BBMP
Loading ...

DKS

ಮೈಸೂರು : ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ ಎಂದು ಕಾಂಗ್ರೆಸ್ ಪಕ್ಷದ ಹಲವು ನಾಯಕರೇ ಹೇಳಿಕೆ ನೀಡಿದ್ದರು. ಅಲ್ಲದೆ ಬರುವ ಡಿಸೆಂಬರ್ ನಲ್ಲಿ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಆಗಲಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಒಗ್ಗಟ್ಟು ಪ್ರದರ್ಶನ ಮಾಡಿದ್ದು ನಮ್ಮ ಸರ್ಕಾರ ಬಂಡೆ ರೀತಿಯಲ್ಲಿ ಭದ್ರವಾಗಿರುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಮ್ಮ ಸರ್ಕಾರ ಬಂಡೆ ರೀತಿ 5 ವರ್ಷ ಸುಭದ್ರವಾಗಿರುತ್ತದೆ ನಾನು ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಚೆನ್ನಾಗಿಯೇ ಇದ್ದೇವೆ ಎಂದು ನಗುತ ಡಿಕೆ ಶಿವಕುಮಾರ್ ಅವರು ಕೈ ಹಿಡಿದು ಹೇಳಿಕೆ ನೀಡಿದರು ಈ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಗುಳ್ನಕ್ಕ ಘಟನೆ ನಡೆಯಿತು ನಾವು ಈಗಲೂ ಒಗ್ಗಟ್ಟಾಗಿದ್ದೇವೆ ಮುಂದೆ ಒಗಟ್ಟಾಗಿ ಇರುತ್ತೇವೆ ಯಾರೇ ಏನೇ ತಂದು ಹಾಕಿದರೂ ಅವರ ಮಾತನ್ನು ನಾವು ಕೇಳಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು.

ಇನ್ನು ವಿಪಕ್ಷ ನಾಯಕ ಆರ್ ಅಶೋಕ್ ದಸರಾ ವೇಳೆಗೆ ಸಿಎಂ ಬದಲಾವಣೆ ಎಂದು ಹೇಳಿಕೆ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ಬಿಜೆಪಿ ಅವರು ಯಾವಾಗಲೂ ಸುಳ್ಳು ಹೇಳುವುದರಲ್ಲಿ ನಿಸ್ಸಿಮರು. ಈ ಬಾರಿ ನಾನೇ ದಸರಾ ಉದ್ಘಾಟಿಸುತ್ತೇನೆ ಎಂದು ನಿಮಗೆ ಅನಿಸಿದೆ ಅಲ್ವಾ? ಅದೇ ಸತ್ಯ. ನಮ್ಮ ಬಗ್ಗೆ ಮಾತನಾಡುವ ಶ್ರೀರಾಮಲು ಎಷ್ಟು ಸಲ ಸೋತಿದ್ದಾರೆ ಹೇಳಿ? ಆಗ ಶ್ರೀರಾಮುಲುಗೆ ತಮ್ಮ ಭವಿಷ್ಯ ಗೊತ್ತಿರಲಿಲ್ಲವಾ? ಎಂದು ಬಿಜೆಪಿ ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಿಮ್ಮ ಆಸ್ತಿ, ನಮ್ಮ ಗ್ಯಾರಂಟಿ, ಇ-ಖಾತಾ ಪಡೆದುಕೊಳ್ಳಿ, ವಂಚನೆಯಿಂದ ತಪ್ಪಿಸಿಕೊಳ್ಳಿ: DCM ಡಿಕೆ.ಶಿವಕುಮಾರ್

Leave a Reply

Your email address will not be published. Required fields are marked *