BBMP
Loading ...

Namma Metro

ಬೆಂಗಳೂರು: ಬೆಂಗಳೂರಿನಲ್ಲಿ ಮೆಟ್ರೋ ಜಾಲ ವಿಸ್ತರಣೆಗೆ ಕಾಲ ಕೂಡಿ ಬಂದಿದೆ. ಬಹು ವರ್ಷಗಳಿಂದ ಪ್ಲಾನ್ ಮಾಡಿಕೊಂಡು ಇತ್ತೀಚೆಗೆ ಅನುಮೋದನೆ ಪಡೆದಿದ್ದ ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆ ಕಾಮಗಾರಿ ಪ್ರಧಾನಿ ಮೋದಿ ಶಂಕುಸ್ಥಾಪನೆಯಿಂದ ಶುರುವಾಗಲಿದೆ. ಈ ಯೋಜನೆಗೆ ಸಿಕ್ಕ ಅನುದಾನ, ಒಟ್ಟು ಉದ್ದ, ಎರಡು ಮಾರ್ಗಗಳು, ಎಷ್ಟು ನಿಲ್ದಾಣಗಳು ಸೇರಿದಂತೆ ಪೂರ್ಣ ವಿವರ ಇಲ್ಲಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) 15,610 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಮೆಟ್ರೋ ರೈಲು ಯೋಜನೆಯ ಹಂತ-3ದ ಕಾಮಗಾರಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಲಿದೆ. ಮೆಟ್ರೋ ಹಂತ-3 ಯೋಜನೆಯಡಿ ಒಟ್ಟು 44 ಕಿಲೋ ಮೀಟರ್‌ಗಿಂತಲೂ ಅಧಿಕ ಉದ್ದದ ಎರಡು ಕಾರಿಡಾರ್ ನಿರ್ಮಾಣವಾಗಲಿವೆ. ಇದರಲ್ಲಿ ಒಂದು ‘ಆರೆಂಜ್ ಲೈನ್’ ಎಂದು ಘೋಷಿಸಲಾಗಿದೆ. ಈ ಮೂಲಸೌಕರ್ಯ ಯೋಜನೆಯು ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಸತಿ, ಕೈಗಾರಿಕಾ, ವಾಣಿಜ್ಯ ಮತ್ತು ಶೈಕ್ಷಣಿಕ ಪ್ರದೇಶಗಳಲ್ಲಿನ ಸಾರಿಗೆ ಅಗತ್ಯವನ್ನು ಪೂರೈಸುತ್ತದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಮೆಟ್ರೋ ಮೂರನೇ ಹಂತದ ಯೋಜನೆಯಡಲ್ಲಿ ಎರಡು ಕಾರಿಡಾರ್‌ಗಳು ನಿರ್ಮಾಣಗೊಳ್ಳಲಿವೆ. ಅದರಲ್ಲಿ ಒಂದು ಜೆಪಿ ನಗರ 4 ನೇ ಹಂತದಿಂದ ಕೆಂಪಾಪುರವರೆಗೆ ಹೊಸ ಮಾರ್ಗವು 32.15 ಕಿಲೋ ಮೀಟರ್ ಇರಲಿದೆ. ಮತ್ತೊಂದು ಹೊಸಹಳ್ಳಿಯಿಂದ ಕಡಬಗೆರೆವರೆಗೆ 12.5 ಕಿಲೋ ಮೀಟರ್ ಉದ್ದದ ಮಾರ್ಗ ತಲೆ ಎತ್ತಲಿದೆ. ಈ ಮಾರ್ಗಗಳಲ್ಲಿ ಒಟ್ಟು 31 ಎತ್ತರದ ನಿಲ್ದಾಣಗಳು ಸ್ಥಾಪನೆಯಾಗಲಿವೆ ಎಂದು BMRCL ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಮಾರ್ಗವು ಮಾಗಡಿ ರಸ್ತೆ, ಕೆಂಪಾಪುರ, ಜೆಪಿನಗರ, ಹೊರ ವರ್ತುಲ ರಸ್ತೆಯ ಲಕ್ಷಾಂತರ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಒದಗಿಸಲಿದೆ. ಅಲ್ಲದೇ 44 ಕಿಲೋ ಮೀಟರ್‌ ಮಾರ್ಗದಲ್ಲಿ ಟ್ರಾಪಿಕ್ ಕಡಿಮೆ ಮಾಡುವಲ್ಲಿ ಕೊಡುಗೆ ನೀಡಲಿದೆ. ಇಂತಹ ಪ್ರಮುಖ ಯೋಜನೆ ಆರಂಭಕ್ಕೆ ನೆನ್ನೆ ಪ್ರಧಾನಿಯವರು ಶಂಕುಸ್ಥಾಪನೆ ನೇರವೇರಿಸಿದ್ದಾರೆ. ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ.

ನಿರ್ಮಾಣವಾಗುವ ಒಟ್ಟು ನಿಲ್ದಾಣಗಳು ಯಾವುವು?
ಈ ಮೆಟ್ರೋ ಮಾರ್ಗವು ಕಡುಬಗೆರೆ, ಹೊಸಹಳ್ಳಿ ಸೇರಿದಂತೆ ಮಾಗಡಿ ರಸ್ತೆ, ಜೆಪಿನಗರದಿಂದ ಕೆಂಪಾಪುರ, ಹೊರ ವರ್ತುಲ ರಸ್ತೆಯ ಪ್ರಯಾಣಿಕರಿಗೆ ಅನುಕೂಲ ಒದಗಿಸಲಿದೆ. ಈ ಆರೆಂಜ್ ಮಾರ್ಗದಲ್ಲಿ ‘ಕೆಂಪಾಪುರ, ಹೆಬ್ಬಾಳ ರೈಲು ನಿಲ್ದಾಣ, ನಾಗಶೆಟ್ಟಿಹಳ್ಳಿ, ಬಿಇಎಲ್ ವೃತ್ತ, ಮುತ್ಯಾಲನಗರ, ಪೀಣ್ಯ, ಕಂಠೀರವನಗರ, ಸ್ವಾತಂತ್ರ್ಯ ಯೋಧರ ಕಾಲೋನಿ, ಚಾಮುಂಡೇಶ್ವರಿ, ನಾಗರಭಾವಿ ವೃತ್ತ, ಮೈಸೂರು ರಸ್ತೆ, ದ್ವಾರಕನಗರ’ ನಿಲ್ದಾಣಗಳು ಬರುತ್ತವೆ. ಅದೇ ರೀತಿ ಕಡುಬಗೆರೆ-ಹೊಸಹಳ್ಳಿ ಮಾರ್ಗದಲ್ಲಿ ‘ಹೊಸಹಳ್ಳಿ, ಕಾಮಾಕ್ಷಿಪಾಳ್ಯ, ಕೆಎಚ್‌ಬಿ ಕಾಲೋನಿ, ಸುಮನಹಳ್ಳಿ ಕ್ರಾಸ್, ಸುಂಕದಕಟ್ಟಿ, ಹೇರೋಹಳ್ಳಿ, ಬ್ಯಾಡರಹಳ್ಳಿ, ಕಾಮತ್ ಲೇಔಟ್ ಮತ್ತು ಕಡುಬಗೆರೆ ನಿಲ್ದಾಣಗಳು ಬರುತ್ತವೆ’ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.

Leave a Reply

Your email address will not be published. Required fields are marked *