BBMP
Loading ...

PSI

ಬೆಂಗಳೂರು: ನಗರದ ಬೇಗೂರು ಪೊಲೀಸ್ ಠಾಣೆಯ ಪಿಎಸ್‌ಐ ಪುನೀತ್ ವಿರುದ್ಧ ಗಂಭೀರ ಹಲ್ಲೆ ಆರೋಪ ಕೇಳಿಬಂದಿದ್ದು, ಹಲ್ಲೆಯಿಂದಾಗಿ ಬಾಡಿಗೆದಾರ ಶಾಶ್ವತ ಶ್ರವಣದೋಷಕ್ಕೊಳಗಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಉದಯ ಕುಮಾರ್ (26) ಎಂಬ ಬಾಡಿಗೆದಾರರ ಮೇಲೆ, ಮನೆಯ ಮಾಲೀಕರ ನಡುವಿನ ಜಗಳದ ಹಿನ್ನೆಲೆಯಲ್ಲೇ ಪಿಎಸ್‌ಐ ಪುನೀತ್ ಠಾಣೆಗೆ ಕರೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ನಂತರ ಕಾಲಿನಿಂದ ಒದ್ದು, ಕೈಯಿಂದ ಕಪಾಳಕ್ಕೆ ಬಲವಾಗಿ ಹೊಡೆದು ಗಂಭೀರವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಹಲ್ಲೆಯ ಪರಿಣಾಮ, ಉದಯ ಕುಮಾರ್‌ ಗೆ ಎಡಕಿವಿಯಿಂದ ಶ್ರವಣಶಕ್ತಿ ಸಂಪೂರ್ಣವಾಗಿ ಕಳೆದುಹೋಗಿದ್ದು, ವೈದ್ಯಕೀಯ ಪರೀಕ್ಷೆಯಿಂದ ಈ ಅಂಶ ದೃಢಪಟ್ಟಿದೆ.ಈಗಾಗಲೇ ಉದಯ ಪರ ವಕೀಲರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದು, ನ್ಯಾಯಕ್ಕಾಗಿ ಉದಯ್​ ಕುಮಾರ್ ಕೋರ್ಟ್ ಮೆಟ್ಟಿಲೇರಿದ್ದಾರೆ.

ಮೆಜೆಸ್ಟಿಕ್ ರೈಲ್ವೆ ಸ್ಟೇಷನ್‌ನಲ್ಲಿ ಟಿಕೆಟ್ ದಂಧೆ : ಹಣ ಕೊಟ್ರೆ ವೇಟಿಂಗ್ ಲಿಸ್ಟ್ ಇದ್ರೂ ಕನ್ಫರ್ಮ್ ಆಗುತ್ತೆ!

Leave a Reply

Your email address will not be published. Required fields are marked *