ಬೆಂಗಳೂರಿನ ಸ್ಥಳೀಯ ಆಡಳಿತಕ್ಕೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಬೆಂಗಳೂರಿನ ಹೊಸ ಐದು ಪಾಲಿಕೆಗಳ ಚುನಾವಣೆಗೆ ಕೊನೆಗೂ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಕಳೆದ ಐದು ವರ್ಷಕ್ಕೂ ಹೆಚ್ಚು ಅವಧಿಯಿಂದ ಬೆಂಗಳೂರಿನ ಚುನಾವಣೆ ನಡೆದಿಲ್ಲ. ಕೋವಿಡ್ ನೆಪವನ್ನು ಇರಿಸಿಕೊಂಡು ಬೆಂಗಳೂರಿನಲ್ಲಿ ಚುನಾವಣೆ ನಡೆದಿರಲಿಲ್ಲ. ಅಲ್ಲದೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡಿ ಹೊಸ ಪಾಲಿಕೆಗಳನ್ನು ರಚನೆ ಮಾಡುವುದಾಗಿ ಹೇಳಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಬೆಂಗಳೂರಿನ ಚುನಾವಣೆಗಳನ್ನು ಮುಂದೂಡಿಕೊಂಡೇ ಬಂದಿದೆ. ಇದೀಗ ಕೊನೆಗೂ ಕೋರ್ಟ್ ಮಧ್ಯಪ್ರವೇಶದಿಂದ ಚುನಾವಣೆ ಸಿದ್ಧತೆ ಶುರುವಾಗಿದೆ.
ಕರ್ನಾಟಕದಲ್ಲೇ ಅತೀ ಹೆಚ್ಚು ಜನಸಂಖ್ಯೆ ಇರುವ ಹಾಗೂ ಬೃಹತ್ ಪಾಲಿಕೆಗಳನ್ನು ಹೊಂದಿರುವ ಬೆಂಗಳೂರಿನಲ್ಲಿ ಕಳೆದ ಆರು ವರ್ಷಗಳಿಂದಲೂ ಚುನಾವಣೆ ನಡೆದಿಲ್ಲ. ಇದೀಗ ಕೊನೆಗೂ ನಾವು ಬೆಂಗಳೂರಿನ ಐದು ಪಾಲಿಕೆಗಳ ಚುನಾವಣೆ ನಡೆಸುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಸುಪ್ರೀಂ ಕೋರ್ಟ್‌ಗೆ ಈ ಸಂಬಂಧ ಹೆಚ್ಚುವರಿ ಪ್ರಮಾಣಪತ್ರವನ್ನು ರಾಜ್ಯ ನಗರಾಭಿವೃದ್ಧಿ ಇಲಾಖೆಯಿಂದ ಸಲ್ಲಿಕೆ ಮಾಡಲಾಗಿದೆ.
ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯನ್ನು ಕಳೆದ ಆರು ವರ್ಷಗಳ ಅವಧಿಯಿಂದ ನಡೆದಿಲ್ಲ. ಕೊನೆಗೂ ಚುನಾವಣೆಯನ್ನು ನಡೆಸುವುದಾಗಿ ಹೇಳಲಾಗಿದ್ದು. ಇದೇ ಡಿಸೆಂಬರ್‌ಗೆ ಬೆಂಗಳೂರಿನ ಪಾಲಿಕೆಗಳ ಚುನಾವಣೆ ನಡೆಯಲಿದೆ. ಬೆಂಗಳೂರಿನ ಶಾಸಕರ ಒತ್ತಡಕ್ಕೆ ಮಣಿದು ಪಾಲಿಕೆಯ ಚುನಾವಣೆಯನ್ನು ಮುಂದೂಡಿಕೊಂಡೇ ಬರಲಾಗುತ್ತಿದೆ. ಅಲ್ಲದೇ ಪಾಲಿಕೆಯ ಸದಸ್ಯರು ಇಲ್ಲದೆ ಬೆಂಗಳೂರಿನ ಸಮಸ್ಯೆಗಳು ಹೆಚ್ಚಾಗುತ್ತಲ್ಲೇ ಇವೆ. ಇದೀಗ ಕೊನೆಗೂ ಡಿಸೆಂಬರ್‌ನಲ್ಲಿ ಪಾಲಿಕೆಯ ಚುನಾವಣೆಯನ್ನು ನಡೆಸಲಿದ್ದೇವೆ. ಹೊಸ ಐದು ಪಾಲಿಕೆಗಳಿಗೂ ಏಕಕಾಲಕ್ಕೆ ಚುನಾವಣೆ ನಡೆಯಲಿದೆ ಎಂದು ಹೇಳಲಾಗಿದೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ- 2024 (ಜಿಬಿಜಿಎ) ಅಡಿಯಲ್ಲಿ ಬಿಬಿಎಂಪಿ ವ್ಯಾಪ್ತಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶ (ಜಿಬಿಎ) ಎಂದು ಈಗಾಗಲೇ ಗುರುತಿಸಲಾಗಿದ್ದು. 2025ರ ಮೇ 15ರಂದು ಸರ್ಕಾರ ಈ ಬಗ್ಗೆ ಅಧಿಸೂಚನೆ ಹೊರಡಿಸಿತ್ತು. ಗ್ರೇಟರ್ ಬೆಂಗಳೂರು ಪ್ರದೇಶದಲ್ಲೇ ಐದು ನಗರ ಪಾಲಿಕೆಗಳನ್ನು ರಚಿಸಲಾಗಿದೆ. ಈ ಹಿಂದಿನಂತೆಯೇ 198 ವರ್ಡ್‌ಗಳಿಗೆ ಚುನಾವಣೆ ನಡೆಯಲಿದೆ.
ಐದು ಪಾಲಿಕೆ ಚುನಾವಣೆ ಇದೇ ಮೊದಲು: ಇನ್ನು ಬೆಂಗಳೂರಿನ ಇತಿಹಾಸದಲ್ಲೇ ಐದು ಪಾಲಿಕೆಗಳಿಗೆ ಚುನಾವಣೆ ನಡೆಯುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಒಂದಾಗಿತ್ತು. ಎಲ್ಲಾ ಭಾಗದಲ್ಲೂ ಏಕಕಾಲಕ್ಕೆ ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗುತ್ತಿತ್ತು. ಆದರೆ, ಕಳೆದ ಆರು ವರ್ಷಗಳಿಂದ ಪಾಲಿಕೆಯಲ್ಲಿ ಅಧಿಕಾರಿಗಳ ದರ್ಬಾರು ಮುಂದುವರಿದಿದೆ. ಅಧಿಕಾರಿ ವರ್ಗದಿಂದಲೇ ಆಡಳಿತಾಧಿಕಾರಿ ನೇಮಕ ಹಾಗೂ ಬಜೆಟ್‌ಗಳ ಮಂಡನೆ ನಡೆದಿದೆ. ಕೊನೆಗೂ 2025ರ ಕೊನೆಯಲ್ಲಿ ಚುನಾವಣೆ ನಡೆಯಲಿದೆ ಎಂದು ಹೇಳಲಾಗಿದೆ. ಆದರೆ, ಆಗಲಾದರೂ ನಡೆಯಲಿದೆಯೇ ಇಲ್ಲ ಮತ್ತೆ ಮುಂದೂಡಿಕೆ ಆಗಲಿದೆಯೇ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿ ನಾಲ್ವರು ಪೊಲೀಸ್ ಅಧಿಕಾರಿಗಳ ಅಮಾನತು ಆದೇಶ ರದ್ದು


