BBMP
Loading ...

Mazarai

ಬೆಂಗಳೂರು: ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರೊಬ್ಬರ ನೋವು ತುಂಬಿದ ಅವರ ಮನದಾಳದ ಮಾತುಗಳು ಕೇಳಿದರೆ ಮನಕಲಕುತ್ತದೆ. ಇಂಥದ್ದೊಂದು ಘಟನೆ ಬಹುಶಃ ನೀವು ಈ ಹಿಂದೆಂದೂ ನೋಡಿರುವುದಿಲ್ಲ.

ಬೆಂಗಳೂರಿನ ಅರ್ಚಕರ ಕುಟುಂಬದ, ಹಿರಿಯ ನಾಗರಿಕರು, ರಾಜ್ಯದ ಹಲವಾರು ದೇವಸ್ಥಾನಗಳಲ್ಲಿ ಉಂಟಾಗಿರುವ ಸಾಮಾಜಿಕ, ಆರ್ಥಿಕ, ರಾಜಕೀಯ ಇತ್ಯಾದಿ ವಿಚಾರಗಳು, ಸಮಸ್ಯೆಗಳು ಮತ್ತು ಹದಗೆಟ್ಟ ರಸ್ತೆಗಳಿಂದ ಉಂಟಾದ ದೈಹಿಕ ಮತ್ತು ಮಾನಸಿಕ ಯಾತನೆಗೆ ನೊಂದು ಕಾನೂನು ರೀತಿ ನೋಟಿಸ್ ನೀಡಲು ಸಂಬಂಧಪಟ್ಟ ವಕೀಲರ ಜೊತೆ ನೊಂದ ಅರ್ಚಕರು ಚರ್ಚೆ ಮಾಡಿದ್ದಾರೆ

ಹೌದು, ಬೆಂಗಳೂರಿನ ನಿವಾಸಿಯೊಬ್ಬರು ರಾಜ್ಯ ಮುಜರಾಯಿ ಇಲಾಖೆ ದೇವಸ್ಥಾನಗಳ ಅರ್ಚಕರ/ಸಿಬ್ಬಂದಿ, ವರ್ಗದವರ, ತೀವ್ರ ನೋವು, ಆಘಾತ ಮತ್ತು ಯಾತನೆಗೆ ಪರಿಹಾರ ನೀಡುವಂತೆ ನೋಟಿಸ್ ನೀಡಿಲು ಮುಂದೆ ಬಂದಿದ್ದಾರೆ

ಮಾನಸಿಕವಾಗಿ ತೊಂದರೆಯಿಂದ ಆರೋಗ್ಯ ಹದಗಿಟ್ಟಿದೆ
ಹಳ್ಳಿಗಳಲ್ಲಿ, ರಾಜ್ಯದ ಧಾರ್ಮಿಕ ದತ್ತಿ, ಮುಜರಾಯಿ ಇಲಾಖೆ ದೇವಸ್ಥಾನಗಳ ರಸ್ತೆ ಸರಿ ಇಲ್ಲದ ಕಾರಣ ಮಾನಸಿಕವಾಗಿ ತೊಂದರೆಯಾಗುತ್ತಿದೆ. ರಸ್ತೆ ಅನುಕೂಲ ಮಾಡಿ ಕೊಡಬೇಕು. ವಯಸ್ಸಾದ ಹಿರಿಯ ಅರ್ಚಕರ, ದೈಹಿಕ ಆರೋಗ್ಯ ಕೂಡ ಹಾಳಾಗಿದೆ, ನಮ್ಮ ಜೀವನಕ್ಕೆ ಭದ್ರತೆ ಇಲ್ಲ ಎಂದು ನೋಟಿಸ್‌ನಲ್ಲಿ ದೂರಿದ್ದಾರೆ. ರಾಜ್ಯದಲ್ಲಿ ವಾಸಿಸುವ ಮುಜರಾಯಿ ಅರ್ಚಕರು, ಹೆಚ್ಚಿನ ಸಂಖ್ಯೆಯಲ್ಲಿ ಜಮೀನು ಕಳೆದು ಕೊಂಡಿದ್ದಾರೆ. ಬಜೆಟ್‌ನಲ್ಲೂ ಕೂಡ ನಿರ್ವಹಣೆಗೆ , ಭೂ ವರಹ ಘೋಷಣೆ ಮಾಡಿದ್ದಾರೆ. ಒತ್ತುವರಿ ಜಮೀನು ವಶ ಮಾಡಿ ಕೊಂಡು ಕಾಂಪೌಂಡ್ ಹಾಕಲು, ಹಣ ಸಹ ಸರಕಾರ ಬಿಡುಗಡೆ ಮಾಡಿದೆ. ಕೆಲವು ಭಕ್ತರು ಹಣ, ಹೂಡಿಕೆಯನ್ನು ಸಹ ಮಾಡುತ್ತಾರೆ. ಮೂಲಭೂತ ಸೌಕರ್ಯಗಳನ್ನು ನಿರ್ವಹಿಸುವಲ್ಲಿ ಸ್ಥಳೀಯ ಅಧಿಕಾರಿಗಳು ಗಮನ ಕೊಡಬೇಕು

