BBMP
Loading ...

ಬೆಂಗಳೂರು: ಇ-ಸ್ವತ್ತು ನಿರ್ವಹಣೆಗೆ ಸಂಬಂಧಿಸಿದ ಕಾರ್ಯ ವಿಧಾನದ ಬಗ್ಗೆ ಪ್ರಮಾಣಿತ ಕಾರ್ಯಾಚರಣೆ ವಿಧಾನ ಬಿಡುಗಡೆ ಮಾಡಲಾಗಿದೆ.

ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳು) ನಿಯಮಗಳು, 2006 ಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳು) (ತಿದ್ದುಪಡಿ) ನಿಯಮಗಳು, 2013 ರಲ್ಲಿ ನಿಯಮ 28 ಮತ್ತು 30 ಕ್ಕೆ ದಿನಾಂಕ:14-06-2013 ಮತ್ತು ದಿನಾಂಕ:15-06-2013 ಹಾಗೂ ದಿನಾಂಕ:21-01-2014 ರಲ್ಲಿ ತಿದ್ದುಪಡಿ ತರಲಾಗಿದ್ದು, ಈ ಕೆಳಕಂಡಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಕ್ರಮಬದ್ಧ ಆಸ್ತಿಗಳಿಗೆ ನಿಗಧಿತ ನಮೂನೆ 9 ಹಾಗೂ 11 ಎ ರಲ್ಲಿ ಮತ್ತು ಕ್ರಮ ಬದ್ಧವಲ್ಲದ ಆಸ್ತಿಗಳಿಗೆ ನಿಗಧಿತ ನಮೂನೆ-11 ಬಿ ರಲ್ಲಿ ದಾಖಲಿಸಲು ಉಲ್ಲೇಖ (5) ಮತ್ತು (6) ರ ಸುತ್ತೋಲೆಗಳಲ್ಲಿ ತಿಳಿಸಲಾಗಿತ್ತು ಮತ್ತು ಉಲ್ಲೇಖ (7) ರ ಸರ್ಕಾರದ ಆದೇಶದಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಿಗೆ ನಮೂನೆ-11ಬಿಯನ್ನು ಇ-ಸ್ವತ್ತು ತಂತ್ರಾಂಶದಿಂದ ವಿತರಿಸುವುದರಿಂದ ವಿನಾಯಿತಿ ನೀಡಲಾಗಿತ್ತು

ಕ್ರಮಬದ್ಧ ಆಸ್ತಿಗಳಿಗೆ ತೆರಿಗೆ ನಿರ್ಧರಣೆ ಪಟ್ಟಿ (ನಮೂನೆ-9) ಮತ್ತು ತೆರಿಗೆ ಬೇಡಿಕೆ, ವಸೂಲಾತಿ ಮತ್ತು ಬಾಕಿ ರಿಜಿಸ್ಟರ್ (ನಮೂನೆ 11ಎ):
1) ಗ್ರಾಮ ಠಾಣಾ ಒಳಗಡೆ ಇರುವ ಆಸ್ತಿಗಳು- ದಿಶಾಂಕ್ ಅಥವಾ ತಹಶೀಲ್ದಾರರ ಗ್ರಾಮ ಠಾಣಾ ನಕ್ಷೆ.
2) ಗ್ರಾಮ ಠಾಣಾದ ಹೊರಗಡೆ ಇರುವ ಆಸ್ತಿಗಳು- ಸಕ್ಷಮ ಪ್ರಾಧಿಕಾರದಿಂದ ಕೃಷಿಯೇತರ ಉದ್ದೇಶಕ್ಕಾಗಿ ಹೊರಡಿಸಿರುವ ಆದೇಶದ ಪ್ರತಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಗೊಂಡಿರುವ ಲೇಔಟ್ ಪ್ಲಾನ್.
3) ಸರ್ಕಾರದ ವಸತಿ ಯೋಜನೆಗಳಾದ ಬಸವ ವಸತಿ, ಗ್ರಾಮೀಣ ಅಂಬೇಡ್ಕರ್ ಹಾಗೂ ಇಂದಿರಾ ಆವಸ್ ಯೋಜನೆಯಡಿ ಸೃಜಿಸಿರುವ ಆಸ್ತಿಗಳು.
4) ಸಿಂಗಲ್ ಸೈಟ್ ಲೇಔಟ್ ಪ್ಲಾನ್ ಅಪೂವಲ್.
5) ಕೈಗಾರಿಕಾ ಉದ್ದೇಶಕ್ಕೆ ಪರಿವರ್ತಿಸಿದ ಜಮೀನು.
6) ಅಪಾರ್ಟ್ ಮೆಂಟ್ ಯುನಿಟ್ (ಭೂ ಪರಿವರ್ತನೆ ಮತ್ತು ಲೇಔಟ್ ಅನುಮೋದನೆಯಾಗಿರುವುದು.)
7) ದಿನಾಂಕ:16-11-1992 ಪೂರ್ವದಲ್ಲಿ ಗ್ರೂಪ್ / ಮಂಡಲ ಪಂಚಾಯತಿಗಳಿಂದ ಬಡಾವಣೆ ಎಂದು ಅನುಮೋದನೆಯಾಗಿರುವ ಆಸ್ತಿಗಳು.
8) ನಗರಾಭಿವೃದ್ಧಿ ಇಲಾಖೆಯ ಸಕ್ಷಮ ಪ್ರಾಧಿಕಾರ / ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಅನುಮೋದಿತ ವಾಣಿಜ್ಯ ನಿವೇಶನ.
9) ದಿನಾಂಕ:11-11-2014 ರ ನಂತರ ಗ್ರಾಮ ಪಂಚಾಯತಿಗಳಿದ / ತಾಲ್ಲೂಕು ಪಂಚಾಯತಿಗಳಿಂದ ಅನುಮೋದನೆಯಾಗಿರುವ ಬಡಾವಣೆ ನಿವೇಶನ.
10)ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ BDA, BMRDA, BIAAPA, KHB. KIADB. LDA’s & LPA’s ಅನುಮೋದಿಸಿದ ಬಡಾವಣೆಗಳಲ್ಲಿ ಬರುವ ಆಸ್ತಿಗಳು.
11) ದಿನಾಂಕ:14-06-2013 ರ ಪೂರ್ವದಲ್ಲಿ ಸೃಜನೆಯಾಗಿರುವ ಮತ್ತು ಗ್ರಾಮ ಪಂಚಾಯತಿಗಳು ನೀಡಿರುವ ಲೈಸೆನ್ಸ್ ಪಡೆದು ಖಾಯಂಯಾಗಿ ಈಗಾಗಲೇ ಮನೆ ನಿರ್ಮಾಣ ಮಾಡಿಕೊಂಡಿರುವ ಆಸ್ತಿಗಳು.
12)ಕರ್ನಾಟಕ ಭೂ ಕಂದಾಯ ಅಧಿನಿಯಮ, 1964 ರ ಪ್ರಕರಣ 94ಸಿ, 94ಸಿಸಿ ಮತ್ತು 94ಡಿ ರಡಿ ಮಂಜೂರಾದ ಆಸ್ತಿಗಳು.

ನಿರ್ದಿಷ್ಟಪಡಿಸಿರುವ ಅಂತಿಮ ದಿನಾಂಕ ಅಂದರೆ 14-06-2013 ರೊಳಗೆ ಅಸ್ತಿತ್ವದಲ್ಲಿರುವ ಕ್ರಮಬದ್ಧವಲ್ಲದ ಆಸ್ತಿಗಳಿಗೆ ಮಾತ್ರ ತೆರಿಗೆ ನಿರ್ಧರಣೆ ಪಟ್ಟಿ (ನಮೂನೆ 11ಬಿ):
1) ದಿನಾಂಕ:14-06-2013 ರೊಳಗೆ ಒಂದು ಬಾರಿ ಕ್ರಯವಾಗಿರುವ ನಿವೇಶನಗಳು.
2) ದಿನಾಂಕ:14-06-2013 ರೊಳಗೆ ಪಂಚತಂತ್ರ ತಂತ್ರಾಂಶದಲ್ಲಿ ದಾಖಲಿಸಲಾಗದ ಕಟ್ಟಡ (ನಿವೇಶನ ಹೊರತುಪಡಿಸಿ) ಹಳೆಯ 6 ತಿಂಗಳ ಪೂರ್ವದ ಯಾವುದಾದರೂ ವಿದ್ಯುಚ್ಛಕ್ತಿ ಬಿಲ್ಲು ಸಲ್ಲಿಸತಕ್ಕದ್ದು. ಒಂದು ವೇಳೆ ಹಳೆಯ ಬಿಲ್ಲು ಲಭ್ಯವಿಲ್ಲದಿದ್ದರೆ ಸಂಬಂಧಿಸಿದ ಎಸ್ಕಾಂ ಕಛೇರಿಗಳು ನೀಡುವ ಬಿಲ್ಲಿನ ದೃಢೀಕೃತ ಪಟ್ಟಿಯನ್ನು ಸಲ್ಲಿಸತಕ್ಕದ್ದು.
3) ಕೃಷಿ ಆಧಾರಿತ ಫಾರಂ ಬಿಲ್ಡಿಂಗ್‌ಗಳನ್ನು ಗುರುತಿಸಲು ಸಂಬಂಧಿಸಿದ ತಹಶೀಲ್ದಾರ್ / ಕಂದಾಯ ಪರೀವೀಕ್ಷರ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು. ಇಂತಹ ಆಸ್ತಿಗಳಿಗೆ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964 ರ ಪ್ರಕರಣ 95(1) ರನ್ವಯ ಕೃಷಿಯೇತರ ಭೂ ಪರಿವರ್ತನೆಯ ಪ್ರಕ್ರಿಯೆ ಅಗತ್ಯವಿರುವುದಿಲ್ಲ.
4) ಕರ್ನಾಟಕ ಭೂ ಕಂದಾಯ ಅಧಿನಿಯಮ, 1964 ರ ಪ್ರಕರಣ 95(2) ರನ್ವಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಆಸ್ತಿಗಳಿಗೆ ಸಂಬಂಧಿಸಿದಂತೆ ತಹಶೀಲ್ದಾರ್‌ರವರು ನೀಡಿರುವ ಹಿಂಬರಹದ ಪ್ರತಿ.
ಉಲ್ಲೇಖ (8) ರ ಸರ್ಕಾರದ ಸುತ್ತೋಲೆಯಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9, 11ಎ ಮತ್ತು 11ಬಿ ಗಳನ್ನು ವಿತರಿಸಲು ಅವಶ್ಯಕವಾಗಿರುವ ದಾಖಲೆಗಳ ಚೆಕ್‌ಲಿಸ್ಟ್‌ಗಳನ್ನು ಗ್ರಾಮ ಪಂಚಾಯತಿಗಳ ಸೂಚನೆ ಫಲಕಗಳಲ್ಲಿ ಕಡ್ಡಾಯವಾಗಿ ಅಳವಡಿಸುವ ಬಗ್ಗೆ ತಿಳಿಸಲಾಗಿದೆ.

ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಇ-ಸ್ವತ್ತು ತಂತ್ರಾಂಶದ ಮೂಲಕ ಆಸ್ತಿಗಳಿಗೆ ಸಂಬಂಧಿಸಿದಂತೆ ವಿತರಿಸುವ ನಮೂನೆ-9, 11ಎ ಮತ್ತು 110 ಗಳ ಆಧಾರದ ಮೇಲೆ ಉಪನೋಂದಾಣಾಧಿಕಾರಿಗಳ ಕಛೇರಿಯಲ್ಲಿ ನೋಂದಾಯಿಸಬಹುದು.
ಉಲ್ಲೇಖ (3) ರ ಸರ್ಕಾರದ ಸುತ್ತೋಲೆಯಲ್ಲಿ ಇ-ಸ್ವತ್ತು ತಂತ್ರಾಂಶದ ಕಾರ್ಯಚಟುವಟಿಕೆ ಪ್ರಾರಂಭಿಸಲು ಇ-ಸ್ವತ್ತು ತಂತ್ರಾಂಶದ ಬಳಕೆಯ ವಿಧಾನದ ಬಗ್ಗೆ ವಿವರಿಸಲಾಗಿದ್ದು, E-swathu User manual ಬಳಕೆದಾರರ ಲಾಗಿನ್ ನಲ್ಲಿ ಲಭ್ಯವಿರುತ್ತದೆ.

ಉಲ್ಲೇಖ (9) ರ ಮಾನ್ಯ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ:3640/2023 (LB-RES) ಗೆ ಸಂಬಂಧಿಸಿದಂತೆ ದಿನಾಂಕ:07-07-2025 ರಂದು ನೀಡಿರುವ ಆದೇಶದಲ್ಲಿ ”ಇ-ಸ್ವತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿಗಳು ನಿರ್ವಹಿಸಬೇಕಾಗಿರುವ ಕಾರ್ಯ ವಿಧಾನವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ಸಮೇತನಹಳ್ಳಿ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಯು ಕ್ರಮಬದ್ಧವಾಗಿ ನಿರ್ವಹಿಸದಿರುವ ಬಗ್ಗೆ ಪ್ರಸ್ತಾಪಿಸುತ್ತಾ, ಸಂಬಂಧಪಟ್ಟ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿರುತ್ತದೆ ಹಾಗೂ ಇ-ಸ್ವತ್ತು ತಂತ್ರಾಂಶದ ಬಳಕೆಯ ಕೈಪಿಡಿಯ ಮಾರ್ಗಸೂಚಿಯನ್ವಯ ಎಲ್ಲಾ ಸಂಬಂಧಿಸಿದ ಹಂತದ ನೌಕರರು ಸ್ವತ್ತಿನ ದಾಖಲೆಗಳನ್ನು ಪರಿಶೀಲಿಸಿ ಅಪ್ಲೋಡ್ ಮಾಡದಿರುವುದನ್ನು ಮಾನ್ಯ ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿರುತ್ತದೆ ಮತ್ತು ಈ ಕ್ರಮದ ಬಗ್ಗೆ ಮತ್ತೊಮ್ಮೆ ಸುತ್ತೋಲೆ ಮೂಲಕ ನಿರ್ದೇಶನ ನೀಡಲು ಆದೇಶಿಸಿದೆ.
ಉಲ್ಲೇಖ (3) ರ ಸರ್ಕಾರದ ಸುತ್ತೋಲೆಯಲ್ಲಿ ಇ-ಸ್ವತ್ತು ತಂತ್ರಾಂಶದ ಕಾರ್ಯಚಟುವಟಿಕೆ ಪ್ರಾರಂಭಿಸಲು ಇ-ಸ್ವತ್ತು ತಂತ್ರಾಂಶದ ಬಳಕೆಯ ವಿಧಾನದ ಬಗ್ಗೆ ವಿವರಿಸಲಾಗಿದ್ದು, E-swathu User manual ನಲ್ಲಿ ವಿವರಿಸಿರುವಂತೆ ಗ್ರಾಮ ಪಂಚಾಯತಿಯ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಸಾರ್ವಜನಿಕರಿಂದ ಅರ್ಜಿ ಸ್ವೀಕಾರ ಮಾಡಲು, ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 ರವರು ಪರಿಶೀಲನ ಮಾಡಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಅನುಮೋದನೆಗಾಗಿ ಕಳುಹಿಸಬೇಕಾಗುತ್ತದೆ.

ಇ-ಸ್ವತ್ತು ನಿರ್ವಹಣೆಗೆ ಸಂಬಂಧಿಸಿದ ಕಾರ್ಯ ವಿಧಾನದ ಬಗ್ಗೆ ಮೇಲ್ಕಂಡ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಎಲ್ಲಾ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳಿಗೆ ಮತ್ತೊಮ್ಮೆ ಸೂಚಿಸಿದೆ.

ಬೆಂಗಳೂರಿನ ಐದು ಹೊಸ ಪಾಲಿಕೆಗಳಿಗೆ ಏಕಕಾಲಕ್ಕೆ ಚುನಾವಣೆ: ಇಲ್ಲಿದೆ ನೋಡಿ ಹೊಸ ಅಪ್ಡೇಟ್ಸ್‌

Leave a Reply

Your email address will not be published. Required fields are marked *