BBMP
Loading ...

KALCA

ಬೆಂಗಳೂರು: ವಿದ್ಯುತ್ ಗುತ್ತಿಗೆ ಕಾರ್ಮಿಕರ ಸಮಸ್ಯೆಗಳನ್ನು ಸರ್ಕಾರ ಬಗೆಹರಿಸದಿದ್ದರೆ ಎಲ್ಲಾ ವಿದ್ಯುತ್ ಗುತ್ತಿಗೆದಾರರು, ವಿದ್ಯುತ್ ಗ್ರಾಹಕರು, ಕರ್ನಾಟಕ ಪರ ಹೋರಾಟಗಾರರು, ಸಾಹಿತಿಗಳು, ರೈತರು ಸೇರಿ ಆ.20ರಂದು ಉಘ್ರ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಹೇಳಿದೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರಾದ ಸಿ ರಮೇಶ್, ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು ವಿವಿಧ ಹಂತಗಳಲ್ಲಿ ನಿರ್ಮಾಣ ಹಂತದಲ್ಲಿರುವ, ಮುಗಿದಿರುವ ಕಟ್ಟಡಗಳಿಗೆ ಪೂರ್ಣ ಪ್ರಮಾಣ ಪತ್ರ ಸ್ವಾಧೀನಾನುಭವ ಪತ್ರಕ್ಕೆ ವಿನಾಯಿತಿ ನೀಡುವ ನೀಡಬೇಕು ಎಂದರು.

ಈಗಾಗಲೇ ಎಸ್ಕಾಂಗಳಲ್ಲಿ ಬೃಹತ್ ಟೆಂಡರ್‌ಗಳನ್ನು ಕರೆದಿದ್ದು, ಸದರಿ ಟೆಂಡರ್‌ಗಳನ್ನು ರದ್ದುಮಾಡಿ ಸ್ಥಳೀಯ ಗುತ್ತಿಗೆದಾರರಿಗೆ ನೀಡಬೇಕೆಂದು ಇಂಧನ ಸಚಿವರಿಗೆ ಮನವಿ ನೀಡಿರುತ್ತೇವೆ. ಸಚಿವರು, ಇಂಧನ ಇಲಾಖೆಯ ಅಧಿಕಾರಿಗಳಿಗೆ ಮೌಖಿಕವಾಗಿ ಆದೇಶ ಮಾಡಿದ್ದು, ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳನ್ನು ಕರೆದು ಚರ್ಚಿಸಿ, ಸ್ಥಳೀಯವಾಗಿ ಯಾವ ಯಾವ ಕಾಮಗಾರಿಗಳನ್ನು ನೀಡಬಹುದೆಂದು ಚರ್ಚಿಸಿ 5 ಕಂಪನಿಗಳಿಗೆ ಸೂಕ್ತ ನಿರ್ದೇಶನ ನೀಡಿದ ನಂತರ ಟೆಂಡರ್ ಪ್ರಕ್ರಿಯೆಗಳ ಚರ್ಚೆ ಮಾಡಲು ತಿಳಿಸಿರುತ್ತಾರೆ. ಆದರೆ ಇದುವರೆಗೂ ಯಾವುದೇ ಸಭೆ ನಡೆದಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಸಭೆ ಕರೆದು ಸ್ಥಳೀಯವಾಗಿ 1 ರಿಂದ ಲಕ್ಷಗಳವರೆಗೆ ತುಂಡು ಗುತ್ತಿಗೆಯನ್ನು ನೀಡಬೇಕು 2012 ರ ಹಿಂದೆ ಎರಡನೇ ದರ್ಜೆ ಪರವಾನಗಿ ವಿದ್ಯುತ್ ಗುತ್ತಿಗೆದಾರರಿಗೆ ಒಂದನೇ ದರ್ಜೆ ಪರವಾನಗಿ ಪಡೆಯಲು ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಗೆ ವಿನಾಯಿತಿ ನೀಡಿ ಅನುಭವದ ಆಧಾರದ ಮೇಲೆ ಪ್ರಥಮ ದರ್ಜೆ ವಿದ್ಯುತ್ ಪರವಾನಗಿ ನೀಡುಬೇಕು.66/11 ಕೆವಿ ಹಾಗೂ 110/11 ವಿದ್ಯುತ್ ವಿತರಣಾ ಕೇಂದ್ರಗಳ ಪಾಳಿ ಗುತ್ತಿಗೆ ಕಾಮಗಾರಿಗಳನ್ನು ನಿರ್ವಹಿಸಲು ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರರಿಗೆ ಅನುಮತಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.

