BBMP
Loading ...

Ganapa

ಬೆಂಗಳೂರು:- ಸ್ಯಾಂಡಲ್ ವುಡ್ ನ ಯುವ ನಟನ ಸ್ಥಿತಿ ಗಂಭೀರವಾಗಿದೆ. ನಿರ್ಮಾಪಕ ಆನೇಕಲ್ ಬಾಲರಾಜ್​ ಅವರ ಪುತ್ರ, ನಟ ಸಂತೋಷ್ ಬಾಲರಾಜ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಜಾಂಡೀಸ್​ನಿಂದ ಬಳಲುತ್ತಿರುವ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಿರಿಯ ವಯಸ್ಸಿಗೆ ಜಾಂಡೀಸ್ ನಿಂದ ಬಳಲಿ ಐಸಿಯುನಲ್ಲಿರೋ ಸಂತೋಷ್ ಗೆ ಅಭಿಮಾನಿಗಳು ಹಾಗೂ ಕುಟುಂಬಸ್ಥರು ಶೀಘ್ರವೇ ಗುಣಮುಖರಾಗಿ ಬರಲೆಂದು ಹಾರೈಸಿದ್ದಾರೆ. ಕುಮಾರಸ್ವಾಮಿ ಲೇಔಟ್​​ನಲ್ಲಿರುವ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ‘ಕರಿಯ 2’, ‘ಕೆಂಪ’, ‘ಗಣಪ’, ‘ಬರ್ಕ್ಲಿ’, ‘ಸತ್ಯ’ ಸಿನಿಮಾಗಳಲ್ಲಿ ಸಂತೋಷ್ ಬಾಲರಾಜ್ ಅವರು ಅಭಿನಯಿಸಿದ್ದಾರೆ.

ಈಗ ಸಂತೋಷ್ ಬಾಲರಾಜ್ ಅವರಿಗೆ 34 ವರ್ಷ ವಯಸ್ಸು. ಜಾಂಡಿಸ್ ಮೈಗೆಲ್ಲ ಹರಡಿದ ಕಾರಣ ಅವರ ಪರಿಸ್ಥಿತಿ ಗಂಭೀರ ಆಗಿದೆ. ಸಂತೋಷ್ ಅವರು ತಾಯಿಯ ಜೊತೆ ಇದ್ದಾರೆ. ಇನ್ನೂ ಮದುವೆ ಆಗಿಲ್ಲ ಎನ್ನಲಾಗಿದೆ.

ಸದ್ಯ ಸಂತೋಷ್ ಬಾಲರಾಜ್ ಅವರು ಕೋಮಾದಲ್ಲಿದ್ದಾರೆ. ಎರಡು ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂತೋಷ್ ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಆಪ್ತರು, ಕುಟುಂಬದವರು ಪ್ರಾರ್ಥಿಸುತ್ತಿದ್ದಾರೆ.

ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಕೇಸ್: CCB ಯಿಂದ ಮೂವರು ಆರೋಪಿಗಳು ಅರೆಸ್ಟ್!

Leave a Reply

Your email address will not be published. Required fields are marked *