BBMP
Loading ...

Health Checkup

ಬೆಂಗಳೂರು: 79ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬಾಸ್ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್​ ವತಿಯಿಂದ ನಗರದ ಕಾಮಾಕ್ಷಿ ಪಾಳ್ಯದ ರಂಗನಾಥಪುರದಲ್ಲಿ ಬೃಹತ್​ ರಕ್ತದಾನ ಶಿಬಿರ ಹಾಗೂ ಉಚಿತ ಅರ್ಥೈಟಿಸ್ ಮತ್ತು ಜಾಯಿಂಟ್ ರೀಪ್ಲೇಸ್‌ಮೇಂಟ್ ಜಾಗೃತಿ ಶಿಬಿರ ಆಯೋಜಿಸಲಾಗಿದೆ.

ಸಾಮಾಜಿಕ ಕಳಕಳಿಯುಳ್ಳ ಈ ಕಾರ್ಯಕ್ರಮವನ್ನು ಗೋವಿಂದರಾಜನಗರದ ಕಾಂಗ್ರೆಸ್​ ಶಾಸಕರಾದ ಶ್ರೀ ಪ್ರಿಯಕೃಷ್ಣ ಅವರು ಧ್ವಜಾರೋಹಣ ನೆರವೇರಿಸಿ ಉದ್ಘಾಟಿಸಲಿದ್ದಾರೆ. ಬಾಸ್ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್​ನ ಎಂ.ಡಿ, ಕೀಲು ಮತ್ತು ಮೂಳೆ ತಜ್ಞರಾದ ಡಾ. ಲೋಕೇಶ್​ ಚೌದರಿ ಆರ್​ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನೆರವೇರಲಿದೆ.

ಇದೊಂದು ಆರೋಗ್ಯ ಅಭಿಯಾನವಾಗಿದ್ದು, ಎಲ್ಲವೂ ಉಚಿತವಾಗಿ ನಡೆಯಲಿದೆ. ಉಚಿತ ಬೋನ್ ಡೆನ್ಸಿಟಿ ತಪಾಸಣೆ, ಉಚಿತ X-Ray, ಉಚಿತ ಬ್ಲಡ್ ಶುಗರ್ ತಪಾಸಣೆ, ಉಚಿತ ಬಿ.ಪಿ. ತಪಾಸಣೆ ಹಾಗೂ ಉಚಿತ ಔಷಧಿಗಳ ವಿತರಣೆ ಇರಲಿದೆ.

ಮೊಣಕಾಲು ನೋವು, ಸೊಂಟ ನೋವು, ನಡೆಯಲು ತೊಂದರೆ ಏನಾದರೂ ಇದ್ದರೆ ನಮ್ಮ ನುರಿತ ತಜ್ಞರನ್ನು ಸಂಪರ್ಕಿಸಿ, ತಜ್ಞರಿಂದ ಉಚಿತ ಸಲಹೆ ಕೂಡ ಸಿಗಲಿದೆ. ಮೊಣಕಾಲು ರೀಪ್ಲೇಸ್‌ಮೇಂಟ್, ಹಿಪ್ ರೀಪ್ಲೇಸ್‌ಮೇಂಟ್​ ಹಾಗೂ ರೋಬೋಟಿಕ್ ಮೊಣಕಾಲು ರೀಪ್ಲೇಸ್‌ಮೇಂಟ್ ಬಗ್ಗೆ ತಜ್ಞರು ಜಾಗೃತಿ ಮೂಡಿಸಲಿದ್ದಾರೆ.

ದಿನಾಂಕ 15-08-2025 ಬೆಳಗ್ಗೆ 08 ರಿಂದ ಮಧ್ಯಹ್ನ 2 ಗಂಟೆವರೆಗೆ ನಂ. 11/3, ರಂಗನಾಥಪುರ, ಮಾಗಡಿ ಮುಖ್ಯರಸ್ತೆ, ಕಾಮಾಕ್ಷಿಪಾಳ್ಯದಲ್ಲಿ ಈ ಶಿಬಿರ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ 99866 07601, 080-23282255/56 ನಂಬರ್​ ಸಂಪರ್ಕಿಸಿ ಹಾಗೂ www.bossmultispecialityhospital.com ವೆಬ್​ಸೈಟ್, @BOSS_MULTISPECIALITY_HOSPITAL ಇನ್​ಸ್ಟಾಗ್ರಾಂ ಮತ್ತು bossclinicsanddiagnosticcentre@gmail.com ಮೂಲಕ ಸಂಪರ್ಕಿಸಿ.

Leave a Reply

Your email address will not be published. Required fields are marked *