ಪ್ರತಿನಿತ್ಯ ಸಮಿತಿ ಸದಸ್ಯರು ರವರಿಂದ, ಪೂಜೆ ಹೋಮ ವಿಚಾರದಲ್ಲಿ ಅನಗತ್ಯ ರಾಜಕೀಯ ನಡೆಯುತ್ತಿದೆ. ನೆಮ್ಮದಿಯಾಗಿ ಪೂಜೆ ಮಾಡಲು ಬಿಡುವುದಿಲ್ಲ. ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿ ವೈದ್ಯಕೀಯ ವೆಚ್ಚ ಹೆಚ್ಚಾಗುತ್ತದೆ. ಜೊತೆಗೆ ಹೆಚ್ಚಿನ ನೋವುನ್ನು ಅನುಭವಿಸಿದ್ದೇರೆ ಇದಕೆಲ್ಲಾ ನೀವು ಪರಿಹಾರವನ್ನು ನೀಡಬೇಕು ಎಂದು ಹೇಳಿದ್ಧಾರೆ.

ನೋಟಿಸ್‌ ನೀಡಿದ ವಕೀಲರ ವಾದವೇನು …?
ರಾಜ್ಯ ಮುಜರಾಯಿ ಅರ್ಚಕರು, ಕಾನೂನು ರೀತಿ ಜಮೀನು ಕಳೆದು ಕೊಂಡವರು ಪ್ರಾಮಾಣಿಕ ನಾಗರಿಕರಾಗಿದ್ದರೂ, ಸಾರ್ವಜನಿಕ ಮೂಲ ಸೌಕರ್ಯವನ್ನು ಸುರಕ್ಷಿತವಾಗಿ ನಿರ್ವಹಿಸುವ ಹಕ್ಕನ್ನು ಹೊಂದಿದ್ದರೂ ಮುಜರಾಯಿ ಮೂಲಭೂತ ನಾಗರಿಕ ಮೂಲಸೌಕರ್ಯವನ್ನು ನಿರ್ವಹಿಸುವಲ್ಲಿನ ಸ್ಪಷ್ಟ ವೈಫಲ್ಯದ ಪರಿಣಾಮವಾಗಿ ಅವರು ನಿರಂತರ ದೈಹಿಕ ತೊಂದರೆ ಮತ್ತು ಮಾನಸಿಕ ಯಾತನೆಯನ್ನು ಅನುಭವಿಸುತ್ತಿದ್ದಾರೆ. ರಾಜ್ಯದ ಧಾರ್ಮಿಕ ದತ್ತಿ, ಇಲಾಖೆ ಸಚಿವರು, ಅರ್ಚಕರಿಗೆ ತುಂಬಾ ಒಳ್ಳೆಯದು ಮಾಡಿದ್ದಾರೆ, ಅವರಿಗೆ ದೇವರು ಒಳ್ಳೆಯದು ಮಾಡಲಿ. ಆದರೆ, ಜಿಲ್ಲಾ ಕೇಂದ್ರಗಳಲ್ಲಿ, ತಾಲ್ಲೂಕು ಕಚೇರಿಯಲ್ಲಿ, ಮುಜರಾಯಿ ಇಲಾಖೆ ಅಧಿಕಾರಿಗಳು ಗಮನ ಕೊಡಬೇಕು ಎಂದು ನೊಂದ ಅರ್ಚಕರು ಹೇಳುತ್ತಾರೆ. ಅವರ ನಾಲ್ಕು ಬಾರಿ ಜಿಲ್ಲಾಧಿಕಾರಿಗಳ ಕಚೇರಿ , ತಾಲ್ಲೂಕು ಕಚೇರಿಗೆ ಭೇಟಿ ನೀಡಿದರು, ಅವರ ಸಮಸ್ಯೆ, ನಿವಾರಿಸಲು ಮತ್ತು ಕಾರ್ಯವಿಧಾನಗಳನ್ನು ಅನುಸರಿಸಿ, ನಿರ್ವಹಿಸಲು ಗಮನ ಕೊಡುತ್ತಿಲ್ಲ, ಆಫೀಸ್ ನಲ್ಲಿ ಕೆಲಸ ಆಗುತ್ತಿಲ್ಲ. ನೊಂದ ಅರ್ಚಕರು ಅವರು ನೋವಿನಿಂದ ಅಳುವುದು, ನಿದ್ರೆಯ ನಷ್ಟ, ಆತಂಕ ಮತ್ತು ಮಾನಸಿಕ ಯಾತನೆ ಮುಂತಾದ ಮಾನಸಿಕ ವೇದನೆ, ಸಹ ಅನುಭವಿಸಿದ್ದಾರೆ, ಇವೆಲ್ಲವೂ ಮತ್ತು ದೈನಂದಿನ ಕಾರ್ಯನಿರ್ವಹಣೆಯ ಮೇಲೆ ತೀವ್ರ ಪರಿಣಾಮ ಬೀರಿವೆ ಎಂದಿದ್ದಾರೆ.

