BBMP
Loading ...

Mandya Lineman

ಮಂಡ್ಯ : ಮಂಡ್ಯದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ತಲೆಮೇಲೆ ವಿದ್ಯುತ್ ಕಂಬ ಮುರಿದು ಬಿದ್ದು ಲೈನ್ ಮ್ಯಾನ್ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಕುಲುಮೆದೊಡ್ಡಿ ಗ್ರಾಮದ ಕುಮಾರ್ (31) ಎಂದು ಗುರುತಿಸಲಾಗಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಸಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ವಿದ್ಯುತ್ ಲೈನ್ ಕೆಲಸ ಮಾಡುವ ವೇಳೆ ಕಂಬ ಅಳವಡಿಸುವಾಗ ವಿದ್ಯುತ್ ಕಂಬ ಮುರಿದು ಕಂಬ ಲೈನ್ ಮ್ಯಾನ್ ತಲೆ ಮೇಲೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಕುಮಾರ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಶಕ್ತಿ ಯೋಜನೆ ಬಳಿಕ ಪುರುಷರ ಪರಿಸ್ಥಿತಿ ಕೆಟ್ಟದಾಗಿದೆ: ಕಾಂಗ್ರೆಸ್ ಶಾಸಕ ಆರ್.ವಿ. ದೇಶಪಾಂಡೆ ಹೇಳಿಕೆ

Leave a Reply

Your email address will not be published. Required fields are marked *