Greater Bengaluru News9 :- ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ರೋಡ್ ರಾಬರ್ಸ್ ಹಾವಳಿ ಹೆಚ್ಚಾಗಿದೆ. ನಿವೃತ್ತ ಎಸಿಪಿ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ರಾಬರಿ ಮಾಡಿದ್ದಾರೆ.
ಚಾಕುವಿನಿಂದ ಹಲ್ಲೆ ನಡೆಸಿ ಚಿನ್ನದ ಸರ, ಬ್ರಾಸ್ ಲೇಟ್ ರಾಬರಿ ಮಾಡಲಾಗಿದೆ. ಹೆಬ್ಬಾಳದ ವೆಟರ್ನರಿ ಆಸ್ಪತ್ರೆ ಆವರಣದಲ್ಲಿ ಘಟನೆ ಜರುಗಿದೆ. ಕೆಲ ದಿನಗಳ ಹಿಂದೆ ವಾಕಿಂಗ್ ಗೆ ತೆರಳಿದ್ದಾಗ ಘಟನೆ ಜರುಗಿದೆ. ನಿವೃತ್ತ ಎಸಿಪಿ ಎಚ್.ಸುಬ್ಬಣ್ಣ ಎಂಬುವರ ಬಳಿ ರಾಬರಿ ಮಾಡಲಾಗಿದ್ದು, ಎಂದಿನಂತ ವಾಕಿಂಗ್ ಮುಗಿಸಿ ಸುಬ್ಬಣ್ಣ ತೆರಳುತ್ತಿದ್ದರು. ಆದರೆ 9.30ರ ಸುಮಾರಿಗೆ ಇಬ್ಬರು ಆಗಂತುಕರ ದಾಳಿ ಮಾಡಿದ್ದಾರೆ.
ಚಾಕುವಿನಿಂದ ಹಲ್ಲೆ ನಡೆಸಿ ಚಿನ್ನಾಭರಣ ಕಿತ್ಕೊಂಡು ಪರಾರಿ ಆಗಿದ್ದಾರೆ. ಸುಮಾರು 8 ಲಕ್ಷ ರೂ. ಮೌಲ್ಯದ ಬ್ಯಾಸ್ ಲೇಟ್, ಚಿನ್ನದ ಸರ ರಾಬರಿ ಮಾಡಿದ್ದಾರೆ. ಮುಖಕ್ಕೆ ಕಪ್ಪು ಬಟ್ಟೆ ಧರಿಸಿ ಬಂದು ರಾಬರಿ ಕೃತ್ಯ ಮಾಡಿದ್ದಾರೆ. ಘಟನೆ ಬಗ್ಗೆ ಸಂಜಯ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಮೂವರು ಆರೋಪಿಗಳನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.


