ಬೆಂಗಳೂರು: ನಿನ್ನೆ (ಜುಲೈ 13) ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ಮುಖ್ಯರಸ್ತೆಯ ತಾವರೆಕೆರೆ ಯಲ್ಲಿ “ನಾಡಪ್ರಭು ಕೆಂಪೇಗೌಡರ 516ನೇ ಜಯಂತೋತ್ಸವ” ಕಾರ್ಯಕ್ರಮದಲ್ಲಿ ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನ – ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಂಜಾವಧೂತ ಮಹಾ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿದರು.

ಶ್ರೀಗಳು ಆಶೀರ್ವಚನಗಳನ್ನು ನೀಡಿ ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ಉದ್ಘಾಟಿಸಿ, ರೈತರಿಗೆ ಸನ್ಮಾನ, ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ತರಗತಿಗಳಲ್ಲಿ ಉನ್ನತ ಅಂಕಗಳಿಸಿದ ಪ್ರತಿಭಾವಂತ ಮಕ್ಕಳಿಗೆ ಅಭಿನಂದನಾ ಪತ್ರಗಳನ್ನು ವಿತರಿಸಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ತಾವರೆಕೆರೆಯ ಶ್ರೀ ಹಠಯೋಗಿ ಕಾಳಪ್ಪ ಸ್ವಾಮಿ ಮಠದ ಪೂಜ್ಯ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿಯವರು, ಸಮಾಜ ಸೇವಕರು ಹಾಗೂ ಶ್ರೀ ಕೆಂಪೇಗೌಡ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಆದ ಶ್ರೀ ಡಾ. ಹೆಚ್.ಎಂ. ಕೃಷ್ಣಮೂರ್ತಿ ರವರು, ಯುವ ಮುಖಂಡರುಗಳಾದ ಶ್ರೀ ಟಿ.ಎಲ್. ವೆಂಕಟೇಶ್ ರವರು, ಶ್ರೀ ಪಿ.ಎ. ಶಂಕರೇಗೌಡ ರವರು, ಶ್ರೀ ಟಿ.ಎಲ್.ಕೆಂಪೇಗೌಡ ರವರು, ಶ್ರೀ ಟಿ.ಎಲ್. ಚಂದ್ರಶೇಖರ್ ರವರು, ಶ್ರೀ ಟಿ.ಎ. ಮೂರ್ತಿ ರವರು, ಶ್ರೀ ಸಂತೋಷ್ ಕುಮಾರ್ ರವರು, ಶ್ರೀ ನಯನ್ ಕುಮಾರ್ ರವರು, ಶ್ರೀ ಜಯಕುಮಾರ್ ರವರು, ಶ್ರೀ ಗಿರೀಶ್ ರವರು, ತಾವರೆಕೆರೆ ಮತ್ತು ಅಕ್ಕ – ಪಕ್ಕದ ಗ್ರಾಮಸ್ಥರು ಹಾಗೂ ಭಕ್ತರು ಪರಮಪೂಜ್ಯ ಜಗದ್ಗುರುಗಳ ಆಶೀರ್ವಾದಗಳನ್ನು ಪಡೆದರು.