ಎಸ್ಕಾಂಗಳಲ್ಲಿ ವಿದ್ಯುತ್ ಗುತ್ತಿಗೆದಾರರು ಕೂಲಿ ಕೆಲಸಗಳನ್ನು ನಿರ್ವಹಿಸುವಾಗ ನೌಕರರುಗಳಿಗೆ ವಿದ್ಯುತ್ ಅವಗಡಗಳಾದಂತಹ ಸಂಧರ್ಭದಲ್ಲಿ ಅಪಘಾತವಾದ /ಮರಣವನ್ನು ಹೊಂದಿದ ಕಾರ್ಮಿಕರಿಗೆ ಕಂಪನಿ ವತಿಯಿಂದ (ಎಸ್ಕಾಂ) ಪರಿಹಾರವನ್ನು ನೀಡುಬೇಕು ಎಂದು ಒತ್ತಾಯಿಸಿದರು.

ಕಳೆದ 15.04.2025ರಂದು ಹೊರಡಿಸಿರುವ ಆದೇಶದಲ್ಲಿ ನವೀಕೃತ ಶೀಘ್ರ ವಿದ್ಯುತ್ ಯೋಜನೆ ನಾಳೆಯಿಂದ ಜಾರಿಯಾಗಿದ್ದು, ಸದರಿ ಯೋಜನೆಯಡಿಯಲ್ಲಿ ಹಲವಾರು ಗ್ರಾಹಕರಿಗೆ ಅನುಕೂಲವಾಗುತ್ತಿದೆ. ಅದಕ್ಕೆ ಸಂಘದ ಪರವಾಗಿ ಸ್ವಾಗತ ಕೋರುವುದಾಗಿ ಹೇಳಿದರು.

ಏ.4ರ ಹಿಂದೆ 2 ಎಂ.ಎಂ.ಡಿ ಪಾವತಿ ಮಾಡಿ ವಿದ್ಯುತ್ ಸಂಪರ್ಕ ಮಾಡಿರುವ ಸ್ಥಾವರಗಳಿಗೂ ರೂ. 15,000/- ಸಾವಿರ ರೂಗಳ ದಂಡ ಶುಲ್ಕಗಳ ಪಾವತಿ ಮಾಡಬೇಕೆಂದು ಎಸ್ಕಾಂ ವ್ಯಾಪ್ತಿಯಲ್ಲಿರೈತರಿಗೆ ನೋಟೀಸ್ ಜಾರಿ ಮಾಡಿರುತ್ತಾರೆ.ಸದರಿ ನೋಟೀಸ್‌ಗಳಿಗೆ ಅದರಿಂದ ವಿನಾಯಿತಿ ಕೊಟ್ಟು 15.04.2025 ರ ನಂತರ ಯಾರು ಕೃಷಿ ವಿದ್ಯುತ್ ಸಂಪರ್ಕಕ್ಕೆ ಪಡೆಯುತ್ತಾರೋ ಅಂತಹವರಿಗೆ ಈಗಾಗಲೇ ಆದೇಶದಂತೆ ರೂ. 15,000/- ಹಣ ಪಾವತಿಸಲು ಸಿದ್ಧರಿದ್ದಾರೆ. ಆದರೆ ಈಗಾಗಲೇ ಕೃಷಿ ವಿದ್ಯುತ್ ಸಂಪರ್ಕ ಪಡೆಯಲು ನೋಂದಣಿಯಾಗಿರುವ, ಮಂಜೂರಾತಿ, ಕಾರ್ಯಾದೇಶ ಆಗಿರುವ ಕೃಷಿ ವಿದ್ಯುತ್ ಸಂಪರ್ಕಕ್ಕೆ ವಿನಾಯಿತಿ ನೀಡಬೇಕಾಗಿ ಎಂದು ವಿವಿಧ ಬೇಡಿಕೆಗಳನ್ನು ಸರ್ಕಾರದ ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಗೌರವ ರಾಜ್ಯ ಕಾರ್ಯದರ್ಶಿ ಹೆಚ್.ವಿ.ಚಂದ್ರಬಾಬು, ಶ್ಯಾಮ್ ಸುಂದರ ಕೆ, ಪುಟ್ಟರಾಜು, ಶಿವರಾಜು, ಯದುಕುಮಾರ್, ಪುಟ್ಟಯ್ಯ, ಅಪ್ಪರ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *