BBMP
Loading ...

Kodishree

ಹಾಸನ: ರಾಜ್ಯ ಹಾಗೂ ದೇಶಕ್ಕೆ ಮತ್ತೊಂದು ಗಂಡಾಂತರ ಎದುರಾಗಲಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಯಾರೂ ಊಹಿಸಿದ ದು:ಖ ಬರಲಿದೆ. ಜನವರಿಯೊಳಗೆ ರಾಜ್ಯ ಹಾಗೂ ದೇಶಕ್ಕೆ ಮತ್ತೊಂದು ಗಂಡಾಂತರ ಕಾದಿದೆ ಎಂದು ಭಯಾನಕ ಭವಿಷ್ಯ ನುಡಿದಿದ್ದಾರೆ.

ಮೇಘಸ್ಫೋಟ, ಜಲಪ್ರಳಯ, ವಾಯುವಿನಿಂದ ಆಪತ್ತು ಎದುರಾಗಲಿದೆ ಎಂದು ಮೊದಲೇ ಹೇಳಿದ್ದೆ. ವಿಮಾನ ಆಪತ್ತು ಸೇರಿದಂತೆ ಕೆಲ ಆಪತ್ತುಗಳು ಸಂಭವಿಸಲಿವೆ. ಮುಂದೆ ಇನ್ನೊಂದು ದೊಡ್ದ ಮೇಘಸ್ಫೋಟವಾಗಲಿದೆ. ನಿರೀಕ್ಷೆಗೂ ಮೀರಿದ ದು:ಖ ಎದುರಾಗಲಿದೆ ಎಂದು ಹೇಳಿದ್ದಾರೆ.

ಈಗ ಕಂಡುಬರುತ್ತಿರುವ ಅಸ್ತಿರತೆ ಇನ್ನೂ ಹೆಚ್ಚಾಗಲಿದೆ. ಮನುಷ್ಯ ಓಡಾಡುತ್ತಲೆ ಸಾಯುತ್ತಾನೆ ಎಂದು ಹೇಳಿದ್ದೆ. ಅದು ಮುಂದುವರೆಯಲಿದೆ ಎಂದಿದ್ದಾರೆ. ‘ಸೂಳೆಯ ಮಗನುಟ್ಟಿ ಆಳುವನು ಮುನಿಪುರವ ಯುದ್ಧವಿಲ್ಲದ ಮಡಿಯೇ ಪುರವೆಲ್ಲ ಕೂಳಾದೀತು’ ಎಂದು ಮಾರ್ಮಿಕವಾಗಿ ಸ್ವಾಮೀಜಿ ಹೇಳಿದ್ದಾರೆ. ಇದನ್ನು ಬರೆದಿಟ್ಟುಕೊಳ್ಳಿ. ಇದಕ್ಕೆ ಪರಿಹಾರ ಆಮೇಲೆ ಸೂಚಿಸುತ್ತೇನೆ ಎಂದಿದ್ದಾರೆ.

ಭಾರತ ಇರಾನ್‌ ಪರ ನಿಲ್ಲಬೇಕು: ಕೇಂದ್ರ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ ಒತ್ತಾಯ

Leave a Reply

Your email address will not be published. Required fields are marked *