ಬೆಂಗಳೂರು (ಜು 21): ರೌಡಿಶೀಟರ್ ಶಿವಕುಮಾರ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪೊಲೀಸರು ಮತ್ತೆ ಮೂವರನ್ನ ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಜೂನ್ 19ರಂದು ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಮೂರು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಿದ್ದರು.
ಮೂವರ ಪೊಲೀಸ್ ವಶಕ್ಕೆ
ರೌಡಿಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅನಿಲ್, ಅರುಣ್ ಹಾಗೂ ನವೀನ್ ಬಂಧಿತರು ಎನ್ನಲಾಗ್ತಿದೆ. ಭಾರತೀನಗರ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಅನಿಲ್ ಎಂಬುವವರು ಭೈರತಿ ಬಸವರಾಜ್ ಸಂಬಂಧಿ ಅನ್ನೋ ಮಾಹಿತಿ ಹೊರಬಿದ್ದಿದೆ.
ಎ1 ಆರೋಪಿಯ ಸಹಚರರು
ಉಳಿದಂತೆ ಅರುಣ್ ಹಾಗೂ ನವೀನ್ ಇಬ್ಬರೂ ಎ1 ಆರೋಪಿ ಎಂದು ಜಗದೀಶ್ ಸಹಚರರು ಎನ್ನಲಾಗ್ತಿದೆ. ಕೊಲೆ ಬಳಿಕ ಅರುಣ್ ಹಾಗೂ ನವೀನ್ ತಲೆಮರೆಸಿಕೊಂಡಿದ್ರು. ಸದ್ಯ ಮೂವರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬೈರತಿ ಬಸವರಾಜ್ಗೆ ಸಂಕಷ್ಟ
ಬೆಂಗಳೂರಿನ ಭಾರತಿ ನಗರದಲ್ಲಿ ಜುಲೈ 15ರ ರಾತ್ರಿ ಶಿವಕುಮಾರ್ ಅಲಿಯಾಸ್ ಬಿಕ್ಲು ಶಿವು (40) ಅವರನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಈ ಕೊಲೆ ಪ್ರಕರಣದಲ್ಲಿ ಬೈರತಿ ಬಸವರಾಜ್ ಐದನೇ ಆರೋಪಿಯಾಗಿದ್ದಾರೆ. ಈ ಕೇಸ್ ಸಂಬಂಧ ಬೈರತಿ ಬಸವರಾಜ್ ಅವರಿಗೆ ಸಂಕಷ್ಟ ಎದುರಾಗಿದೆ.
3 ಗಂಟೆಗಳ ಕಾಲ ವಿಚಾರಣೆ
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಬೈರತಿಗೆ ಬಂಧನ ಭೀತಿ ಎದುರಾಗಿದೆ. ಕಳೆದ ಶನಿವಾರ ಬೈರತಿ ಬಸವರಾಜ್ ಅವರು ವಿಚಾರಣೆಗೆ ಹಾಜರಾಗಿದ್ದರು. ಅವರನ್ನ 3 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಲಾಯಿತು. ಜುಲೈ 23 ಬುಧವಾರದಂದು ಮತ್ತೆ ಬೈರತಿ ಬಸವರಾಜ್ ವಿಚಾರಣೆಗೆ ಹಾಜರಾಗಲಿದ್ದಾರೆ.
ಬಿಕ್ಲು ಶಿವ ಹತ್ಯೆ ಪ್ರಕರಣ, ತನಿಖೆ ಚುರುಕು
ಜಮೀನಿನ ವಿವಾದ ಹಿನ್ನೆಲೆ ಬಿಕ್ಲು ಶಿವ ಹತ್ಯೆ ನಡೆದಿದೆ ಎನ್ನಲಾಗ್ತಿದೆ. ಪ್ರಕರಣದ ಸಂಬಂಧ ಪೊಲೀಸರು ಈಗಾಗಲೇ ಜಗದೀಶ್, ಕಿರಣ್, ವಿಮಲ್, ಅನಿಲ್ ಮತ್ತು ಫ್ರೆಡ್ರಿಕ್ ಅವರನ್ನು ಬಂಧಿಸಿ ನಗರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ರು. ನ್ಯಾಯಾಲಯ ಆರೋಪಿಗಳನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಪೊಲೀಸರು ತನಿಖೆಯನ್ನ ಚುರುಕುಗೊಳಿಸಿದ್ದಾರೆ.
ಧರ್ಮಸ್ಥಳ ತಲೆಬುರಡೆ ಪ್ರಕರಣ: ತನಿಖೆಗೆ ಆರಂಭದಲ್ಲೇ ವಿಘ್ನ, ಎಸ್ಐಟಿಯಿಂದ ಇಬ್ಬರು ಅಧಿಕಾರಿಗಳು ಹಿಂದಕ್ಕೆ?


