BBMP
Loading ...

Rowdy Sheeter

Greater Bengaluru News9 : ಮೈಸೂರು ರಸ್ತೆಯ ಬಾಪೂಜಿನಗರದಲ್ಲಿ ರೌಡಿ ಶೀಟರ್ ಭೀಕರವಾಗಿ ಕೊಲೆಯಾಗಿರುವ ಘಟನೆ ಜರುಗಿದೆ.

ಕೌಶಿಕ್ (26) ಕೊಲೆಯಾದ ದುರ್ದೈವಿ. ಬಿಯರ್ ಬಾಟಲ್ ,ಕಲ್ಲಿನಿಂದ ಹೊಡೆದು ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತ ದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೇ.

ಬ್ಯಾಟರಾಯನಪುರ ರೌಡಿ ಶೀಟರ್ ಆಗಿದ್ದ ಮೃತ ಕೌಶಿಕ್, 2020ರಲ್ಲಿ ಕೊಲೆ ಕೇಸ್ ಒಂದರಲ್ಲಿ A8 ಆಗಿದ್ದ. ಜಾಮೀನು ಪಡೆದು ಕ್ಯಾಬ್ ಓಡಿಸಿಕೊಂಡು ಜೀವನ ಸಾಗಿಸ್ತಿದ್ದ. ನಿನ್ನೆ ರಾತ್ರಿ ಪಾರ್ಟಿ ನಂತರ ಸ್ನೇಹಿತರ ಜತೆ ಜಗಳ ಶಂಕೆ ವ್ಯಕ್ತವಾಗಿದೆ. ಜಗಳದ ವೇಳೆ ಮಧ್ಯರಾತ್ರಿ 2.30ಕ್ಕೆ ಕೊಲೆ ಆಗಿರೋ ಸಾಧ್ಯತೆ ಇದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *