ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ BMRCL ಮತ್ತೊಂದು ಗುಡ್ನ್ಯೂಸ್ ಕೊಟ್ಟಿದೆ. ಜನಾಕ್ರೋಶಕ್ಕೆ ಮಣಿದ ಅಧಿಕಾರಿಗಳು ಶೀಘ್ರದಲ್ಲೇ ಹಳದಿ ಮಾರ್ಗ ಸಂಚಾರಕ್ಕೆ ಚಾಲನೆ ಕೊಡಲಿದೆ. ಅದು ಯಾವಾಗ ಅಂತೀರಾ? ಈ ಸ್ಟೋರಿ ನೋಡಿ..
ಬೆಂಗಳೂರಿನ ಸಂಚಾರ ನಾಡಿ ನಮ್ಮ ಮೆಟ್ರೋ ನಿತ್ಯ ಲಕ್ಷಾಂತರ ಮಂದಿಗೆ ಅನುಕೂಲವಾಗಿದೆ. ಟ್ರಾಫಿಕ್ ಕಿರಿಕಿರಿಯಿಂದ ಸಿಟಿ ಮಂದಿಯನ್ನ ಮುಕ್ತವಾಗಿಸಿದೆ. ಅಲ್ದೇ ಉತ್ತಮ ಸೇವೆ ಕೊಡೋದ್ರಲ್ಲೂ ಸೈ ಅನಿಸ್ಕೊಂಡಿದೆ. ಇದ್ರ ಮಧ್ಯೆ ಬೊಮ್ಮಸಂದ್ರ TO ಆರ್ವಿ ರಸ್ತೆಯ ಯೆಲ್ಲೋ ಲೈನ್ ಮೆಟ್ರೋ ಸಂಚಾರ ಯಾವಾಗ ಅನ್ನೋದು ದೊಡ್ಡ ಪ್ರಶ್ನೆಯಾಗಿತ್ತು.
ಬೊಮ್ಮಸಂದ್ರ TO ಆರ್ವಿ ರಸ್ತೆಯ ನಡುವೆ 2022ರಲ್ಲೇ ಸಂಚಾರಕ್ಕೆ ಮಾರ್ಗ ಮುಕ್ತವಾಗ್ಬೇಕಿತ್ತು. ಆದರೆ 3 ವರ್ಷ ಕಳೆದರೂ ಇನ್ನೂ ಓಪನ್ ಆಗಿಲ್ಲ. ಅಲ್ದೇ ಈವರೆಗೂ 8 ಸಲ ಡೆಡ್ ಲೈನ್ ಕ್ರಾಸ್ ಮಾಡಿ BMRCL ಪ್ರತಿಬಾರಿ ನಿರಾಸೆ ಮಾಡಿಸಿದೆ.
ಹೀಗಾಗಿ ಹಳದಿ ಮಾರ್ಗ ಬೇಗ ಆರಂಭಿಸಿ ಅಂತ ಇವತ್ತು ಬೆಂಗಳೂರು ಬಿಜೆಪಿ ಸಂಸದರು, ಶಾಸಕರು ಲಾಲ್ಭಾಗ್ ಬಳಿ ಪ್ರತಿಭಟನೆ ಮಾಡಿದರು. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಸಂಸದ ಪಿಸಿ ಮೋಹನ್, ಶಾಸಕರುಗಳಾದ ಸಿಕೆ ರಾಮಮೂರ್ತಿ, ರವಿಸುಬ್ರಮಣ್ಯ ಸೇರಿ ನೂರಾರು ಬೆಂಬಲಿಗರು ಪ್ರತಿಭಟಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಅಲ್ಲದೇ ಮೆಟ್ರೋ ವಿಳಂಬದಿಂದ ಜನರಿಗೆ ಎಷ್ಟು ಸಮಸ್ಯೆ ಆಗ್ತಿದೆ ಅಂತ BMRCL ಎಂಡಿಗೆ ಮನವರಿಕೆ ಮಾಡಿದ್ದರು.
15ರ ಒಳಗಡೆ ಮೇಟ್ರೋ ಓಪನ್ ಆಗಿಲ್ಲ ಎಂದರೆ, ಯಲ್ಲೋ ಲೈನ್ ನ ಎಲ್ಲಾ ಮೆಟ್ರೋ ನಿಲ್ದಾಣದಲ್ಲಿ ಬಿಜೆಪಿಯ ಶಾಸಕರು, ಸಂಸದರು, ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಾರೆ ಎಂದು ಸಂಸದ ತೇಜಸ್ವಿ ಸೂರ್ಯ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ನಾಯಕರ ಸಮಸ್ಯೆ ಬಗ್ಗೆ ತಿಳಿಸ್ತಿದ್ದಂತೆ BMRCL ಎಂಡಿ ಮಹೇಶ್ವರ್ ರಾವ್, ಆಗಸ್ಟ್ 15ರೊಳಗೆ ಹಳದಿ ಮೆಟ್ರೋ ಮಾರ್ಗಕ್ಕೆ ಚಾಲನೆ ಕೊಡುವ ಭರವಸೆ ಕೊಟ್ಟಿದ್ದಾರೆ. ನಿಯಮಗಳ ಅನುಸಾರವೇ ನಾವು ಮಾಡಬೇಕಿದೆ, ಆ ಕಾರ್ಯ ಈಗಾಗಲೇ ನಡೆಯುತ್ತಿದೆ. ನಮ್ಮ ಒಪ್ಪಂದದ ಅನ್ವಯ ಮೆಟ್ರೋ ಗಳು ಆಗಮಿಸುತ್ತವೆ ಎಂದು ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದ್ದಾರೆ.
ಇತರೆ ಮಾರ್ಗದಂತೆ ಪ್ರತಿ 6-7 ನಿಮಿಷಕ್ಕೆ ಮೆಟ್ರೋ ಇರಲ್ಲ. ಕೇವಲ 3 ರೈಲು ಇರೋದ್ರಿಂದ ಪ್ರತಿ ಅರ್ಧ ಗಂಟೆಗೊಮ್ಮೆ ಮೆಟ್ರೋ ಓಡಾಡಲಿದೆ. ಇನ್ನು ಬೊಮ್ಮಸಂದ್ರದಿಂದ ಆರ್ವಿ ರಸ್ತೆವರೆಗೂ 19 ಕಿಲೋ ಮೀಟರ್ ಇದ್ದು, 16 ಸ್ಟೇಷನ್ಗಳಿವೆ. ಹೀಗಾಗಿ ಸಂಪೂರ್ಣ ಸೇವೆ ಸಿಗೋದು ಅನುಮಾನ ಎನ್ನಲಾಗ್ತಿದೆ. 3 ರೈಲಿನೊಂದಿಗೆ ಸೇವೆ ಆರಂಭವಾದ್ರೆ ಏಳೆಂಟು ಸ್ಟೇಷನ್ ಮಾತ್ರ ಸೇವೆ ಆರಂಭಿಸಲಿದ್ದು, ಎಲ್ಲಿಂದ ಎಲ್ಲಿಗೆ ಅನ್ನೋದು ಚರ್ಚೆ ಆಗ್ತಿದೆ.
ಅ.2 ರಂದು ಪ್ಯಾನ್ ಇಂಡಿಯಾ ಭಾಷೆಗಳಲ್ಲಿ ‘ಕಾಂತಾರ-1’ ಚಲನಚಿತ್ರ ರಿಲೀಸ್