ಲೀಗಲ್ ನೋಟಿಸ್ ಶುಲ್ಕ ಪಾವತಿಯ ಮೊತ್ತವನ್ನು ಕೂಡ ಪರಿಹಾರದ ಭಾಗವಾಗಿ ರಾಜ್ಯ ಮುಜರಾಯಿ ಇಲಾಖೆ ವತಿಯಿಂದ, ವಸೂಲಿ ಮಾಡಬೇಕೆಂದು ಒತ್ತಾಯಿಸಲಾಗಿದೆ. 3 ತಿಂಗಳ ಕಾಲಾವಧಿಯಲ್ಲಿ, ಅರ್ಚಕರ/ ಸಿಬ್ಬಂದಿ ವರ್ಗದವರ ನೇಮಕಾತಿ ಆದೇಶ ನೀಡಬೇಕು, ವಂಶ ಪಾರಂಪರ್ಯವಾಗಿ ಬಂದಿರುವ ಆಗಮಿಕರು, ಉಪಾದಿವಂತರು, ಅವರ ನೇಮಕ ಮಾಡಬೇಕು, ಹಳೇ ಬಾಕಿ ತಸ್ತಿಕ ಹಣ ಮಂಜೂರು ಮಾಡಬೇಕು , ಅರ್ಚಕರ ತಸ್ತಿಕ/ ಸಿಬ್ಬಂದಿ, ವರ್ಗದವರ ಸಂಬಳ ನಿಗದಿ ಮಾಡಬೇಕು. 3 ತಿಂಗಳು ಒಳಗಾಗಿ, ಯಾವುದೇ ಕ್ರಮ ಕೈಗೊಂಡಿಲ್ಲದಿದ್ದರೆ, ಮುಂದಿನ ಕಾನೂನು ಕ್ರಮಗಳು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಮುಂದಿನ ಕ್ರಮಗಳ ಎಚ್ಚರಿಕೆ ಕ್ರಮದ ವಿವರ
ಸಿವಿಲ್ ಮೊಕದ್ದಮೆ: ನಷ್ಟಗಳ ಪರಿಹಾರಕ್ಕೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುತ್ತದೆ. ಇದರಲ್ಲಿ , ಅರ್ಚಕರ/ ಸಿಬ್ಬಂದಿ, ವರ್ಗದವರ, ವೈದ್ಯಕೀಯ ವೆಚ್ಚ, ನೋವು, ಮಾನಸಿಕ ಆಘಾತದ, ಇತ್ಯಾದಿ , ಪರಿಹಾರ ಇತ್ಯಾದಿಗಳನ್ನು ಒತ್ತಾಯಿಸಲಾಗುತ್ತದೆ.

