BBMP
Loading ...

BNG Temples

Greater Bengaluru News 9 : ಇಂದು ಕರ್ನಾಟಕ ಸೇರಿ ಭಾರತದಲ್ಲೂ ಚಂದ್ರಗ್ರಹಣ ಸಂಭವಿಸಲಿದ್ದು, ಈ ಬಾರಿ ರಾಹುಗ್ರಸ್ತ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. ವರ್ಷದ ಕೊನೆಯ ಚಂದ್ರ ಗ್ರಹಣವಾದ ಖಗ್ರಾಸ ಚಂದ್ರ ಗ್ರಹಣವು ವಿಶೇಷವಾದ ಗ್ರಹಣವಾಗಿದ್ದು, ಈ ಗ್ರಹಣದ ಸೂತಕ ಅವಧಿಯು ಭಾರತ ಸೇರಿದಂತೆ ಇನ್ನಿತರ ದೇಶಗಳ ಮೇಲೂ ಪ್ರಭಾವ ಬೀರಲಿದೆ.

ಇದು ಸಂಪೂರ್ಣ ಚಂದ್ರ ಗ್ರಹಣವಾಗಿದ್ದು, ಈ ಗ್ರಹಣದ ಸಮಯದಲ್ಲಿ ಚಂದ್ರನು ಸಂಪೂರ್ಣವಾಗಿ ಕೆಂಪು ಬಣ್ಣಕ್ಕೆ ತಿರುಗುತ್ತಾನೆ. ಹಾಗಾಗಿ, ಈ ಗ್ರಹಣವನ್ನು ಬ್ಲಡ್‌ ಮೂನ್‌ ಎಂದೂ ಕರೆಯಲಾಗುತ್ತದೆ. ಇಂದು ಆರಂಭವಾಗುವ ಈ ಚಂದ್ರ ಗ್ರಹಣ ಸೆಪ್ಟೆಂಬರ್‌ 8ರಂದು ಸೋಮವಾರ ಮಧ್ಯರಾತ್ರಿ ಮುಕ್ತಾಯಗೊಳ್ಳುವುದು. 2025ರ ಚಂದ್ರ ಗ್ರಹಣದ ಸಮಯ, ಈ ಸಮಯದಲ್ಲಿ ಏನು ಮಾಡಬೇಕು.? ಏನು ಮಾಡಬಾರದು ಎಂಬುದರ ಕುರಿತು ಮಾಹಿತಿ ಹೀಗಿದೆ..

ಇಂದು ಸಂಭವಿಸಲಿರುವ ಚಂದ್ರಗ್ರಹಣವು ವಿಶೇಷವಾದ ಪೂರ್ಣ ಚಂದ್ರ ಗ್ರಹಣವಾಗಿದ್ದು, ಈ ಗ್ರಹಣವು ಚಂದ್ರನನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತದೆ. ಇದನ್ನು ಖಗ್ರಾಸ ಚಂದ್ರ ಗ್ರಹಣ, ಪೂರ್ಣ ಚಂದ್ರ ಗ್ರಹಣ, ಬ್ಲಡ್‌ ಮೂನ್‌ ಎಂದೂ ಕರೆಯಲಾಗುತ್ತದೆ. ಈ ಚಂದ್ರ ಗ್ರಹಣವು ಭಾರತ, ಏಷ್ಯಾ, ಆಸ್ಟ್ರೇಲಿಯಾ, ಪೂರ್ವ ಆಫ್ರಿಕಾ ಮತ್ತು ಯುರೋಪಿನ ಹೆಚ್ಚಿನ ಭಾಗಗಳಲ್ಲಿ ಸಂಪೂರ್ಣವಾಗಿ ಗೋಚರಿಸುತ್ತದೆ. ಭಾರತದಲ್ಲಿ ಒಟ್ಟು ಚಂದ್ರಗ್ರಹಣದ ಅವಧಿಯು ಸುಮಾರು 82 ನಿಮಿಷಗಳಷ್ಟು ಇರುತ್ತದೆ ಮತ್ತು ಇದನ್ನು ದಶಕದ ಅತಿ ದೊಡ್ಡ ಗ್ರಹಣಗಳಲ್ಲಿ ಒಂದು ಎಂದು ಕರೆಯಲಾಗುತ್ತದೆ.

ಒಟ್ಟು ಚಂದ್ರ ಗ್ರಹಣ ಸಮಯ
ಪೂರ್ಣ ಚಂದ್ರಗ್ರಹಣವು ಅದರ ಪೂರ್ಣಾವಧಿಯಲ್ಲಿ ಸುಮಾರು 82 ನಿಮಿಷಗಳವರೆಗೆ ಇರುತ್ತದೆ. ಕಳೆದ ವರ್ಷ ಅತ್ಯಂತ ದೀರ್ಘವಾದ ಚಂದ್ರಗ್ರಹಣವಾಗಿತ್ತು.

