BBMP
Loading ...

Virat Kohli

ಬೆಂಗಳೂರು:- ಬರೋಬ್ಬರಿ 18 ವರ್ಷಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆದ್ದು ಕೊಂಡಿತು. ಇದು ಆರ್ ಸಿಬಿ ಅಭಿಮಾನಿಗಳ ಖುಷಿಯನ್ನು ಡಬಲ್ ಮಾಡಿತ್ತು. ಅಲ್ಲದೇ ದೇಶದೆಲ್ಲೆಡೆ ಸಂಭ್ರಮ ಜೋರಾಗಿತ್ತು.

ಆದ್ರೆ ಈ ಸಂಭ್ರಮದ ಹೊತ್ತಲ್ಲೇ ಸಿಲಿಕಾನ್ ಸಿಟಿಯಲ್ಲಿ ಒಂದು ಆಚಾತುರ್ಯವೇ ನಡೆದುಹೋಯ್ತು. ಎಸ್ ಕಪ್ ಗೆದ್ದ ಖುಷಿಯಲ್ಲಿ ಯಾವುದೇ ಯೋಜನೆ ಇಲ್ಲದೇ ತರಾತುರಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಏರ್ಪಡಿಸಲಾಗಿತ್ತು. ಈ ವೇಳೆ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ನೆರೆದಿದ್ದರಿಂದ ಸುಮಾರು 11 ಮಂದಿ ಸಾವನ್ನಪ್ಪಿದ್ದರು. ಅಲ್ಲದೇ ಸಾಕಷ್ಟು ಮಂದಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಿಂಗ್ ಕೊಹ್ಲಿ ವಿರುದ್ಧ ದೂರು ದಾಖಲಾಗಿದೆ. ಕೊಹ್ಲಿ ವಿರುದ್ಧ ನೈಜ್ಯ ಹೋರಾಟಗಾರರ ಸಂಘ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿದೆ. ದೂರಿನಲ್ಲಿ, ಈ ನೂಕು ನುಗ್ಗಲಿಗೆ ಕೊಹ್ಲಿ ಸಹ ಕಾರಣ ಎಂದು ಆರೋಪಿಸಲಾಗಿದೆ. ಅಲ್ಲದೇ ದುರಂತ ನಡೆದ ಕುಟುಂಬವನ್ನು ಕೊಹ್ಲಿ ಭೇಟಿ ಮಾಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಹಿಂದೆ ಅಲ್ಲು ಅರ್ಜುನ್ ಸಿನಿಮಾ ಸಂದರ್ಭದಲ್ಲಿ ದುರಂತಕ್ಕೆ ನಟ ಕಾರಣ ಎಂದು ಬಂಧಿಸಲಾಗಿತ್ತು. ಈಗ ವಿರಾಟ್ ನೋಡೋದಕ್ಕೆ ಇಷ್ಟೊಂದು ಜನ ಪ್ರಮುಖವಾಗಿ ಸೇರಿದ್ದರು. ಹೀಗಾಗಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಬೆಂಗಳೂರಿನಲ್ಲಿ ಸೆಲಬ್ರೇಷನ್ ತರಾತುರಿಯಲ್ಲಿ ನಡೆಯಿತು. ಇದಕ್ಕೆ ಕೊಹ್ಲಿ ಒತ್ತಡವೇ ಕಾರಣ. ವಿದೇಶ ಪ್ರವಾಸ ಇರೋದ್ರಿಂದ ಅವರು ಸೆಲೆಬ್ರೇಷನ್ ಬೇಗ ನಡೆಸುವವಂತೆ ಒತ್ತಡ ಹೇರಿರುವ ಸಾಧ್ಯತೆ ಇದೆ. ಇಲ್ಲಿ ಮುಗಿಯುತ್ತಿದ್ದಂತೆ ಕೊಹ್ಲಿ ಲಂಡನ್‌ಗೆ ಹೋಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

20,000 ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್

Leave a Reply

Your email address will not be published. Required fields are marked *