ಪಿಐಎಲ್ (PIL – Public Interest Litigation)
ಕರ್ನಾಟಕ ಹೈ ಕೋರ್ಟ್‌ ನಲ್ಲಿ, ಭಕ್ತರ ಅನುಕೂಲಕ್ಕಾಗಿ, ಸಾರ್ವಜನಿಕ ಹಿತಾಸಕ್ತಿಗಾಗಿ, ಮೊಕದ್ದಮೆ ಹೂಡಲು ಸಿದ್ಧತೆ ನಡೆದಿದೆ. ಇದರಿಂದ ರಾಜ್ಯದ ಎಲ್ಲಾ ಮುಜರಾಯಿ ಅರ್ಚಕರ, ನ್ಯಾಯದ ಬಾಗಿಲು ತೆರೆಯಬಹುದು. ಲೋಕಾಯುಕ್ತ ಮತ್ತು ಮಾನವ ಹಕ್ಕು ಆಯೋಗಳಿಗೆ ದೂರು ನೀಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ರೀತಿಯ ದೂರುಗಳು ಸರ್ಕಾರದ ವಿಭಾಗಗಳ ವಿರುದ್ಧ ತನಿಖೆ ಆರಂಭಿಸಲು ದಾರಿ ಮಾಡಿಕೊಡಬಹುದು. ರಾಜ್ಯ ಧಾರ್ಮಿಕ ದತ್ತಿ, ಮುಜರಾಯಿ ಇಲಾಖೆ, ಪ್ರಭುತ್ವ ಅಥವಾ ನಿರ್ವಹಣಾ ದೌರ್ಬಲ್ಯಗಳು ಲೆಕ್ಕಕ್ಕೆ ಬರಬಹುದು.

ರಾಜ್ಯ ಮುಜರಾಯಿ ಇಲಾಖೆ ಯಲ್ಲಿ ಕೆಲವು ಜಿಲ್ಲೆಗಳಲ್ಲಿ ಅಧಿಕಾರಿಗಳು ಅನವಶ್ಯಕವಾಗಿ ಅರ್ಚಕರ/ ಸಿಬ್ಬಂದಿ ವರ್ಗದವರ, ವೇತನ ಇತ್ಯಾದಿ ಕಡತಗಳ File ಗಳನ್ನು ವಾಪಸ್ ಕಳುಹಿಸುತ್ತಾರೆ, ಕಾನೂನು ನಲ್ಲಿ ಅವಕಾಶ ಇದ್ದರೂ ಸಹ, ಫೈಲ್ ವಾಪಸ್ ಕಳಿಸುತ್ತಾರೆ , ಅವರಿಗೆ ಸಹಾಯ ಮಾಡಬೇಕೆಂಬ ಮನಸ್ಸು ಇಲ್ಲ. ರಾಜ್ಯ ಮುಜರಾಯಿ ಇಲಾಖೆ ಗೆ ಹೆಚ್ಚಿನ ಅನುದಾನ ಬರುತ್ತಿದ್ದರೂ ಸಹ ಸರಿಯಾದ ರೀತಿಯಲ್ಲಿ, ಯಾವುದೇ ಉಪಯೋಗವನ್ನು ಪಡೆದುಕೊಳ್ಳಲು ಆಗುತ್ತಿಲ್ಲ, ಈ ಬಗ್ಗೆ ಸ್ಥಳೀಯ ಅಧಿಕಾರಿಗಳು, ಗ್ರಾಮಸ್ಥರು ಗಮನ ಕೊಡಬೇಕು,

