BBMP
Loading ...

Om Prakash

ಬೆಂಗಳೂರು:- ಡಿಜಿಐಜಿಪಿ ಓಂಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆ ವೇಳೆ ಕೊಲೆಗೆ ಹಲವು ಕಾರಣಗಳು ಬಹಿರಂಗವಾಗಿದೆ. ಕೌಟುಂಬಿಕ ಕಾರಣಗಳಿಂದ ಪತಿಯನ್ನ ಪಲ್ಲವಿ ಕ್ರೂರವಾಗಿ ಕೊಂದಿದ್ದಾರೆ. ಸಿಸಿಬಿ ತನಿಖೆ‌ ವೇಳೆ ಕೊಲೆಗೆ ಪ್ರಮುಖ ಕಾರಣಗಳು ಪತ್ತೆಯಾಗಿದೆ.

ಗಂಡನ ಮೇಲೆ ಪತ್ನಿ ಪಲ್ಲವಿ ವಿಪರೀತ ಕೋಪ ಹೊಂದಿದ್ದರು. ಮಗಳಿಗೆ ಮದುವೆ ಮಾಡ್ತಿಲ್ಲ ಅಂತಾ ಕೋಪಗೊಂಡಿದ್ದರಂತೆ. ಅಲ್ಲದೇ ಅಷ್ಟು ದೊಡ್ಡ ಮನೆಯಲ್ಲಿದ್ರೂ ಪಲ್ಲವಿ ಕೈಯಲ್ಲಿ ಹಣ ಕೊಡ್ತಿರಲಿಲ್ಲ.. ಹಣದ ವ್ಯವಹಾರ ಎಲ್ಲಾ ತಾನೇ ನೋಡಿಕೊಳ್ತಿದ್ದರಂತೆ. ಅಲ್ಲದೇ ತನ್ನ ಸ್ವಂತ ಕುಟುಂಬಕ್ಕಿಂತಲೂ ತಂಗಿ ಕುಟುಂಬಕ್ಕೆ ಓಂಪ್ರಕಾಶ್ ಹೆಚ್ಚು ಒತ್ತು ಕೊಡ್ತಿದ್ದರಂತೆ. ಹೀಗಾಗಿ ತನ್ನ ಸ್ವಂತ ಕುಟುಂಬದ ಬಗ್ಗೆ ತಲೆ ಕೆಡಿಸಿಕೊಳ್ತಿಲ್ಲ ಅಂತಾ ಪಲ್ಲವಿ ಕೋಪಗೊಂಡಿದ್ದರು. ಈ ಎಲ್ಲಾ ಕಾರಣಗಳಿಂದ ಗಂಡನ ಮೇಲೆ ಪಲ್ಲವಿಗೆ ಧ್ವೇಷ ಹುಟ್ಟಿಸಿಕೊಂಡಿತು. ಅಲ್ಲದೇ ಎಲ್ಲಾ ವಿಚಾರಗಳಿಂದ ಮಾನಸಿಕವಾಗಿ ಡಿಸ್ಟರ್ಬ್ ಆಗಿದ್ಲು.. ಸಿಸಿಬಿ ಪೊಲೀಸರ ತನಿಖೆ ವೇಳೆ ಈ ಎಲ್ಲಾ ಕಾರಣಗಳಿಂದ ಕೊಲೆ ನಡೆದಿರೋದು ಪತ್ತೆಯಾಗಿದೆ.

ತನಿಖೆ ವೇಳೆ ಮಗಳು ಕೃತಿಯ ಬಗ್ಗೆ ಯಾವುದೇ ಸಾಕ್ಷ್ಯ ಇಲ್ಲ..ಕೊಲೆ‌ ವೇಳೆ ಮನೆಯಲ್ಲೇ ಇದ್ರೂ ಪ್ರಕರಣದಲ್ಲಿ ಭಾಗಿಯಾಗಿಲ್ಲ ಅನ್ನೋದು ಪತ್ತೆಯಾಗಿದೆ. ಸದ್ಯ ಪ್ರಕರಣ ತನಿಖೆಯನ್ನು ಸಿಸಿಬಿ ಪೊಲೀಸರು ಮುಂದುವರಿಸಿದ್ದಾರೆ.

ಕೊಲೆಗೆ ಸಿಸಿಬಿ ತನಿಖೆ ವೇಳೆ ಪತ್ತೆ ಹಚ್ಚಿದ್ದ ಕಾರಣಗಳೇನು?
1. ತನ್ನ ಬಗ್ಗೆ ವೈಯುಕ್ತಿಕವಾಗಿ ಗಮನ ಹರಿಸಿಲ್ಲ ಎಂದು ಆರೋಪಿಸಿರೋ ಪತ್ನಿ..
2. ಮಗಳಿಗೆ ಮದುವೆ ಮಾಡಿಲ್ಲ ಎಂದು ಕೋಪಗೊಂಡಿದ್ದ ಪಲ್ಲವಿ..
3. ತನ್ನ ಭಾಗದ ಕುಟುಂಬದ ಬಗ್ಗೆ ಹೆಚ್ಚು ಗಮನವಹಿಸ್ತಿದ್ದ ಓಂ ಪ್ರಕಾಶ್..
4. ಮನೆ ಸಮಸ್ಯೆಗಳಾದಾಗ ನೇರವಾಗಿ ಸಹೋದರಿ ಮನೆಗೆ ತೆರಳ್ತಿದ್ದ ಓಂ ಪ್ರಕಾಶ್..
5. ಐಷಾರಮಿ ಮನೆಯಲ್ಲಿದ್ರು ಮಗಳ ಕೈಗೆ ಖರ್ಚಿಗೆ ಹಣ ನೀಡ್ತಿರಲಿಲ್ಲ..
6. ಸಂಪೂರ್ಣ ಹಣದ ವ್ಯವಹಾರವನ್ಮ ಓಂ ಪ್ರಕಾಶ್ ಒಬ್ಬರೇ ನೋಡಿಕೊಳ್ತಿದ್ರು..
7. ಈ ಹಿಂದೆ ಕೆಲ ಬಾರಿ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದ ಪಲ್ಲವಿ..
8. ಜಗಳದಿಂದ ನೊಂದು ಓಂ ಪ್ರಕಾಶ್ ತನ್ನನ್ನು ಕೊಲೆ ಮಾಡಬಹುದು ಎಂದೆಲ್ಲಾ ಯೋಚಿಸುತಿದ್ದ ಪಲ್ಲವಿ..
9. ತಾನು ಕೊಲೆಯಾಗುವ ಬದಲು ತಾನೆ ಕೊಲೆ ಮಾಡಿಬಿಡುವ ಎಂದು ಕೊಲೆಯ ನಿರ್ಧಾರ ಮಾಡಿರುವ ಪಲ್ಲವಿ.

ಬೆಂಗಳೂರಿನಲ್ಲಿ ಕರೋನಾಗೆ ಮೊದಲ ಬಲಿ: ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ 38ಕ್ಕೆ ಏರಿಕೆ!

Leave a Reply

Your email address will not be published. Required fields are marked *