BBMP
Loading ...

KSLECA

ಬೆಂಗಳೂರು: ಆಗಸ್ಟ್​ 25ರಂದು ನಗರದ ಫ್ರೀಡಂ ಪಾರ್ಕ್​ನಲ್ಲಿ ಯಾವುದೇ ಪ್ರತಿಭಟನೆ ಹಮ್ಮಿಕೊಂಡಿಲ್ಲ ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಅಧಿಕೃತವಾಗಿ ತಿಳಿಸಿದೆ.

ಇದು ಆತ್ಮೀಯ ಸದಸ್ಯರುಗಳ ಗಮನಕ್ಕೆ ಹಾಗೂ ಮಾಹಿತಿ. ದಿನಾಂಕ 25/08/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಮ್ಮ KSLECA ಸಂಘದಿಂದ ಯಾವುದೇ ಪ್ರತಿಭಟನೆ ಯನ್ನು ಹಮ್ಮಿಕೊಂಡಿರುವುದಿಲ್ಲ. ಮಾನ್ಯ ಸದಸ್ಯರುಗಳಿಗೆ ಈ ಮೂಲಕ ತಿಳಿಯ ಪಡಿಸುವುದೇನೆಂದರೆ, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಕೆಳಕಂಡ ಭಿತ್ತಿಪತ್ರದ ಪ್ರಕಟಣೆಗಳು, ವಿಡಿಯೋಗಳು ಸುಳ್ಳು ಸುದ್ದಿಗಳಾಗಿರುತ್ತದೆ.

ದಿನಾಂಕ 25/08/2025 ರಂದು ನಡೆಯುವ ಪ್ರತಿಭಟನೆಗೂ ನಮ್ಮ KSLECA ಸಂಘಕ್ಕೂ ಯಾವುದೇ ಸಂಬಂಧವಿರುವುದಿಲ್ಲ ಎಂದು ಕೇಂದ್ರ ಸಮಿತಿ ವತಿಯಿಂದ ಸ್ಪಷ್ಟಪಡಿಸಲಾಗಿದೆ ಎಂದು KSLECA ರಾಜ್ಯ ಪ್ರಚಾರ ಸಮಿತಿ ಛೇರ್ಮನ್ ಆರ್​. ಶಿವಕುಮಾರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *