BBMP
Loading ...

Maheshwarrao

ಬೆಂಗಳೂರು : ಆನ್ಲೈನ್ ಮೂಲಕ ಬಿ ಖಾತಾದಿಂದ ಎ ಖಾತ ಮಾನ್ಯತೆ ವಿಚಾರವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಹತ್ವದ ಹೇಳಿಕೆ ನೀಡಿದ್ದು, ಬಿ ಖಾತದಿಂದ ಎ ಖಾತ ಕೊಡಲು ಸರಕಾರದಿಂದ ಆದೇಶ ಆಗಿದೆ ಎಂದು ಬಿಬಿಎಂಪಿ ಆಯುಕ್ತ ಮಹೇಶ್ವರ ರಾವ್ ತಿಳಿಸಿದರು.

ಎರಡು ವಾರದಲ್ಲಿ ಈ ಬಗ್ಗೆ ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡುತ್ತೇವೆ. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಎರಡು ವಾರದಲ್ಲಿ ಅವಕಾಶ ನೀಡುತ್ತೇವೆ. ಏನು ನಿಯಮಗಳು ಇರುತ್ತವೋ ಅದನ್ನು ಫಾಲೋ ಮಾಡಬೇಕಾಗುತ್ತದೆ ಎಂದು ಹೇಳಿದರು.

ಎ ಖಾತ ಮಾಡಿಸಿಕೊಳ್ಳುವುದಕ್ಕೆ ಎಷ್ಟು ಹಣ ಭರಿಸಬೇಕೆಂಬುದರ ಕುರಿತು ಚರ್ಚಿಸಲಾಗಿದ್ದು, ಅದನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ.ಹೊಸ ಮಾರ್ಗಸೂಚಿಯಲ್ಲಿಯೇ ಎಲ್ಲ ಮಾಹಿತಿ ನೀಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ಹೇಳಿಕೆ ನೀಡಿದರು.

ಡಿಸೆಂಬರ್‌ನಲ್ಲಿ ಚುನಾವಣೆ ನಡೆಸಲು ಸಿದ್ಧ ಎಂದ ರಾಜ್ಯ ಸರ್ಕಾರ: ಸು‍ಪ್ರೀಂ ಕೋರ್ಟ್‌ಗೆ ಅಫಿಡೆವಿಟ್​ ಸಲ್ಲಿಕೆ

Leave a Reply

Your email address will not be published. Required fields are marked *