BBMP
Loading ...

Invitation Card

ಬೆಂಗಳೂರು: ಇದೇ ಗುರುವಾರ (ಜೂನ್​ 26) ಬೆಳಗ್ಗೆ 8.30ಕ್ಕೆ ಇಂಧನ ಇಲಾಖೆ ವಿದ್ಯುತ್‌ ಪರಿವೀಕ್ಷಣಾಲಯದಿಂದ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಕಾರ್ಯಕ್ರಮ-2025 ನಡೆಯಲಿದೆ.

ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಕಾರ್ಯಕ್ರಮ ಕರ್ನಾಟಕ ರಾಜ್ಯ ಸರ್ಕಾರದ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಗೌರವ್​ ಗುಪ್ತ ಅವರು ಉದ್ಘಾಟಿಸಲಿದ್ದಾರೆ.

ಕ.ವಿ.ಪ್ರ.ನಿ.ನಿ. ನಿರ್ದೇಶಕರಾದ ಶ್ರೀ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಶಿವ ಶಂಕರ ಎನ್ ಹಾಗೂ ಇಂಧನ ಇಲಾಖೆಯ ಅಪರ ಕಾರ್ಯದರ್ಶಿಗಳಾದ ಶ್ರೀ ಎಸ್.ಬಿ. ಪ್ರಶಾಂತ ಕುಮಾರ ಅವರು ಮುಖ್ಯ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕರ್ನಾಟಕ ಸರ್ಕಾರ ಮುಖ್ಯ ವಿದ್ಯುತ್ ಪರಿವೀಕ್ಷಕರಾದ ಶ್ರೀ ಟಿ.ಎನ್. ಅಪ್ಪಚ್ಚು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. EIEAOK ಅಧ್ಯಕ್ಷರಾದ ಶ್ರೀ ಹೆಚ್.ಎಸ್. ವೆಂಕಟೇಶ ಹಾಗೂ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್​ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ. ರಮೇಶ್​ ಅವರನ್ನು ಈ ಸಮಾರಂಭಕ್ಕೆ ವಿಶೇಷವಾಗಿ ಆಹ್ವಾನಿಸಲಾಗಿದೆ.

ರಾಜಾಜಿನಗರದ ಬ್ರಿಗೇಡ್ ಗೇಟ್‌ವೇ (ಒರಾಯನ್ ಮಾಲ್ ಹಿಂಭಾಗ) ನಲ್ಲಿ ಈ ಸಮಾರಂಭ ನಡೆಯಲಿದ್ದು, ಎಲೆಕ್ಟ್ರಿಕಲ್‌ ಇನ್ಸ್‌ಪೆಕ್ಟೋರೇಟ್ ಇಂಜಿನಿಯರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಎಲ್ಲರಿಗೂ ಆದರದ ಸುಸ್ವಾಗತವನ್ನು ಕೋರಿದೆ.

ಚಿಕ್ಕಪೇಟೆಯಲ್ಲಿ ಇನ್ನೂ ಮುಗಿಯದ ವೈಟ್ ಟಾಪಿಂಗ್ ಕಾಮಗಾರಿ: ವ್ಯಾಪಾರಸ್ಥರಿಗೆ ನಷ್ಟ, ಬಿಬಿಎಂಪಿಗೆ ಹಿಡಿಶಾಪ..!

ಬಿಆರ್​ ಪಾಟೀಲ್ ಬೆನ್ನಲ್ಲೇ ಸರ್ಕಾರದ ವಿರುದ್ಧ ಸಿಡಿದೆದ್ದ ಮತ್ತೋರ್ವ ಕಾಂಗ್ರೆಸ್ ಶಾಸಕ: ರಾಜೀನಾಮೆಯ ಬೆದರಿಕೆ!

Leave a Reply

Your email address will not be published. Required fields are marked *