  • ಆರಂಭ: ರಾತ್ರಿ 8:58 (ಸೆಪ್ಟೆಂಬರ್ 7)
  • ರಕ್ತ ಚಂದ್ರನ ಹಂತ: ರಾತ್ರಿ 11:00 ರಿಂದ 12:22 AM
  • ಅಂತ್ಯ: ಬೆಳಗ್ಗೆ 2:25 (ಸೆಪ್ಟೆಂಬರ್ 8)

ಸೂತಕ ಕಾಲ
ಹಿಂದೂ ಸಂಪ್ರದಾಯದಲ್ಲಿ, ಚಂದ್ರಗ್ರಹಣದ ಮೊದಲು ಸೂತಕ ಕಾಲ ಎಂಬ ಅಶುಭ ಸಮಯವನ್ನು ಗಮನಿಸಲಾಗುತ್ತದೆ, ಇದು ಗ್ರಹಣಕ್ಕೆ 9 ಗಂಟೆಗಳ ಮೊದಲು ಆರಂಭವಾಗುತ್ತದೆ.

  • ಸೂತಕ ಆರಂಭ: ಸೆಪ್ಟೆಂಬರ್ 7, 2025, ಮಧ್ಯಾಹ್ನ 12:57 PM
  • ಸೂತಕ ಮುಕ್ತಾಯ: ಗ್ರಹಣ ಮುಕ್ತಾಯದ ನಂತರ, ರಾತ್ರಿ 1:26 AM (ಸೆಪ್ಟೆಂಬರ್ 8)

ಅಂದಹಾಗೆ, ಸೂರ್ಯಗ್ರಹಣಗಳನ್ನು ನೋಡುವ ಕಷ್ಟಗಳಿಗಿಂತ ಭಿನ್ನವಾಗಿ, ಚಂದ್ರ ಗ್ರಹಣಗಳನ್ನು ಬರಿಗಣ್ಣಿನಿಂದ ವೀಕ್ಷಿಸಬಹುದು. ದೂರದರ್ಶಕದ ಮೂಲಕ ನೋಡಿದಾಗ ಚಂದ್ರನ ಮೇಲಿನ ಕುಳಿಗಳು ಮತ್ತು ಕೆಂಪು ಛಾಯೆಯು ಸಹ ಸ್ಪಷ್ಟವಾಗಿ ಗೋಚರಿಸುತ್ತದೆ.

ಚಂದ್ರ ಗ್ರಹಣವನ್ನು ನೇರವಾಗಿ ಕಣ್ಣಿನಿಂದ ನೋಡುವುದು ಸಂಪೂರ್ಣವಾಗಿ ಸುರಕ್ಷಿತವಾಗಿದೆ, ಏಕೆಂದರೆ ಇದು ಕಣ್ಣುಗಳಿಗೆ ಯಾವುದೇ ಹಾನಿಯನ್ನುಂಟುಮಾಡುವುದಿಲ್ಲ. ಚಂದ್ರ ಗ್ರಹಣವನ್ನು ಖಗೋಳ ಆಸಕ್ತಿಯಿಂದ ಗಮನಿಸಬಹುದು. ಟೆಲಿಸ್ಕೋಪ್‌ಗಳು, ದೂರದರ್ಶಕಗಳು ಅಥವಾ ಕ್ಯಾಮೆರಾಗಳನ್ನು ಬಳಸಿ ಚಂದ್ರ ಗ್ರಹಣವನ್ನು ದಾಖಲಿಸಬಹುದು. ಚಂದ್ರ ಗ್ರಹಣವು ಭೂಮಿಯ ನೆರಳು ಚಂದ್ರನ ಮೇಲೆ ಬೀಳುವಾಗ ಸಂಭವಿಸುತ್ತದೆ. ಇದನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ.

ಆಧ್ಯಾತ್ಮಿಕವಾಗಿ ಕೆಲವೊಂದು ಕಟ್ಟುಪಾಡುಗಳನ್ನು ಹೇಳಿದರು ಕೂಡ. ವಿಜ್ಞಾನದ ಪ್ರಕಾರ, ಗ್ರಹಣವು ಖಗೋಳದಲ್ಲಿ ನಡೆಯುವ ಒಂದು ಅಪರೂಪದ ವಿದ್ಯಾಮಾನವಾಗಿದೆ. ಇಂತಹ ಕ್ಷಣ ಅಪರೂಪಕ್ಕೆ ಮಾತ್ರ ಕಾಣಸಿಗುವುದರಿಂದ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬೇಡಿ ಎಂದು ವಿಜ್ಞಾನ ಪಂಡಿತರು ಹೇಳುತ್ತಾರೆ. ಅಲ್ಲದೆ, ಈ ವಿದ್ಯಾಮಾನ ಅಪರೂಪಕ್ಕೆ ಒಮ್ಮೆ ಮಾತ್ರ ಕಾಣಸಿಗುತ್ತದೆ. ಅದರಲ್ಲೂ ಭಾರತದಲ್ಲಿ ಸಂಪೂರ್ಣ ಗೋಚರಿಸುವುದರಿಂದ ಇತರ ದೇಶಗಳಿಗೆ ಹೋಲಿಸಿದರೆ ಭಾರತೀಯರು ಲಕ್ಕಿ ಎನ್ನಬಹುದು. ಹೀಗಾಗಿ, ಯಾವುದೇ ಕಾರಣಕ್ಕೂ ಚಂದ್ರ ಗ್ರಹಣವನ್ನು ಮಿಸ್​ ಮಾಡಿಕೊಳ್ಳಬೇಡಿ.

Leave a Reply

Your email address will not be published. Required fields are marked *