ರಾಜ್ಯದ ಹಲವಾರು ತಾಲ್ಲೂಕುಗಳಲ್ಲಿ ದೇವಸ್ಥಾನಗಳ ಸ್ಥಿತಿಯಂತೂ ಹದಗೆಟ್ಟು ಹೋಗಿದೆ. ಅರ್ಚಕರ , ಸಿಬ್ಬಂದಿ ವರ್ಗದವರ ಮೇಲೆ ದಬ್ಬಾಳಿಕೆ ಆಗಿದೆ, ಮಳೆ ಬಂದರೆ ದೇವಸ್ಥಾನದ ಒಳಗಡೆ ನೀರು ಬರುತ್ತದೆ, ಸೋರುತ್ತದೆ. ಸರಿಯಾದ ಜೀರ್ಣೋದ್ದಾರ ಮಾಡಲು ಸರಿಯಾದ ಸಹಕಾರ ಇಲ್ಲ. ದೇವಸ್ಥಾನ ಗಳ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ , ಸಾರ್ವಜನಿಕ ವಂತಿಗೆ ಬರುವುದಿಲ್ಲ, ದೇವಸ್ಥಾನದ ಉಳಿತಾಯ ಖಾತೆಯಲ್ಲಿ ಹಣ ಇಲ್ಲ. ಎಲ್ಲಾ ಹಳ್ಳಿ ದೇವಸ್ಥಾನಗಳ ಹಣಕಾಸು ಮತ್ತು ಅರ್ಚಕರ, ಸಿಬ್ಬಂದಿ ವರ್ಗದವರ ಪರಿಸ್ಥಿತಿ ಉತ್ತಮವಾಗಿಲ್ಲ. ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಸ್ಥಾನಗಳ ತುಂಬಾ ಜನ ಅರ್ಚಕರಿಗೆ ಸರಿಯಾಗಿ ವಾಸ ಮಾಡಲು ಮನೆ ಅನುಕೂಲ ಇಲ್ಲ. ಈ ಬಗ್ಗೆ ಇಲಾಖೆ ಅಧಿಕಾರಿಗಳು ಗಮನ ಕೊಡಬೇಕು

ಜಲಾವೃತಗೊಂಡ ರಸ್ತೆಗಳು
ನಿರಂತರ ಮಳೆಗಳಿಂದ ರಾಜ್ಯದ ಹಲವಾರು ತಾಲ್ಲೂಕು ಗಳಲ್ಲಿ ದೇವಸ್ಥಾನಗಳು, ಮಳೆ ಬಂದರೆ ಸೋರುತ್ತದೆ. ಕರೆಟ್ ಶಾಕ್ ಹೊಡೆಯುತ್ತದೆ. ಹಲವು ಪ್ರದೇಶಗಳು ಜಲಾವೃತಗೊಂಡಿವೆ. ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಅಗಿದೆ. ದೇವಸ್ಥಾನಗಳ ಸುತ್ತಾ ಮುತ್ತಾ ಪಾರ್ಕಿಂಗ್ ಮಾಡಲು ಆಗುವುದಿಲ್ಲ. ಜನ ನಿಂತು ಕೊಳ್ಳಲು ಶೆಲ್ಟರ್​ಗಳ ವ್ಯವಸ್ಥೆ ಇರಬೇಕು. ಶೌಚಾಲಯ ವ್ಯವಸ್ಥೆ ಇರಬೇಕು. ಇದು ಮೂಲಭೂತ ಸೌಕರ್ಯಗಳ ಕೊರತೆಯನ್ನು ತೋರುತ್ತದೆ. ಇದು ಕೇವಲ ನನ್ನ ವೈಯಕ್ತಿಕ ಹೋರಾಟವಲ್ಲ, ಸಾಮಾಜಿಕ ಜವಾಬ್ದಾರಿಯ ಆಗಿದೆ. ಹಾಗಾಗಿ ಪ್ರತಿ ದಿನ ರಾಜ್ಯ ಮುಜರಾಯಿ ಇಲಾಖೆ ಅರ್ಚಕರ, ಸಿಬ್ಬಂದಿ ವರ್ಗದವರ ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆಯುವ ಪ್ರಯತ್ನ ರಂಗರಾಜನ್ ಮಾಡುತ್ತಿದ್ದಾರೆ ಎಂದು ಆ ಅರ್ಚಕರ ಕುಟುಂಬದ ಸದಸ್ಯರು ತಿಳಿಸಿದ್ದಾರೆ

| ರಂಗರಾಜನ್
ರಾಜ್ಯ ಮುಜರಾಯಿ ಅರ್ಚಕರ ಗ್ರೂಪ್ ಅಡ್ಮಿನ್ ಸಂಘಟನಾ ಕಾರ್ಯದರ್ಶಿ, 9632885329

ವಿಧಾನಸೌಧ ಗೈಡೆಡ್ ಟೂರ್‌ಗೆ ಇಂದು ಚಾಲನೆ: ಜೂ.1ರಿಂದ ಸಾರ್ವಜನಿಕರಿಗೆ ಪ್ರವೇಶ, ಶುಲ್ಕ ವಿವರ ಹೀಗಿದೆ..

Leave a Reply

Your email address will not be published. Required fields are marked *