜೊತೆಗೆ ಕೆಲ ಐಡಿಯಾಗಳನ್ನ ಕೊಟ್ಟಿದ್ದರು ಎಂಬುವುದಕ್ಕೆ ಸಾಕ್ಷ್ಯಗಳು ಲಭ್ಯ ಆಗಿತ್ತು.

ಆರೋಪ ಕಂಡುಬಂದ ಹಿನ್ನಲೆ ಡಿಸಿಪಿ 11 ಜನ ಪೊಲೀಸರನ್ನು ಅಮಾನತ್ತಿಗೆ ಶಿಫಾರಸ್ಸು ಮಾಡಿದ್ದರು. ಡಿಸಿಪಿ ವರದಿ ಆಧರಿಸಿ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅಮಾನತ್ತು ಮಾಡಿ ಆದೇಶಿಸಿದ್ದಾರೆ. ನಗರದ ಬೇರೆ ಬೇರೆ ಠಾಣೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಭಾಗಿಯಾಗಿರುವ ಶಂಕೆ ಇದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *